ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹೆಸ್ಕಾಂ ಕಛೇರಿ ಲಚ್ಯಾಣದಲ್ಲಿ 76ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಲಚ್ಯಾಣ ಶಾಖೆಯ ಶಾಖಾಧಿಕಾರಿಗಳಾದ ಶ್ರೀ ಆರ್ ಆರ್ ಲಾಳಸಂಗಿ ಯವರು ಧ್ವಜಾರೋಹಣವನ್ನು ನೆರವೇರಿಸಿದರು. ನಂತರ ಮಾತನಾಡಿ ಎಲ್ಲಾ ಪವರ್ ಮೆನ್ ಗಳು ಯಾವದೇ ಒಂದು ಕೆಲಸ ಮಾಡುವಾಗ ಕಂಪನಿ ಯಿಂದ ನೀಡಿದ ಸೇಫ್ಟಿ ಸಲಕರಣೆಯನ್ನು ಉಪಯೋಗಿಸಿಕೊಂಡು, ಯಾವುದೇ ಅನಾಹುತ ಆಗದ ಹಾಗೆ ಮುಂಜಾಗ್ರತೆ ವಹಿಸಿ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು. ಅದೇ ತರಹ ಕಂಪನಿ ಆರ್ಥಿಕತೆಯ ದೃಷ್ಟಿಯಿಂದ ಎಲ್ಲರೂ ಸೇರಿಕೊಂಡು ಕಂದಾಯ ವಸೂಲಾತಿಯನ್ನು ಹಾಗೂ ಬಾಕಿ ಇರುವ ಎಲ್ಲಾ ಸ್ಥಾವರಗಳ ಬಾಕಿಯನ್ನು ವಸೂಲಾತಿಯನ್ನೂ ಮಾಡಬೇಕೆಂದು ತಿಳಿಸಿದರು. ಹಾಗೂ 11 ಕೆ.ವಿ ಮಾರ್ಗಗಳಲ್ಲಿ ಯಾವುದಾದರೂ ಕಂಬಗಳು ಹಾಳಾಗಿದ್ದಾರೆ ಅಥವಾ ವಾಯರ್ ಗಳು ಹಳೆಯದಾಗಿದ್ದರೆ, ಅದನ್ನು ಜಿಪಿಎಸ್ ಫೋಟೋ ಸಮೇತ ನಮಗೆ ತಿಳಿಸಿದರೆ ನಾವು ಅದನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಅವಗಳನ್ನು ಸರಿಪಡಿಸಿ ಕೊಡುತ್ತೇವೆ ಎಂದು ಹೇಳಿದರು. ಅದೇ ತೆರನಾಗಿ ಮಾತನಾಡಿದ ಶ್ರೀ ಸಂತೋಷ್ ಬಣಗೊಂಡೆ ಇವರು ಲೈನ್ ಲಾಸ್ ಕಡಿಮೆ ಮಾಡಲು ಎಲ್ಲಿಯಾದರೂ ವಿದ್ಯುತ್ ಕಳ್ಳತನ ಕಂಡು ಬಂದರೆ ಅದನ್ನು ತಕ್ಷಣ ನಮ್ಮ ಶಾಖಾಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು. ಎಲ್ಲರೂ ಒಗ್ಗಟ್ಟಾಗಿ ಹಾಗೂ ಜಾಗೃತರಾಗಿ ಕೆಲಸ ನಿರ್ವಹಿಸಿ ಶಾಖೆಗೆ ಒಳ್ಳೆಯ ಹೆಸರು ತರೋಣ ಎಂದು ಹೇಳಿದರು. ನಂತರ ಮಾತನಾಡಿದ ಶ್ರೀ ಶಾಂತು ತೆನ್ನಳ್ಳಿ ಎಲ್ಲರಿಗೂ 76 ನೇ ಗಣರಾಜ್ಯೋತ್ಸವದ ಶುಭಾಶಯಗಳು ತಿಳಿಸಿದರು.
ಈ ಸಂದರ್ಭದಲ್ಲಿ ಲಚ್ಯಾಣ ಶಾಖೆಯ ಎಲ್ಲಾ ಪವರ್ ಮೆನ್ ಗಳು, ಗ್ರಾಮ ವಿದ್ಯುತ್ ಪ್ರತಿನಿಧಿಗಳು ಹಾಗೂ ಸ್ಟೇಷನ್ ಆಪರೇಟರ್ ಗಳು ಭಾಗವಹಿಸಿದ್ದರು.
ಶ್ರೀ ವಿಕಾಸ ಮುಜಾಗೊಂಡ ಇವರು ಕಾರ್ಯಕ್ರಮದ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನಡೆಸಿಕೊಟ್ಟರು.
- ಕರುನಾಡ ಕಂದ
