ವಿಜಯಪುರ: ಬಸವನ ಬಾಗೇವಾಡಿ ಉಪವಿಭಾಗ ಪೊಲೀಸ್ ಠಾಣೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಾಂಗದ ಕುಂದು ಕೊರತೆ ಸಭೆಯಲ್ಲಿ ಭಾರತೀಯ ಭೀಮ್ ಸೇನೆಯ ಜಿಲ್ಲಾ ಅಧ್ಯಕ್ಷರು ವಿಶ್ವನಾಥ ಚಲವಾದಿ ರವರು ಮಾತನಾಡಿ ತಾಳಿಕೋಟೆಯ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ನಾಗೂರ, ಹೊಸಳ್ಳಿ, ಶಳ್ಳಗಿ ಗ್ರಾಮದಲ್ಲಿ ಅಸ್ಪೃಶ್ಯತೆ ಎದ್ದು ತಾಂಡವ ಆಡುತ್ತಿದೆ ಆ ಊರಿನಲ್ಲಿ ದಲಿತ ಸಮುದಾಯದವರಿಗೆ ನೀರು ಎತ್ತಿ ಹಾಕುವುದು, ದಲಿತ ಸಮಾಜದಲ್ಲಿ ಯಾರಾದ್ರೂ ತೀರಿ ಹೋದರೆ ಅಂಗಡಿ ಹೋಟೆಲ್ ಗಳನ್ನು ಮುಚ್ಚುವುದು ಇದರಿಂದ ದಲಿತ ಸಮುದಾಯದ ಮುಂದಿನ ಪೀಳಿಗೆಗೆ ಬಹಳ ಪರಿಣಾಮ ಬೀರುತ್ತದೆ ಎಂದು ಮಾನ್ಯ ಡಿವೈಎಸ್ಪಿ ಅವರಿಗೆ
ಆ ಊರಿನ ಅಸ್ಪೃಶ್ಯತೆ ನಿವಾರಣೆ ಮಾಡಲು ಕಾನೂನು ಕ್ರಮ ಜರುಗಿಸಿ ನಾವೆಲ್ಲಾ ಒಂದೇ, ಮನುಷ್ಯರೇ ಎಂಬ ಮಾನವೀಯ ಮೌಲ್ಯದ ಪಾಠ ಹೇಳಿ ಕೊಡಿ ಎಂದು ಮನವಿ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಭಾರತೀಯ ಭೀಮ್ ಸೇನೆಯ ಜಿಲ್ಲಾ ಅಧ್ಯಕ್ಷ ವಿಶ್ವನಾಥ ಚಲವಾದಿ, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.
ವರದಿ : ಉಸ್ಮಾನ ಬಾಗವಾನ (ಬಳಗಾನೂರ)
