ಶಹಾಪುರ:ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅಖಿಲ ಭಾರತ ವೀರಶೈವ ಲಿಂಗಾಯತ ಸಮಾಜದ ಯುವತಿಯ ಆತ್ಮಹತ್ಯೆ ಖಂಡಿಸಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಮಾನ್ಯ ಮುಖ್ಯಮಂತ್ರಿಗಳಿಗೆ ಮಾನ್ಯ ತಹಶೀಲ್ದಾರ ಶಹಾಪುರ ರವರ ಮುಖಾಂತರ ಸಮಸ್ತ ವೀರಶೈವ ಸಮಾಜದ ವತಿಯಿಂದ ಈ ಒಂದು ದುಷ್ಕೃತ್ಯವನ್ನು ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕಾಗಿ ಹೋರಾಟದ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅ.ಭಾ.ವಿ.ಲಿಂ ಮಹಾಸಭಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಹಿತೈಷಿಗಳು, ಯುವಕರು ಉಪಸ್ಥಿತರಿದ್ದರು.
ವರದಿ :ಚೇತನ. ಹಿರೇಮಠ
