ಶಿವಮೊಗ್ಗ : ಸಹಚೇತನ ನಾಟ್ಯಾಲಯ (ರಿ.) ಶಿವಮೊಗ್ಗ ಇವರ ಆಶ್ರಯದಲ್ಲಿ ಹಿಂದೂ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಶ್ರೀ ಅಜಿತ್‌ಕುಮಾರ್‌ರವರ ಪುಣ್ಯತಿಥಿಯ ನಿಮಿತ್ತ ‘ಸೇವಾ ದಿನ’ದ ಅಂಗವಾಗಿ “ಭಾರತೀಯಂ-14” ಹಾಗೂ 14ನೇ ಅಜಿತಶ್ರೀ ಪುರಸ್ಕಾರ ಪ್ರದಾನ ಸಮಾರಂಭವನ್ನು ಶಿವಮೊಗ್ಗದ ಕರ್ನಾಟಕ ಸಂಘದಲ್ಲಿ ಏರ್ಪಡಿಸಲಾಗಿದೆ.
ದಿ. 25ನೇ ಜನವರಿ 2025ರ ಸಂಜೆ 5.30ರಿಂದ ಜರುಗುವ ಕಾರ್ಯಕ್ರಮದಲ್ಲಿ ಸಂಸ್ಥೆಯ ಗೌರವಾಧ್ಯಕ್ಷ ಹಾಗೂ ಶಿವಮೊಗ್ಗ ಶಾಸಕರಾದ ಶ್ರೀ ಎಸ್ ಏನ್ ಚನ್ನಬಸಪ್ಪ ಅವರು ವಹಿಸುವರು. ಶಿವಮೊಗ್ಗ ಹೆಚ್ಚುವರಿ ಪೊಲೀಸ್ ವರಿಷ್ಠಧಿಕಾರಿ ಶ್ರೀ ಅನಿಲ್ ಕುಮಾರ್ ಬೂಮರೆಡ್ಡಿ, ವಿಕಾಸ ಟ್ರಸ್ಟ್ ಖಜಾಂತಿ ಶ್ರೀ ಎಸ್ ಆರ್ ಶ್ರೀನಿವಾಸ್ ಇವರುಗಳು ಮುಖ್ಯ ಅತಿಥಿಗಳಾಗಿ ಆಗಮಿಸುವರು.
ನೃತ್ಯಗುರು ಸಹನಾ ಚೇತನ್ ಕಾರ್ಯದರ್ಶಿ, ಸಹಚೇತನ ನಾಟ್ಯಾಲಯ(ರಿ.) ಇವರು ಉಪಸ್ಥಿತರಿರುವ ಕಾರ್ಯಕ್ರಮದಲ್ಲಿ ಡಾ || ಎನ್.ಎಲ್. ನಾಯಕ್, ವೈದ್ಯಕೀಯ ಹಾಗೂ ಯೋಗ ಸೇವೆ, ಶ್ರೀ ರಾಘವೇಂದ್ರ ಎ.ಎಸ್, ಬಸವಾನಿ, ಸಮಾಜ ಸೇವೆ, ಶ್ರೀ ಶರಣ್ಯ (ಡಿ.ಎಸ್.ಎಲ್. ಟ್ರಸ್ಟ್ (ರಿ.)ನ ಸೇವಾ ಯೋಜನೆ), ನೋವು ಉಪಶಮನ ಆರೈಕೆ ಹಾಗೂ ಸಂಶೋಧನಾ ಕೇಂದ್ರ ಇವರುಗಳಿಗೆ ಅಜಿತಶ್ರೀ ಪುರಸ್ಕಾರ ಪ್ರಶಸ್ತಿ ಪ್ರಧಾನ ಮಾಡುವುದಲ್ಲದೆ ಹಿಂದುಳಿದ ಬಡಾವಣೆ ಹಾಗೂ ಸರ್ಕಾರಿ ಶಾಲಾ ಮಕ್ಕಳಿಂದ ನೃತ್ಯ ರೂಪಕವನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ
