ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಾಧನೆ ಶಿಕ್ಷಣದಿಂದ ಮಾತ್ರ ಸಾಧ್ಯ – ಪರಿಶಿಷ್ಟ ವರ್ಗಗಳ ಅಧಿಕಾರಿ ರಾಜೇಶ್

ಹನೂರು: ಭೀಮ್ ಸೇನಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಹನೂರು ತಾಲ್ಲೂಕು ಶಾಖೆ ವತಿಯಿಂದ ಸಾವಿತ್ರಿ ಬಾಯಿ ಪುಲೆ ಜಯಂತಿ ಕಾರ್ಯಕ್ರಮ, 207 ನೇ ಭೀಮಾ ಕೋರೇಗಾಂವ್ ವಿಜಯೋತ್ಸವ ಹಾಗೂ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಸಾರ್ವಜನಿಕ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಮಾತನಾಡಿ ಸಾವಿತ್ರಿ ಬಾ ಪುಲೆ, ಹಾಗೂ 207 ಭೀಮಾ ಕೋರೆಗಾಂವ್ ಮತ್ತು 76 ನೇ ಗಣರಾಜ್ಯೋತ್ಸವ ಈ ಮೂರು ಕಾರ್ಯಕ್ರಮಗಳ ಆಶಯಗಳನ್ನು ನಾವು ಕಡ್ಡಾಯವಾಗಿ
ತಿಳಿದುಕೊಳ್ಳಬೇಕಾಗಿದೆ ಸಾವಿತ್ರಿ ಬಾಯಿ ಪುಲೆ ಶಿಕ್ಷಣ ಕ್ರಾಂತಿ ಮೂಲಕ ಮಹಿಳೆಯರಿಗೆ ಶಿಕ್ಷಣ ನೀಡಿದರು. ಪ್ರಾಚೀನ ಕಾಲದಿಂದಲೂ ಮಹಿಳೆಯರು ಎಲ್ಲಾ ರಂಗದಲ್ಲಿಯೂ ಕಡೆ ಗಣಿಸಿದ್ದರು ಆದರೆ ಮಹಾರಾಷ್ಟ್ರದ ಜ್ಯೋತಿ ಬಾ ಪುಲೆ ಮತ್ತು ಸಾವಿತ್ರಿ ಬಾ ಪುಲೆ ಆದರ್ಶ ದಂಪತಿಗಳು ಶೋಷಿತ ವರ್ಗಗಳಿಗೆ ಶಿಕ್ಷಣ ನೀಡಿ ಅಕ್ಷರ ಕ್ರಾಂತಿಯನ್ನು ಮಾಡಿದರು ಇವರ ಚಳುವಳಿಯಲ್ಲಿ ಮುನ್ನಡೆಸಿದವರು ಡಾ ಬಿ ಆರ್ ಅಂಬೇಡ್ಕರ್ ರವರು ಅದಕ್ಕೆ ಸಂವಿಧಾನದಲ್ಲಿ ಪ್ರತಿಯೊಬ್ಬರೂ ಶಿಕ್ಷಣವನ್ನು ಪಡೆಯಬೇಕು ಹಾಗೂ ಸಾಮಾಜಿಕ ಆರ್ಥಿಕವಾಗಿ ಮುಂದೆ ಬರಬೇಕು ಶೋಷಿತ ಮಹಿಳೆಯರು ಏನಾದರೂ ಇಂದು ಸಾಧನೆ ಮಾಡಿರುವುದಕ್ಕೆ ಕಾರಣ ಸಾವಿತ್ರಿ ಬಾಯಿ ಪುಲೆ, ಶಿಕ್ಷಣವೆಂಬುವುದು ಹುಲಿ ಹಾಲಿದ್ದಂತೆ ಅದನ್ನು ಕುಡಿದರೆ ಹುಲಿಯಂತೆ ಘರ್ಜಿಸಬಹುದು ಜಿಲ್ಲೆಯ ಹಾಡಿಗಳಲ್ಲಿ ಇಂದಿಗೂ ಕೂಡ ಬಾಲ್ಯವಿವಾಹ, ಪೋಕ್ಸೊ ಅಂತಹ ಘಟನೆಗಳು ನಡೆಯುತ್ತಿವೆ ಇದಕ್ಕೆ ಕಾರಣ ಶಿಕ್ಷಣದ ಅರಿವು ಇಲ್ಲದೇ ಇರುವುದು. ಎಷ್ಟೋ ಕುಟುಂಬಗಳು ಕುಡಿತದಿಂದ ನಾಶವಾಗಿದೆ ಎಂದರು.

ಸಹ ಶಿಕ್ಷಕ ರಾಜ್ ರವರು ಮಾತನಾಡಿ 207 ನೇ ಕೋರೇಗಾಂವ್ ಕ್ರಾಂತಿಯ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಇತಿಹಾಸದಲ್ಲಿ ಮುಚ್ಚಿಹೋದ ಸಾಹಸದ ಘಟನೆ ಮೂವತ್ತು ಸಾವಿರ ಸೈನಿಕರನ್ನು ಕೇವಲ 500 ಜನ ಸೈನಿಕರು ಸೇರಿಕೊಂಡು ಸೋಲಿಸಿದ ಕದನ. ಪೇಶ್ವೆಗಳ ಆಡಳಿತದಲ್ಲಿದ್ದ ಜಾತಿ, ಅಸ್ಪೃಶ್ಯತೆ, ಮೇಲು ಕೀಳುಗಳ ವಿರುದ್ಧ ಸೆಟೆದು ನಿಂತು ಮಾನವೀಯ ಮೌಲ್ಯಗಳನ್ನು ಪಡೆದುಕೊಳ್ಳಲು ಹಂಬಲಿಸುವ ಮಹರ್ ಸೈನಿಕರ ಧೈರ್ಯ ಸಾಹಸ, ಕೆಚ್ಚೆದೆಯ ಹೋರಾಟ. ಶೋಷಿತರು ಮೇಲ್ಜಾತಿ ಶೋಷಕರ ವಿರುದ್ಧ, ಅವರ ಶೋಷಣೆಯ ನಡವಳಿಕೆಯ ವಿರುದ್ಧ ಯುದ್ಧ ಘೋಷಿಸಿದ, ನಡೆಸಿ ಗೆಲುವು. ಅದು ಭೀಮಾ ತೀರದಲ್ಲಿ ನಡೆದಿದ್ದರಿಂದ ಅದು ಇತಿಹಾಸದಲ್ಲಿ ‘ಭೀಮಾ ಕೋರೇಗಾಂವ್ ಯುದ್ಧ’ವೆಂದೇ ಪ್ರಸಿದ್ಧವಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ರವರು ನೈಜ ಇತಿಹಾಸವನ್ನು ಕೆದುಕಿ ತಿಳಿಸಿದರು.
ಉಪನ್ಯಾಸಕ ಹಾಗೂ ಸಂಘದ ಕಾರ್ಯದರ್ಶಿ ಎಸ್ ನಂಜುಂಡಯ್ಯ ರವರು 76 ನೇ ಗಣರಾಜ್ಯೋತ್ಸವದ ಬಗ್ಗೆ ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಭೀಮ್ ಸೇನಾ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎನ್ ರಮೇಶ್, ಉಪಾಧ್ಯಕ್ಷ ಕೆ ಪಶುಪತಿ ಕಾರ್ಯದರ್ಶಿ ಎಸ್ ನಂಜುಂಡಯ್ಯ , ಖಜಾಂಚಿ ಶಿವಕುಮಾರ್, ಮಹಿಳಾ ಸಂಘದ ಅಧ್ಯಕ್ಷ ಸಾವಿತ್ರಿ ಎಚ್ ಎನ್, ಉಪಾಧ್ಯಕ್ಷೆ ಶಿವಮ್ಮ, ಕಾರ್ಯಾಧ್ಯಕ್ಷ ಕೆಂಚಪ್ಪ, ಬಿ ಮಧುಸೂದನ್, ಕೆ ಎಂ ಮಧುಸೂದನ್, ಮಹಾಲಿಂಗ ಪ್ರಜಾ ವಿಮೋಚನಾ ಸಂಘ, ಕಾರ್ಯದರ್ಶಿ ಸಾವಕಯ್ಯ, ಸ್ವಾಮಿ, ನಟೇಶ್, ಡಿ ಎಸ್ ಎಸ್ ನಾಗಣ್ಣ, ಮಧುಸೂದನ್, ಟಿ ಮಧುಸೂದನ್, ವೆಂಕಟೇಶ್, ಮಹೇಂದ್ರ, ಸುಭಾಷ್, ನಾಗರಾಜು, ವಿದ್ಯಾರ್ಥಿಗಳು ಹಾಜರಿದ್ದರು.

ವರದಿ ಉಸ್ಮಾನ್ ಖಾನ್

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ