ಗದಗ: 76 ನೇ ಗಣರಾಜ್ಯೋತ್ಸವದ ಅಂಗವಾಗಿ ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದಲಿ ಗ್ರಾಮದ ಶ್ರೀ ಅಲ್ಲಮ ಪ್ರಭು ಯುವಕ ಮಂಡಳ ಹದಲಿ ಇವರ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನೆರವೇರಿತು.
ಕಾರ್ಯಕ್ರಮದಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಸಿಬ್ಬಂದಿ ವರ್ಗ, ಶಾಲಾ ಮಕ್ಕಳು, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗದವರು, ಗ್ರಾಮದ ಆಶಾ ಕಾರ್ಯಕರ್ತೆಯರು ಮತ್ತು ಶ್ರೀ ಅಲ್ಲಮ ಪ್ರಭು ಯುವಕ ಮಂಡಳದ ಪದಾಧಿಕಾರಿಗಳಾದ ಶ್ರೀ ಅಶೋಕ ಕಲಹಾಳ, ಶ್ರೀ ಬಸಪ್ಪ ಬದ್ನಿಕಾಯಿ, ಬಸವಂತಪ್ಪ ಹಾದಿಮನಿ, ಗದಿಗೆಪ್ಪ ಮಂತ್ರಿ, ಶಂಕ್ರಯ್ಯ ಸಾಲಿಮಠ, ವೀರಯ್ಯ ಹು.ಮಠ , ಬಸಪ್ಪ ಮಕ್ಕಿಕಾಯಿ, ಸಂಗಪ್ಪ ಮಂತ್ರಿ, ರುದ್ರೇಶ ಸುಂಕದ ಇನ್ನಿತರ ಗಣ್ಯ ಮಾನ್ಯರು ಹಾಗೂ ಯುವಕ ಮಂಡಳದ ಸರ್ವ ಯುವ ಪಡೆ ಭಾಗವಹಿಸಿ ಯಶಸ್ವಿಯಾಗಿ ನೆರವೆರಿಸಿದರು.
ವರದಿ : ನಾಗರಾಜ ಪ್ರಚಂಡಿ
