
ಬಳ್ಳಾರಿ: ತೆಕ್ಕಲಕೋಟೆ ಪಟ್ಟಣದ ಟಿಪ್ಪು ಸುಲ್ತಾನ್ ವೃತ್ತದಲ್ಲಿ 76ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಮುಸ್ಲಿಂ ಕ್ಷೇಮಾಭಿವೃದ್ಧಿ ಮತ್ತು ವಿವಿಧೋದ್ದೇಶಗಳ ಸಂಘ (ರಿ.)ದ ಎಲ್ಲಾ ಪದಾಧಿಕಾರಿಗಳು ಸೇರಿ ಮತ್ತು ಸಮಾಜದ ಮುಖಂಡರು ಗುರು ಹಿರಿಯರು ‘ಸಂವಿಧಾನ ಪೀಠಿಕೆ’ಯ ಓದಿ ಪ್ರತಿಜ್ಞೆ ಮಾಡುವುದರ ಮೂಲಕ ವಿಭಿನ್ನ ರೀತಿಯಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಯುವ ಮುಖಂಡರಾದಂತಹ ಎಂ ಇಬ್ರಾಹಿಂ ಖಲೀಲ್ ರವರು ಗಣರಾಜ್ಯೋತ್ಸವದ ಶುಭಾಶಯಗಳು ತಿಳಿಸುತ್ತಾ , ಈ ದಿನ ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾದ ನೆನಪಿನಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾದ ದಿನ ಹಾಗೂ ಸಂವಿಧಾನ ಅಸ್ತಿತ್ವಕ್ಕೆ ಬಂದ ದಿನವನ್ನು ಗಣರಾಜ್ಯೋತ್ಸವ ಎಂದು ಆಚರಿಸಲಾಗಿದೆ ಈ ದಿನದಂದು ಭಾರತವು ತನ್ನನ್ನು ತಾನು ಸಾರ್ವಭೌಮ ಪ್ರಜಾಪ್ರಭುತ್ವ ಗಣರಾಜ್ಯ ರಾಜ್ಯವೆಂದು ಘೋಷಿಸಿಕೊಂಡಿದ್ದು, ಪ್ರಜಾಪ್ರಭುತ್ವಕ್ಕೆ ಇನ್ನೊಂದು ಹೆಸರೇ “ಭಾರತ” ವಿಶ್ವದಲ್ಲಿ ಅತೀ ದೊಡ್ಡ ಲಿಖಿತ ಸಂವಿಧಾನ ಹೊಂದಿರುವ ದೇಶ ನಮ್ಮ ಭಾರತ ಎಂಬುವುದು ನಮಗೆ ಹೆಮ್ಮೆ.
ಮೊದಲೇ ಹೇಳಿದಂತೆ 1950 ಜನವರಿ 26ರಂದು ಸಂವಿಧಾನ ಜಾರಿಗೆ ಬಂದಿತು. ಭಾರತದ ಸಂವಿಧಾನ ಪಿತಾಮಹ ಎಂದು ಕರೆಯಲ್ಪಡುವ ‘ ಬಿ .ಆರ್. ಅಂಬೇಡ್ಕರ್ ‘ ರವರದ್ದು ಭಾರತ ಸಂವಿಧಾನ ರೂಪಿಸುವಲ್ಲಿ ಪಾತ್ರ ಮಹತ್ವದ್ದು, ಭಾರತದ ಸಂವಿಧಾನ ರಚನೆಯಾಗಿ ಜಾರಿಗೆ ಬಂದಾಗ ಅದರಲ್ಲಿ 08 ಅನುಚ್ಛೇದಗಳು ಹಾಗೂ 22 ಭಾಗಗಳು ಮತ್ತು 395 ವಿಧಿಗಳು ಇದ್ದವು.
ಆ ಬಳಿಕ ಇಲ್ಲಿಯವರೆಗೆ ಒಟ್ಟು 105 ಬಾರಿ ಸಂವಿಧಾನ ತಿದ್ದುಪಡಿ ಮಾಡಲಾಗಿದ್ದು, ಹೀಗಾಗಿ ಈಗ ಭಾರತದ ಸಂವಿಧಾನದಲ್ಲಿ 12 ಅನುಚ್ಛೇದಗಳು ಹಾಗೂ 25 ಭಾಗಗಳು ಹಾಗೂ 470 ವಿಧಿಗಳು ಇವೆ ,ಭಾರತದ ಸಂವಿಧಾನವು ಸಮಾನತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಅನಿಸಿಕೆಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಮುಸ್ಲಿಂ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದಂತಹ ಎಂ. ಖಾಜಾ ಅಜ್ಮೀರ್, ಎಂ ಶಾಷಾವಲಿ, ಅಧ್ಯಕ್ಷ ಖಾದರ್ ಭಾಷಾ, ಕಾರ್ಯದರ್ಶಿ ಮೆಹಬೂಬ್, ತೆಕ್ಕಲಕೋಟೆ ಸರ್ ಖಾಜಿ ವಲಿಸಾಬ್, ಮುಲ್ಲಾ ಮಸೀದಿಯ ಇಮಾಮ್ ಆಫೀಸ್ ಬಾಬರ್ ಸಾಬ್, ಪೀರ್ ಬುಡ್ಡ ,ಸೈಕಲ್ ಬಾಷಾ , ನಾಡಾಂಗ ನೂರ್, ಜೀಲಾನ್, ಮುಕ್ತಿಯರ್, ಖೈಫ್ ಶಾಫಿ ,ಖಲಾಂದರ್, ಅಲ್ತಾಫ್,ಗೌಸ್, ಅನ್ವರ್ ಬಾಷಾ,ಖಾಸಿಂ, ಕಾರ್ಯಕರ್ತರು ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದರು.
