ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳದ ಕಸ್ತೂರ ಬಾ ಗಾಂಧಿ ವಸತಿ ವಿದ್ಯಾಲಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ರಾಷ್ಟ್ರ ಧ್ವಜಾರೋಹಣವನ್ನು ಮುಖ್ಯ ಗುರುಗಳಾದ ಕುಮಾರಿ ಚಂದ್ರಕಲಾ ಬಿರಾದಾರ ನೆರವೇರಿಸಿದರು. ಗಣರಾಜ್ಯೋತ್ಸವದ ಕುರಿತು ಶಿಕ್ಷಕಿ ಶ್ರೀಮತಿ ಬಸಮ್ಮ ಮಾತನಾಡಿದರು, ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಎಸ್.ಡಿ.ಎಂ.ಸಿ ಅಧ್ಯಕ್ಷರು, ಶಿಕ್ಷಕಿಯರಾದ ಭೂಮಿಕಾ, ರೇಣುಕಾ, ಮಾಂಗಲ್ಯ, ಶಹೀನಾ ಬೇಗಂ, ದಾವಲಬಿ,ರೂಪಾ ಇತರರು ಇದ್ದರು.
