
ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಪಟ್ಟಣದ ಶ್ರೀ ಮಹಾದೇವ ಮೈಲಾರ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿರುವ, 76 ನೇ ಗಣರಾಜ್ಯೋತ್ಸವದಲ್ಲಿ ದಿ.26-01-2025 ರಂದು ರಾಷ್ಟ್ರ ಧ್ವಜ ಆರೋಹಣ ನೆರವೇರಿಸಿದ ಬಳಿಕ ಮಾತನಾಡುತ್ತಾ ಇಂದು ನಮ್ಮ ಮಹಾನ್ ರಾಷ್ಟ್ರದ 76 ನೇ ಗಣರಾಜ್ಯೋತ್ಸವವನ್ನು ಆಚರಿಸಲು ನಾವು ಒಟ್ಟುಗೂಡುತ್ತೇವೆ, ಇದು 26 ಜನವರಿ 1950 ರಂದು ಭಾರತೀಯ ಸಂವಿಧಾನದ ಅನುಷ್ಠಾನವನ್ನು ಗುರುತಿಸುವ ದಿನವಾಗಿದೆ. ಈ ಐತಿಹಾಸಿಕ ದಿನವು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಪ್ರಜಾಪ್ರಭುತ್ವ, ಸಮಾನತೆಯ ಮೌಲ್ಯಗಳನ್ನು ನೆನಪಿಸುತ್ತದೆ, ಮತ್ತು ನ್ಯಾಯ,ನಮ್ಮ ಭಾರತ ವಿವಿಧ ರೀತಿಯಲ್ಲಿ ಹಂಚಿ ಹೋದದ್ದನ್ನೂ, ಗಮನದಲ್ಲಿಟ್ಟುಕೊಂಡು, ಸರ್ವ ರೀತಿಯಲ್ಲಿ ಸಾಮಾಜಿಕ ನ್ಯಾಯದ ಸಂವಿಧಾನ ಅಡಿಯಲ್ಲಿ ಪ್ರತಿಯೊಬ್ಬರು ಶ್ರಮಿಸುತ್ತಾ ಬಂದಿದ್ದಾರೆ. ಆಚರಿಸುತ್ತ ಬಾಬಾ ಸಾಹೇಬ ಅಂಬೇಡ್ಕರ್ ಅವರನ್ನು ಸ್ಮರಿಸುತ್ತಾ ಈ ದಿನ ಗಣರಾಜ್ಯೋತ್ಸವ ದಿನವನ್ನಾಗಿ ಆಚರಿಸುತ್ತಾ ಬಂದಿದ್ದೇವೆ ನಾವೆಲ್ಲರೂ, ನಮ್ಮ ತಂದೆಯವರು ಹಾಗೂ ಮಾಜಿ ಶಾಸಕರಾದ ದಿ. ಎನ್. ಟಿ. ಬೊಮ್ಮಣ್ಣನವರು ಅವರು ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದಲ್ಲಿ ಶಾಸಕರಾದ ವೇಳೆ ತಮ್ಮದೇ ಆದ ರೀತಿಯಲ್ಲಿ, ಆಯಾ ಊರುಗಳಿಗೆ ರಸ್ತೆ ಕಾಣದ ಊರುಗಳಿಗೆ ಮಣ್ಣಿನ ರಸ್ತೆಗಳನ್ನು ನಿರ್ಮಿಸಿದ್ದಾರೆ. ಇವತ್ತು ಅಂತಹ ರಸ್ತೆಗಳಿಗೆ ನಮ್ಮಿಂದ ಸಿಮೆಂಟ್ ರಸ್ತೆ, ಟಾರು ರಸ್ತೆ ನಿರ್ಮಿಸುವಂತದ್ದು ಸಂತಸ ತಂದಿದೆ. ತಂದೆಯ ಆಸೆಯ ನುಡಿಗಳನ್ನು ನಾನು ನೆರವೇರಿಸಲು ಹಾಗೂ ಈ ಕ್ಷೇತ್ರದ ಜನತೆಯ ಒಳಿತಿಗಾಗಿ ಸದಾ ಸಿದ್ದನಾಗಿದ್ದೇನೆ ಎಂದರು.
ವರದಿ: ಗುರುರಾಜ್ ಎಲ್, ಕಲ್ಲಹಳ್ಳಿ ಟಿ
