ಬೀದರ್: ಇಂದು ದಿನಾಂಕ: 30.01.2025 ಬಹುಜನ ಸಮಾಜ ಪಕ್ಷ ಬಸವಕಲ್ಯಾಣ ಘಟಕ ಪಕ್ಷದ ಕಾರ್ಯಕರ್ತರ ಸಭೆ ನಡೆಸಲಾಯಿತು ಪಕ್ಷದ ಸಂಸ್ಥಪಕರಾದ ಮಾನ್ಯವರ ದಾದಾಸಾಬ್ ಕಾಂನ್ಸಿರಾಮ್ ಜಿ ಅವರ ಮತ್ತು ಸಂವಿಧಾನ ಶಿಲ್ಪಿ ಡಾ:
ಬಾಬಾಸಾಹೇಬ ಅಂಬೇಡ್ಕರ ರವರ ಭಾವ ಚಿತ್ರಕ್ಕೆ ಪೂಜಿಸಿ ಸಭೆ ನಡೆಸಿ, ನಗರ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ನಗರದ ಸಂಯೋಜಕರು ಮಸ್ತಾನ ಸಾಬ್ ಲದ್ದಾಫ ಮತ್ತು ನಗರ ಘಟಕದ ಅಧ್ಯಕ್ಷರು ಚಂದ್ರಶೀಲ ಚಿಂತಾಮಣಿ ಗಾಯಕವಾಡ ಇವರನ್ನು ಆಯ್ಕೆ ಮಾಡಲಾಯಿತು ಹಾಗೂ ಅಲಗೂಡ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷರು ದಶರಥ ಲಿಂಬಾರೆ ವಡ್ಡರಗಾ ಗ್ರಾಮ ಪಂಚಾಯತ ಸದಸ್ಯರು ಉಜ್ವಲ ಸಾಳುಂಕೆ ಅವರು ಬಹುಜನ ಸಮಾಜ ಪಕ್ಷಕ್ಕೆ ಸೇರ್ಪಡೆ ಆದರು. ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷದ ತಾಲೂಕ ಅಧ್ಯಕ್ಷರ ನೇತೃತ್ವದಲ್ಲಿ ಸೇರ್ಪಡೆ ಮಾಡಿಕೊಳ್ಳಲಾಯಿತು ಬಹುಜನ ಸಮಾಜ ಮಹಾ ಪುರುಷರ ಚಳುವಳಿ ಮಾನ್ಯವರ ದಾದನಾಬ್ ಕಾಂನ್ಸಿರಾಮ್ ಜಿ ಅವರ ನಡೆದ ಮಾರ್ಗದಂತೆ ಬಹುಜನ ಸಮಾಜ ಪಕ್ಷ ರಾಷ್ಟ್ರೀಯ ಅಧ್ಯಕ್ಷರು ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಮುಂಬರುವ ತಾಲೂಕಾ ಪಂಚಾಯತ, ಜಿಲ್ಲಾ ಪಂಚಾಯತ ಚುನಾವಣೆ ಪಕ್ಷದ ಪದಾಧಿಕಾರಿಗಳು ಬೂತ್ ಮಟ್ಟದಲ್ಲಿ ಕಾರ್ಯಕರ್ತರು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು.
ಈ ಸಂದರ್ಭದಲ್ಲಿ ಬಹುಜನ ಸಮಾಜ ಪಕ್ಷ ತಾಲೂಕಾ ಪದಾಧಿಕಾರಿಗಳು ಉಪಸ್ಥಿರಿದ್ದರು. ತಾಲೂಕಾ ಸಂಯೋಜಕರು ಮಕುಬಲ್ ಸಾಬ್ ಮತ್ತು ತಾಲೂಕಾ ಅಧ್ಯಕ್ಷರು ಶಂಕರ ಫುಲೇ ತಾಲೂಕಾ ಉಪಾಧ್ಯಕ್ಷರು ರಮೇಶ ರಾಠೋಡ, ಸಚಿನ ಕಾಂಬಳೆ, ತಾಲೂಕಾ ಪ್ರಧಾನ ಕಾರ್ಯದರ್ಶಿಗಳು ರವಿ ಉದಾತೆ ತಾಲೂಕಾ ಕಾರ್ಯದರ್ಶಿಗಳು ಮಹಾದೇವ ಗಾಯಕವಾಡ, ಚಂದ್ರಕಾಂತ ಲಂಗಡೆ ಅಶೋಕ ಶಿಂದೆ, ರಾಜು ಸೂರ್ಯವಂಶಿ, ಹಾರಕೂಡ ಗ್ರಾಮ ಘಟಕದ ಅಧ್ಯಕ್ಷ ದಿಲಿಪ ಶಿರೋಳೆ, ನೀಲಕಂಠ ಗ್ರಾಮ ಘಟಕ ಅಧ್ಯಕ್ಷರು ಅವಿನಾಶ ಗಾಯಕವಾಡ ಹಾರಕೂಡ ಗ್ರಾಮ ಘಟಕ ಪದಾಧಿಕಾರಿಗಳು ಮತ್ತು ಕಾದೇಪುರ ಗ್ರಾಮ ಘಟಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹಾಜರಿದ್ದರು.
ವರದಿಗಾರರು ಶ್ರೀನಿವಾಸ ಬಿರಾದಾರ
