ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್. ಗ್ರಾಮದ ಹಡಪದ ಸಮಾಜದ ನಿಸ್ವಾರ್ಥ ಸೇವೆ ಗುರುತಿಸಿ ಡಾ.ಎಂ ಬಿ ಹಡಪದ ಸುಗೂರ ಎನ್. ಗೆ ಇದೇ 2025ನೇ ಸಾಲಿನ ಬೆಂಗಳೂರು ನಗರದ ವೆಯಿಲ್ ಫೌಂಡೇಶನ್ ಸಂಸ್ಥೆಯ ಕೊಡುವ ತಿರುಮಲಾಪುರ ಹೆಸರಘಟ್ಟ ಇವರ ವತಿಯಿಂದ ನೇತಾಜಿ ಸ್ಮೃತಿ ಪುರಸ್ಕಾರ ಪ್ರಶಸ್ತಿ, ಪ್ರಶಸ್ತಿಯ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು.
ಕಷ್ಟಗಳನ್ನು ಮೆಟ್ಟಿ ನಿಂತರೆ ಸಾಧನೆ ಸುಲಭ ಸಾಧ್ಯ,
ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸೇವೆ
ಎಂದು ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ಬಿ ಹಡಪದ.ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕರು ತಿಳಿಸಿದರು.
ಇವರು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಅನಾಥರಿಗೆ ಮಾಡುತ್ತಿರುವ ಉಚಿತ ಕ್ಷೌರ ಸೇವೆಯನ್ನು ಗುರುತಿಸಿ ಇದೇ 2025 ನೇ ವರ್ಷದ ಸಾಲಿನಲ್ಲಿ ಇವರು ಮಾಡುತ್ತಿರುವ ಸಮಾಜದ ಸೇವೆಯ ಹಾಗೂ ಈ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಮಾರು ಒಟ್ಟು 1465ಕ್ಕೂ ಹೆಚ್ಚು ಜನರಿಗೆ ಉಚಿತ
ಕ್ಷೌರ ಸೇವೆ ಮಾಡಿದ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್. ಅವರು ಸಮಾಜದ ಸಂಘಟನೆಯ ಜೊತೆ ಜೊತೆಯಲ್ಲಿ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಿದ್ದಾರೆ. ಭಾರತ ಮಾತೆಯ ಕೆಚ್ಚೆದೆಯ ಪುತ್ರ ಮತ್ತು ಸ್ವಾತಂತ್ರ್ಯಕ್ಕಾಗಿ ತನ್ನ ಸಂಪೂರ್ಣ ಜೀವನವನ್ನು ತ್ಯಾಗ ಮಾಡಿದ ಆಜಾದ್ ಹಿಂಧ್ ಫೌಜ್ ಸಂಸ್ಥಾಪಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನದ ಶುಭ ದಿನದಂದು ಇಂದು ಜನೆವರಿ 26, 76ನೇ ವರ್ಷದ ಗಣರಾಜ್ಯೋತ್ಸವ ದಿನದಂದು ಅವರ ನಿಸ್ವಾರ್ಥ ಸೇವೆಗೆ ಅನೇಕ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಈ ಪ್ರಶಸ್ತಿಯೂ ಸೇರಿದೆ ನಮ್ಮ ಜೊತೆಯಲ್ಲಿ ನಮ್ಮ ಸಮಾಜದ ಜನತೆಯ ಸಹಕಾರದಿಂದ ಈ ಉಚಿತ ಕ್ಷೌರ ಸೇವೆಯನ್ನು ಸಾಧಿಸಲು ನಮಗೆ ಈ ಕ್ಷೌರಿಕ ವೃತ್ತಿಯಲ್ಲಿಯೇ ಈ ರೀತಿಯ ಸಾಧನೆ ಮಾಡಲು ನಮಗೆ ಅನೇಕರು ಸಹಕರಿಸಿದರು ಸಮಾಜದ ಗುರುಗಳು, ಅನೇಕ ಮಠಾಧೀಶರ ಆಶೀರ್ವಾದ ಮತ್ತು ಸಮಾಜದ ಬಂಧುಗಳ ಸಹಕಾರ, ಈ ಸೇವೆಯಲ್ಲಿ ನಮ್ಮನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವೆ ಮಾಡಲು ಪ್ರೇರಣೆಯನ್ನು ನೀಡಿದರು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ಪತ್ರಿಕೆಗೆ ತಿಳಿಸಿದರು.
