ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸದಾಶಿವ ನಗರ ಶಾಲೆಯಲ್ಲಿ ಬಹುತ್ವ ಭಾರತ ಫೌಂಡೇಶನ್ ಹನಗಂಡಿ ವತಿಯಿಂದ ರಾಷ್ಟೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು. ಶಿಕ್ಷಕಿ ಶ್ರೀಮತಿ ಎಸ್ ವೈ ಕೌಜಲಗಿ ಅವರು ಮಾತನಾಡಿ ಮಹಿಳೆ ಇಂದು ಎಲ್ಲಾ ರಂಗದಲ್ಲಿಯೂ ಸಾಧನೆ ಮಾಡಿರುತ್ತಾಳೆ ಎಂದರು. ಎನ್ ಎಮ್ ಹುನಷ್ಯಾಳ್ ಶಿಕ್ಷಕರು ಮಾತನಾಡಿ ಹೆಣ್ಣು ಅಬಲೆಯಲ್ಲ, ಸಮಬಲೆ ಆಗಿದ್ದಾಳೆ. ವಿ ಬಿ ಶಿಂದೆ ಅವರು ಮಾತನಾಡಿ ಹೆಣ್ಣು ಸಂಸ್ಕೃತವಂತಳು ಮನೆಗೆ ಕೀರ್ತಿ ತರುವವಳು ಹೆಣ್ಣು ಎಂದರು. ಚಿರಂಜೀವಿ ರೋಡಕರ್ ಶಿಕ್ಷಕರು ಅಂಬೇಡ್ಕರ್ ರಚಿಸಿದ ಕಾನೂನು ಹೆಣ್ಣು ಮಕ್ಕಳು ಇಂದು ಸುರಕ್ಷಿತವಾಗಿ, ಎಲ್ಲಾ ಸೌಲಭ್ಯ ಪಡೆದುಕೊಂಡು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಹೇಳಿದರು. ಮುಖ್ಯ ಗುರುಮಾತೆ ಪಿ ಬಿ ಆಲಗೂರು ಅವರು ಹೆಣ್ಣು ಮಕ್ಕಳು ಶಿಕ್ಷಣ ಪಡೆದು ಉನ್ನತ ಸ್ಥಾನಕ್ಕೆರಿ ತಂದೆ ತಾಯಿಗೆ ಕೀರ್ತಿ ತರಬೇಕು ಎಂದು ಹೇಳಿದರು. ಎಸ್ ಎನ್ ಪೋಳ ಶಿಕ್ಷಕಿ ಸ್ವಾಗತಿಸಿದರು. ವಿ ಸಿ ಕೋಷ್ಠಿ ಶಿಕ್ಷಕಿ ನಿರೂಪಿಸಿ ವಂದಿಸಿದರು. ಶಾಲೆಯ ಎಲ್ಲ ಹೆಣ್ಣು ಮಕ್ಕಳು ತಮ್ಮ ಕೈಗೆ ಗುಲಾಬಿ ರಿಬ್ಬನ್ ಕಟ್ಟಿ, ಸಿಹಿ ಹಂಚಿ ಸಂಭ್ರಮಿಸಿದರು.
