ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಸಂವಿಧಾನ ಉಳಿಸಿಕೊಂಡು ಹೋಗುವುದು ನಮ್ಮ ಎಲ್ಲರ ಕರ್ತವ್ಯ: ಶಿಕ್ಷಕ ಬಿ,ಎಸ್, ಅಗಸಭಾಳ ಹೇಳಿಕೆ

ನೂತನ ತಾಲೂಕು ದೇವರ ಹಿಪ್ಪರಗಿ ತಾಲೂಕಿನ ಜಾಲವಾದ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ (ಪ್ರೌಢ ಮತ್ತು ಕಾಲೇಜು ವಿಭಾಗ) ನಲ್ಲಿ ಹಮ್ಮಿಕೊಂಡಿದ್ದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ತುಂಬಾ ಅದ್ದೂರಿಯಾಗಿ ಆಚರಣೆ ಮಾಡಲಾಯಿತು ಕಾರ್ಯಕ್ರಮದ ಧ್ವಜಾರೋಹಣವನ್ನು SDMC ಉಪಾಧ್ಯಕ್ಷರಾದ ರಾಜಶೇಖರ್ ಗುಂಡಗಿಯವರು ನೆರವೇರಿಸಿದರು ಶಾಲೆಯ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆಯ ಶಿಕ್ಷಕರಾದ ಬಿ, ಎಸ್, ಅಗಸಭಾಳ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿ ನಮ್ಮ ಸಂವಿಧಾನ ಪ್ರಪಂಚದಲ್ಲಿ ಅತ್ಯಂತ ದೊಡ್ಡ ಲಿಖಿತ ಸಂವಿಧಾನ ಪ್ರಜಾಪ್ರಭುತ್ವದ ಕೇಂದ್ರ ಬಿಂದು ಅದನ್ನು ಡಾ. ಬಾಬಾ ಸಾಹೇಬ ಅಂಬೇಡ್ಕರ್ ತುಂಬಾ ಕಷ್ಟ ಪಟ್ಟು ನಮಗೆ ನೀಡಿರುವ ಸಂವಿಧಾನವನ್ನು ನಾವು ಎಲ್ಲರು ಕಾಪಾಡಿಕೊಂಡು ಹೋಗೋವುದ ನಮ್ಮ ಆದ್ಯ ಕರ್ತವ್ಯವೆಂದು ಹೇಳಿದರು. ವಿಶೇಷವಾಗಿ ಕಾರ್ಯಕ್ರಮದಲ್ಲಿ ಭವ್ಯ ಭಾರತದ ಸಂವಿಧಾನದ ಪೂರ್ವ ಪೀಠಿಕೆಯನ್ನು ಭೋದಿಸಲಾಯಿತು ಮತ್ತು ಕಾರ್ಯಕ್ರಮದ ಕೇಂದ್ರ ಬಿಂದು ವಿದ್ಯಾರ್ಥಿಗಳಿಂದ ಪಥ ಸಂಚಲನವನ್ನು ದೈಹಿಕ ಶಿಕ್ಷಕರಾದ ಗುರುರಾಜ್ ಕುಳೇಕುಮಟೆ ಮತ್ತು ಪತ್ತಾರ ಗುರುಗಳ ನೇತೃತ್ವದಲ್ಲಿ ಶಾಲೆಯ ಅತಿಥಿ ಶಿಕ್ಷಕರಾದ ಕಿರಣರಾಜ್ ಕೊಟಗಿಯವರು ನಡಸಿಕೊಟ್ಟರು ಕಾರ್ಯಕ್ರಮದಲ್ಲಿ ಹಲವಾರು ವಿದ್ಯಾರ್ಥಿಗಳು ಭಾಷಣ, ಹಾಡು, ಡಾನ್ಸ್ ಮಾಡಿ ಕಾರ್ಯಕ್ರಮದ ಶೋಭೆಯನ್ನು ಹೆಚ್ಚಿಸಿದರು ಕೊನೇದಾಗಿ ಕಾರ್ಯಕ್ರಮದ ಘನ ಅಧ್ಯಕ್ಷೇ ವಹಿಸಿದ ಶಾಲೆಯ ಉಪ ಪ್ರಾಂಶುಪಾಲರಾದ ಅಶೋಕ್ ಹೊಸಗೌಡರ ಸರ್ ಕಾರ್ಯಕ್ರಮದ ಅಧ್ಯಕ್ಷ ಭಾಷಣವನ್ನು ಮಾಡಿ ವಿದ್ಯಾರ್ಥಿಗಳಿಗೆ ಶಿಕ್ಷಣದ ನೈತಿಕ ಮತ್ತು ಮಾನವೀಯತೆ ಶಿಕ್ಷಣ ತುಂಬಾ ಅವಶ್ಯಕತೆ ಇದೆ ಅದಕ್ಕೆ ನಾವು ಮತ್ತು ಪಾಲಕರು ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದರು ಅಷ್ಟೇ ಅಲ್ಲದೆ ಊರಿನ ದಲಿತ ಮುಖಂಡರಾದ ಸಚಿನ ಕೊಟಗಿ, ಎಲ್ಲಾ SDMC ಸದಸ್ಯರು, ಊರಿನ ಪ್ರಮುಖ ಹಿರಿಯರು ಗ್ರಾಮ ಪಂಚಾಯಿತ್ ಸದ್ಯಸರು,ಶಾಲೆಯ ಎಲ್ಲಾ ಶಿಕ್ಷಕರ, ವಿದ್ಯಾರ್ಥಿಗಳು ಭಾಗವಹಿಸಿದರು, ಶಿಕ್ಷಕರಾದ S.J.ನಾಟಿಕಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಬಿ, ಎಸ್, ಅಗಸಭಾಳ ಸ್ವಾಗತಿಸಿದರು, P. K ಕುಲಕರ್ಣಿಯವರು ವಂದಿಸಿದರು.

ವರದಿ :ಕಿರಣರಾಜ್ ಕೊಟಗಿ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ