ಯಾದಗಿರಿ/ಶಹಾಪುರ: ಎರಡು ದಿನಗಳ ಹಿಂದೆ ಜೇವರ್ಗಿಯಲ್ಲಿ ನಮ್ಮ ಸಮಾಜದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ ಕಾರಣ ಮನನೊಂದು ಬಾಲಕಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸದರಿ ವಿಷಯಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಹುಡುಗನಿಗೆ ತಕ್ಕ ಶಿಕ್ಷೆಯನ್ನು ನೀಡಲು ಆಗ್ರಹಿಸಿ ಅ.ಭಾ.ವೀ.ಲಿಂ.ಮಹಾಸಭೆಯ ತಾಲೂಕು ಘಟಕದಿಂದ ಮಾನ್ಯ ತಹಶೀಲ್ದಾರರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲು ನಿರ್ಧಾರ ಮಾಡಿದ್ದು, ತಾವೆಲ್ಲರೂ ದಿ.13.01.2025 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ತಹಶೀಲ್ದಾರರ ಕಾರ್ಯಾಲಯ ಶಹಾಪುರ ಇಲ್ಲಿಗೆ ಆಗಮಿಸಿ ನೊಂದ ಕುಟುಂಬಕ್ಕೆ ನೈತಿಕ ಬೆಂಬಲವನ್ನು ಸೂಚಿಸಲು ಮನವಿ ಎಂದು ಅಧ್ಯಕ್ಷರು ಅ.ಭಾ.ವೀ.ಲಿಂ ಮಹಾಸಭೆ ತಾಲ್ಲೂಕು ಯುವ ಘಟಕ ಶಹಾಪುರ ಇವರು ಮನವಿ ಮಾಡಿದ್ದಾರೆ.
ವರದಿಗಾರರು: ಚೇತನ ಹಿರೇಮಠ
