ಮಕರ ಸಂಕ್ರಾಂತಿ ಮತ್ತೆ ಬಂತು
ಮನಕೆ ಸಡಗರ ಸಂತಸ ತಂತು
ಬಲಿತ ಧಾನ್ಯದ ಸುಗ್ಗಿ ಆಯಿತು
ರೈತರ ಬಾಳಿಗೆ ಖುಷಿ ತಂದಿತು.
ಕಣವ ಸಾರಿಸಿ ಧಾನ್ಯಗಳ ಇರಿಸಿ
ಎತ್ತು, ಬಂಡಿ,ನೇಗಿಲನು ಪೂಜಿಸಿ
ನಲಿಯುತ ಹೊಸ ಬಟ್ಟೆಯ ಧರಿಸಿ
ಬಂಧು ಬಾಂಧವರ ಮನೆಗೆ ಕರೆಸಿ.
ಕಟ್ಟಿ ಬಾಗಿಲಿಗೆ ತಳಿರಿನ ತೋರಣ
ಬಿಡಿಸಿ ಅಂಗಳಕ್ಕೆ ರಂಗೋಲಿ ಚಿತ್ರಣ
ಮಾಡಿ ಎಳ್ಳು ಬೆಲ್ಲ ಬೇವು ಮಿಶ್ರಣ
ಹಂಚಿ ಸವಿಯಲು ಸಿಹಿ ಹೂರಣ.
ಎಳ್ಳು ಬೆಲ್ಲವ ಬೀರಿ ಒಳ್ಳೆಯ ಮಾತಾಡಿ
ಓಳಿಗೆ ತುಪ್ಪದ ಭಕ್ಷೃಭೋಜನ ಮಾಡಿ
ಅಜ್ಞಾನದ ಅಂಧಕಾರ ಹೊರಗೆ ದೂಡಿ
ಸಾಗಬೇಕು ಸಾಮರಸ್ಯದ ಮಂತ್ರ ಆಡಿ.

- ಬ್ಯಾಡನೂರು ವೀರಭದ್ರಪ್ಪ ಶಿವಶರಣ, ಎಸ್.
(ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಪಾವಗಡ ತಾಲ್ಲೂಕು, ತುಮಕೂರು ಜಿಲ್ಲೆ.
ದೂರವಾಣಿ ಸಂಖ್ಯೆ: 9740199896.
