ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕಾನಮಡಗು ಗ್ರಾಮದಲ್ಲಿ ಶ್ರೀ ಸಿದ್ದಲಿಂಗೇಶ್ವರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ದಿ.20-1-2025 ರ ಸೋಮವಾರದಂದು 2001 – 2002 ನೇ ಸಾಲಿನ ಪಿ.ಯು.ಸಿ ಹಳೆ ವಿದ್ಯಾರ್ಥಿಗಳು ಆಯೋಜಿಸಿದ್ದ ಗುರು ವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ತಂದೆ ತಾಯಿ, ಗುರುಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಗುರುಗಳು ಮಾರ್ಗದರ್ಶನ ಶಿಕ್ಷಣವನ್ನು ಜೀವನದ ಪಾಠ ಕಲಿಸುವಂತಹ ಹಲವಾರು ವಿಷಯಗಳನ್ನು ಅವರು ರೂಪಿಸಿಕೊಟ್ಟಿರುತ್ತಾರೆ ತಂದೆ ತಾಯಿಯರು ಜೀವನದ ಮೌಲ್ಯಗಳ ಪಾಠವನ್ನು ಕಲಿಸಿದರೆ ಗುರುಗಳು ಮುಂದಿನ ಭವಿಷ್ಯದ ಬಗ್ಗೆ ಹಾಗೂ ಜೀವನದ ಅಂಶಗಳು ಹಾಗೂ ತಿದ್ದಿ-ತೀಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತಾರೆ ಅಂತಹ ಗುರುಗಳಿಗೆ ಒಂದು ಭಾವನಾತ್ಮಕ ಸಂಬಂಧನೇ ಈ ಕಾರ್ಯಕ್ರಮ ಸಾಕ್ಷಿ ಆಗಬೇಕು ಹೇಳಬಹುದು ಎಷ್ಟೋ ಗುರುಗಳಿಗೆ ಈ ಕಾರ್ಯಕ್ರಮ ತುಂಬಾ ಉನ್ನತ ಹಾಗೂ ಭಾವನಾತ್ಮಕ ಸಂಬಂಧವನ್ನು ಪ್ರೇರೇಪಿಸಲಾಯಿತು ಸಾಕ್ಷಿಯಾಗಿದೆ, ಶಿಕ್ಷಣ ಜೊತೆ ಸಂಸ್ಕಾರವನ್ನು ಕಲಿಸುವಂತಹ ಶಿಕ್ಷಕರಿಗೆ ಹಾಗೂ ಯಾವ ಸನ್ಮಾನ ಮಾಡಿದರೂ ಅವರಿಗೆ ಸಾಲದು ಜೀವನದ ಮೌಲ್ಯವನ್ನೇ ತಿದ್ದುವಂತಹ ಶಿಕ್ಷಕರ ಕೆಲಸ ಆಗಿರುತ್ತೆ ಅಂತಹ ಶಿಕ್ಷಕರಿಗೆ ವಿದ್ಯಾರ್ಥಿಗಳು ಒಂದು ಚಿಕ್ಕ ಅಳಿಲು ಸೇವೆ ಮಾಡಲು ಈ ಕಾರ್ಯಕ್ರಮ ಸಾಕ್ಷಿ ಆಗಲಿದೆ ,ಸಿದ್ದಲಿಂಗೇಶ್ವರ ಸಮನ್ವಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜಪ್ಪ ಸರ್ ಅವರು ಪುಸ್ತಕದ ಸೀಮಿತವಾಗಿರುವುದಿಲ್ಲ ವಿದ್ಯಾರ್ಥಿಗಳ ಜೀವನದ ಏರುಪೇರುಗಳಿಗೆ ಸಹ ಸಾಕ್ಷಿಯಾಗಿರುತ್ತಾನೆ ಮನೆಯಲ್ಲಿ ತಂದೆ ತಾಯಿ ಬುದ್ದಿ ಹೇಳುವಷ್ಟು, ನಂತರ ಸ್ಥಾನವನ್ನು ತುಂಬಲು ಗುರು ಸಾಕ್ಷಿಯಾಗುತ್ತಾನೆ ಅದನ್ನು ಅರಿತು ಬಾಳಿದವರು ಆಕಾಶವನ್ನೇ ಮುಟ್ಟಿ ಬರುವಷ್ಟು ಎತ್ತರ ಮಟ್ಟಕ್ಕೆ ಬೆಳೆಯುತ್ತಾರೆ ಗುರುವಿಲ್ಲದೆ ಯಾವ ವ್ಯಕ್ತಿಯೂ ಸಾಧನೆಯು ಅಸಾಧ್ಯ ಎನ್ನಬಹುದು ಜೀವನದಲ್ಲಿ ತಂದೆ ತಾಯಿ ಗುರುವಾದರೇ ಶಿಕ್ಷಣದ ಮೌಲ್ಯವನ್ನು ಪ್ರೇರೇಪಿಸುವ ಶಿಕ್ಷಕನಾಗುತ್ತಾನೆ ಅಂತಹ ಗುರು ಮತ್ತು ಶಿಷ್ಯರ ಮಧ್ಯೆ ಅಪರವಾದಂತಹ ಸಂಬಂಧವನ್ನು ಹೊಂದಿರುತ್ತಾರೆ
ಎಂದು ಹಳೆಯ ವಿದ್ಯಾರ್ಥಿಗಳು ತಮ್ಮ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಗುರುವಂದನಾ ಕಾರ್ಯಕ್ರಮದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ತಮ್ಮ ಗುರುಗಳನ್ನು ಟ್ರ್ಯಾಕ್ಟರ್ ನಲ್ಲಿ ಸಕಲ ವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಕರೆ ತರಲಾಯಿತು. ಆ ದಿನ ಕಾನಮಡಗು ಗ್ರಾಮದಲ್ಲಿ ಹಬ್ಬದ ವಾತಾವರಣ ತುಂಬಿತ್ತು ಎಂದು ಹೇಳಬಹುದು.
ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಸಂತಸವನ್ನು ಹಂಚಿಕೊಂಡರು 2001ನೇ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಕುರಿತು ಆ ದಿನಗಳ ನೆನಪುಗಳನ್ನು ಸ್ಮರಿಸುತ್ತಾ ಆ ವೇದಿಕೆಗೆ ಒಂದು ಸಂತಸದ ವಾತಾವರಣವನ್ನು ತುಂಬಿಸಿದರು
ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ಧಲಿಂಗೇಶ್ವರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ನಾಗಲಿಂಗಪ್ಪ ಅವರು ಮಾತನಾಡುತ್ತಾ ಗುರು ಶಿಷ್ಯರ ಸಂಬಂಧ ಜನ್ಮ ಜನ್ಮದ ಅನುಬಂಧ ಎಂದೆಂದೂ ಮರೆಯಲಾಗದ ಈ ಬಂಧ ಶಿಷ್ಯರ ಸಂಬಂಧ ಶಿಷ್ಯ ಮತ್ತು ಗುರುವಿನ ನಡುವೆ ಸಂಬಂಧವನ್ನೇ ರೂಪಿಸಿ ಆ ಸಂಬಂಧಕ್ಕೆ ಜೀವನ ತುಂಬುವಂತಹ ಮಾತುಗಳನ್ನು ತನ್ನ ಹೃದಯಾಳದಿಂದ ಮಾತುಗಳಲ್ಲಿ ಹೊರ ಹಾಕಿದರು, ಸಮಾಜಕ್ಕೆ ಉತ್ತಮ ನಾಗರಿಕರನಾಗಿ ತಪ್ಪು ಒಪ್ಪುಗಳನ್ನು ತಿದ್ದಿ ವಿದ್ಯಾರ್ಥಿಗಳು ಕಲ್ಲಿನಂತೆ ಇದ್ದರು ಅವರನ್ನು ಒಂದು ಸುಂದರ ಶಿಲ್ಪಿಯನ್ನಾಗಿ ಸಮಾಜಕ್ಕೆ ಕೊಡುಗೆಯಾಗಿ ನೀಡುತ್ತಾರೆ ಅಂತಹ ಗುರು ಶಿಷ್ಯರ ಮಧ್ಯೆ ಸಂಬಂಧವನ್ನು ಎಂದಿಗೂ ಮರೆಯಲಾಗದು ಎಂದರು.
ಕಾರ್ಯಕ್ರಮದ ಪ್ರಾರ್ಥನೆ ರೈತ ಗೀತೆಯೊಂದಿಗೆ ಹಂಸಗಾನ ಕಲಾಬಳಗದ ಗಂಗಾಧರ್ ದಿನೇಶ್ ರವರಿಂದ ನಡೆಯಿತು, ನಾಗೇಶ್ ಶಿಕ್ಷಕರು ಸ್ವಾಗತ ಭಾಷಣವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು, ದಿನೇಶ್ ಬಿ ಚಿತ್ರದುರ್ಗ ಪ್ರಾಸ್ತಾವಿಕ ನುಡಿ, ಹಾಗೂ ಆಶಯ ನುಡಿಗಳನ್ನು ಶ್ರೀಮತಿ ಮಂಜುಳಾ ಬಿ ಎಂ ಕನ್ನಡ ಉಪನ್ಯಾಸಕರು ನೆರವೇರಿಸಿಕೊಟ್ಟರು.
ಡಾಕ್ಟರ್ ಕೆ ಸಿ ಶರಣಪ್ಪ, ಎ ಎಸ್, ಬಿ ಎಂ ಮಂಜುಳಾ, ಮಹಾಂತೇಶ್, ಜಿ ಬಿ ನಾಗರಾಜ್, ಎಚ್ ಮ್ ರಾಜೇಂದ್ರ, ಗಿರಿಜಮ್ಮ, ಪ್ರಕಾಶ್, ಸ ಹಿ ಪ್ರಾ ಶಾಲೆಯ ಮುಖ್ಯ ಶಿಕ್ಷಕ ಶೇಖರಪ್ಪ, ಪ್ರೌಢಶಾಲೆ ದೈಹಿಕ ಶಿಕ್ಷಣ ಶಿಕ್ಷಕ ಶ್ರೀನಿವಾಸ್, ಶಫೀವುಲ್ಲಾ (ಕವಿ), ಚಿದಾನಂದಪ್ಪ, ಕಾಲೇಜ್ ಉಪನ್ಯಾಸಕರು, ಸಿಬ್ಬಂದಿ ಹಳೆ ವಿದ್ಯಾರ್ಥಿಗಳಾದ ವನಜಾಕ್ಷಿ, ತಿಪ್ಪೇಸ್ವಾಮಿ, ನಾಗೇಶ್, ಇನ್ನೂ ಮುಂತಾದ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಊರಿನ ಪ್ರಮುಖ ಮುಖಂಡರು ಹಾಗೂ ಅಲ್ಲಿನ ಗ್ರಾಮಸ್ಥರು ಅದ್ದೂರಿಯಾಗಿ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.
ವರದಿ : ಗುರುರಾಜ ಎಲ್, ಕಲ್ಲಹಳ್ಳಿ ಟಿ
