ವಿಜಯಪುರ ಜಿಲ್ಲೆಯ ಇಟಂಗಿಹಾಳ ಗ್ರಾಮದಲ್ಲಿ ಸುಮಾರು 150 ಎಕರೆ ಭೂಮಿಯಲ್ಲಿ ವೈನ್ ಪಾರ್ಕ್ ಹಾಗೂ ಮೈಸೂರ್ ಸ್ಯಾಂಡಲ್ ಸೋಪ್ ಘಟಕವನ್ನು ನಿರ್ಮಾಣ ಮಾಡುವುದಕ್ಕಾಗಿ 100 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಬೇಕೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒತ್ತಾಯಿಸಿದ್ದಾರೆ.
ವಿಜಯಪುರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ, “ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಾನು ಈ ವಿಷಯವನ್ನು ಪ್ರಸ್ತಾಪಿಸಿದ್ದೇನೆ ಸಚಿವ ಎಂಬಿ ಪಾಟೀಲ್ ಅವರು ಈ ಯೋಜನೆಗೆ ಬೆಂಬಲ ನೀಡುತ್ತಿದ್ದು, ಅನುದಾನ ಮಂಜೂರು ಮಾಡುವುದಕ್ಕೆ ಒತ್ತಡ ಹೇರಬೇಕಾಗಿದೆ” ಎಂದು ಹೇಳಿದರು.
ಇಟಂಗಿಹಾಳ ಗ್ರಾಮದಲ್ಲಿ ವೈನ್ ಪಾರ್ಕ್ ನಿರ್ಮಾಣದಿಂದ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಯಾಗುವುದಾಗಿ ಹಾಗೂ ಮೈಸೂರಿನಲ್ಲಿರುವ ಸ್ಯಾಂಡಲ್ ಸೋಪ್ ಉದ್ಯಮದ ಮತ್ತೊಂದು ಘಟಕವು ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗುವುದಾಗಿ ಅವರು ಅಭಿಪ್ರಾಯಪಟ್ಟರು.
ಅಲ್ಲದೆ, “ಪ್ರತಿಷ್ಠಿತ ಯೋಜನೆಗಳ ಮೂಲಕ ವಿಜಯಪುರ ಜಿಲ್ಲೆಯ ಆರ್ಥಿಕ ಪ್ರಗತಿಗೆ ಪೂರಕ ಕೆಲಸ ಮಾಡಬೇಕಾಗಿದೆ” ಎಂದು ಯತ್ನಾಳ ತಮಗೆಂದು ಹೇಳಿದರು.
ಈ ಯೋಜನೆಗಳಿಗೆ ಸರ್ಕಾರದಿಂದ ಸೂಕ್ತ ಅನುದಾನ ಮಂಜೂರಾದರೆ, ವಿಜಯಪುರ ಭಾಗದ ಅಭಿವೃದ್ಧಿಯ ಕನಸು ಸಾಕಾರಗೊಳ್ಳಬಹುದು ಎಂದು ಅವರು ಹೇಳಿದರು.
ವರದಿ – ಮುಜೀಬ್ ಅಫಜಲಪುರ
