ಹನೂರು: ಪಟ್ಟಣದ ಹನೂರು ಶ್ರೀ ಜಿ ವಿ ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹನೂರು ತಾಲ್ಲೂಕು ಆಡಳಿತ, ಕಾನೂನು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು .ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಾಮರಾಜನಗರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಕೊಳ್ಳೇಗಾಲ ಹಾಗೂ ಜಿ ವಿ ಗೌಡ ಕಾಲೇಜು ಸಹಯೋಗದೊಂದಿಗೆ 15 ನೇ ಮತದಾರರ ದಿನಾಚರಣೆ ಹಾಗೂ ಕಾನೂನಿನ ಅರಿವು ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಅಪರ ಸಿವಿಲ್ ನ್ಯಾಯಾಧೀಶರಾದ ನಂದಿನಿ ಎಂ ಎನ್ ರವರು ಉದ್ಘಾಟಿಸಿ ಮಾತನಾಡಿದರು. ಸಂವಿಧಾನ, ಪ್ರಜಾಪ್ರಭುತ್ವ, ಮತದಾನ ಇವುಗಳ ಮೌಲ್ಯಗಳನ್ನು ಭಾರತದ ಪ್ರತಿಯೊಬ್ಬ ಪ್ರಜೆಗಳು ತಿಳಿದುಕೊಳ್ಳಬೇಕು.
ನಮ್ಮ ಸಂವಿಧಾನದ ಆಶಯಗಳು ಶ್ರೇಷ್ಟವಾದದ್ದು. ಸಂವಿಧಾನವು ಸಮಾಜವಾದ, ಜಾತ್ಯಾತೀತ, ಪ್ರಜಾಸತ್ತಾತ್ಮಕ, ಗಣರಾಜ್ಯವಾಗಿದೆ. ನಾವೆಲ್ಲರೂ ಕೂಡ ಸಂವಿಧಾನದಡಿಯಲ್ಲಿ ಬದುಕಬೇಕಾಗಿದೆ.
ಈ ದೇಶದ ಪ್ರಜೆಗಳು ಮತದಾನದ ಅರಿವನ್ನು ಮೂಡಿಸಿಕೊಳ್ಳಬೇಕಾಗಿದೆ. ಯಾವುದೇ ಆಮಿಷಗಳಿಗೆ ಒಳಗಾಗದೆ ನಿರ್ಭೀತಿಯಿಂದ ಮತದಾನ ಮಾಡಬೇಕು ಅವಾಗ ಈ ದೇಶ ಪ್ರಬುದ್ದ ಭಾರತವಾಗುತ್ತದೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು ಈ ರಾಷ್ಟ್ರದ ಅಭಿವೃದ್ಧಿ ನಮ್ಮ ಮತದಿಂದ ನಿರ್ಧಾರಗೊಳ್ಳುತ್ತದೆ ಅದರಿಂದ ಪ್ರತಿಯೊಬ್ಬರೂ ಚಿಂತಿಸಿ ಮತ ಚಲಾಯಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಉಳಿಸಬೇಕಾಗಿದೆ ಎಂದರು.
ತಾಲ್ಲೂಕು ಆಡಳಿತದಿಂದ ಬಿ ಎಲ್ ಒ ಗಳಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ವೈ ಕೆ, ಗುರುಪ್ರಸಾದ್, ಪ್ರಾಂಶುಪಾಲರಾದ ಲಾಜರಸ್, ಉಪ ತಹಿಶೀಲ್ದಾರ್ ಸುರೇಖಾ, ವಕೀಲ ಸಂಘದ ಕಾರ್ಯದರ್ಶಿ ಸಿ ಬಿ ಮಹೇಶ್ ಕುಮಾರ್, ವಕೀಲರಾದ ಚಿನ್ನರಾಜು, ರೋಹಿತ್ ಕುಮಾರ್, ಉಪನ್ಯಾಸಕರಾದ ಫರ್ಹಾನ ಬೇಗಂ, ಕುಸುಮ, ಸವಿತಾ, ಶಿವಕುಮಾರ್, ಮಹೇಂದ್ರ, ಸುಮತಿ, ದೇವಿಕಾ, ಹಾಗೂ ಆಡಳಿತ ಸಿಬ್ಬಂದಿಗಳಾದ ಪ್ರಭು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ವರದಿ ಉಸ್ಮಾನ್ ಖಾನ್
