
ಬಾಗಲಕೋಟೆ : ರಬಕವಿ – ಬನಹಟ್ಟಿ : ಬಾಗಲಕೋಟೆ ಜಿಲ್ಲಾ ಪೊಲೀಸ್ ಹಾಗೂ ಜಮಖಂಡಿ ಉಪ ವಿಭಾಗ ಮತ್ತು ಬನಹಟ್ಟಿ ಪೊಲೀಸ್ ಠಾಣೆ ಜಂಟಿ ಆಶ್ರಯದಲ್ಲಿ , ಬನಹಟ್ಟಿ ನಗರದ ಕುಡಚಿ – ಜಮಖಂಡಿ ರಾಜ್ಯ ಹೆದ್ದಾರಿಯ ಆಟೋ ಚಾಲಕರಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮದ ಬಗ್ಗೆ ಜಾಗೃತಿಯನ್ನು ಮೂಡಿಸಿದರು.
ನಂತರ ನಗರದ ಪೊಲೀಸ್ ಠಾಣಾಧಿಕಾರಿ ಶಾಂತಾ ಹಳ್ಳಿ ಅವರು ಬಸ್ ನಿಲ್ದಾಣದಲ್ಲಿ ಜನ-ಸಾಮಾನ್ಯರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ 2025 ರ ಕಾರ್ಯಕ್ರಮದ ಬಗ್ಗೆ ಅರಿವು ನೀಡಿದರು.
ಈ ಸಂದರ್ಭದಲ್ಲಿ ಪೊಲೀಸ್ ಪೇದೆಗಳಾದ ಕುಂಬಾರ್ ಅವರು ಸೇರಿದಂತೆ ಇನ್ನೂ ಅನೇಕರು ಉಪಸ್ಥಿತರಿದ್ದರು.
