
ಚಾಮರಾಜನಗರ ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆ ಗ್ರಾಮದಲ್ಲಿಎಲ್ಲೆಂದರಲ್ಲಿ ಬಿದ್ದಿರುವ ಕಸ, ಗ್ರಾಮದ ಎಲ್ಲಾ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ, ಪ್ರತಿನಿತ್ಯ ಇದನ್ನು ನೋಡಿಕೊಂಡು ಮೂಗು ಮುಚ್ಚಿ ಓಡಾಡುವ ಗ್ರಾಮಸ್ಥರು.
ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮ ಪಂಚಾಯತಿಯಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚರಂಡಿಗಳು, ತೊಂಬೆಗಳೂ ಹಾಗೂ ಕೆರೆ ಕಟ್ಟೆಗಳು ಕಲುಷಿತಗೊಂಡು, ಗಬ್ಬುನಾರುತ್ತಿದೆ ಇದನ್ನು ನೋಡಿದರೂ ಸಹ ನೋಡದ ಹಾಗೆ ಜಾಣ ಕುರುಡುತನ ಮೆರೆಯುತ್ತಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಚುನಾಯಿತ ಗ್ರಾಮ ಪಂಚಾಯ್ತಿ ಜನಪ್ರತಿನಿಧಿಗಳು
ಈಗ ನೋಡಿದರೆ ಹೊಸ ವೈರಸ್ ಗಳ ಹಾವಳಿ ಇನ್ನು ಚಳಿಗಾಳ ಸಹ ಯಥೇಚ್ಛವಾಗಿದೆ. ಇದರಿಂದ ಸ್ವಚ್ಛವಾಗಿದ್ದರೂ ಸಹ ರೋಗರು ರುಜಿನಿಗಳು ಬರುವ ಕಾಲ ಇದಾಗಿದೆ ಅಂತಹದರಲ್ಲಿ ಈ ರೀತಿಯಾಗಿ ಊರೆಲ್ಲಾ ಅತಶುಚಿತ್ವದಿಂದ ಕೂಡಿದ್ದರೆ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ರೋಗ ರುಜಿನಿಗಳು ಅತಿ ಹೆಚ್ಚಾಗಿ ಬರುವ ಸಾಧ್ಯತೆಗಳು ಇದೆ ಆದ್ದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆದಷ್ಟು ಬೇಗ ಕ್ರಮ ತೆಗೆದು ಸ್ವಚ್ಛತಾ ಕಾರ್ಯಕ್ರಮಗಳನ್ನು ಮಾಡಿ ಮುಂದಿನ ದಿನಗಳಲ್ಲಿ ಗ್ರಾಮಕ್ಕೆ ಬರುವಂತಹ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ಚರಂಡಿಗಳು, ನೀರಿನ ತೊಂಬೆ ಹಾಗೂ ಕೆರೆಕಟ್ಟೆಗಳು ಸ್ವಚ್ಛತೆ ಮಾಡಬೇಕೆಂದು ಗ್ರಾಮಸ್ಥರ ಕೋರಿಕೆಯಾಗಿದೆ, ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಸ್ವಚ್ಛತೆ ಕಾಪಾಡುವಂತೆ ಪಂಚಾಯ್ತಿ ಅಧಿಕಾರಿಗಳಿಗೆ ತಿಳಿಸಬೇಕೆಂದು ಮನವಿ.
ವರದಿ ಉಸ್ಮಾನ್ ಖಾನ್
