ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಸುಂಕದಗದ್ದೆ, ಕುಂದೂರು, ಸೀಗೋಡು, ಕಲ್ಕೆರೆ ಮತ್ತು ಬೀಳಾಲು ಕೊಪ್ಪ ಶಾಲೆಗಳಿಗೆ ನಗು ಫೌಂಡೇಶನ್ ಕಡೆಯಿಂದ 1.2. ಮತ್ತು 3ನೇ ತರಗತಿ ಮಕ್ಕಳಿಗೆ ಅನುಕೂಲವಾಗುವ 4×10 ಅಡಿ ಉದ್ದದ ಇಂಗ್ಲೀಷ್ ಬ್ಯಾನರ್ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಿಕ್ಷಕರಾದ ಸಿ. ಆರ್.ಸುರೇಶ್ ( ಚೌಡ್ಲಾಪುರ ಸೂರಿ )ರವರು ಕಡಿಮೆ ವೆಚ್ಚದಲ್ಲಿ ಅತ್ಯುತ್ತಮವಾದ ಇಂಗ್ಲೀಷ್ ಕಲಿಕಾ ಸಾಮಗ್ರಿ ನೀಡಬೇಕೆನ್ನುವುದು ನಗು ಫೌಂಡೇಶನ್ ಧ್ಯೇಯ, ಆದ ಕಾರಣ ಪ್ರತಿ ತಿಂಗಳು ಐದು ಶಾಲೆಗಳಿಗೆ ನಿರಂತರವಾಗಿ ಕಲಿಕಾ ಸಾಮಗ್ರಿಗಳನ್ನು ಕೊಡುತ್ತಿದ್ದಾರೆ. ಇವರ ಶೈಕ್ಷಣಿಕ ಪ್ರೇಮ ಎಲ್ಲರ ಮೆಚ್ಚುಗೆ ಗಳಿಸಿದೆ ಎಂದರು. ಈ ಸಂದರ್ಭದಲ್ಲಿ ಇದಕ್ಕೆಲ್ಲಾ ಕಾರಣರಾದ ದೀಪ್ತಿ ಮೇಡಂ ರವರನ್ನು ಸ್ಮರಿಸಲಾಯಿತು. ಬ್ಯಾನರ್ ಪಡೆದ ಶಾಲೆಗಳ ಶಿಕ್ಷಕರಾದ ಅಭಿಷೇಕ್, ಮಮತಾ, ಸುಜಾತ, ರಮೇಶ್, ಭಾಗ್ಯ ಜ್ಯೋತಿ, ಸಾಂಘವಿ ಮುಂತಾದವರು ಉಪಸ್ಥಿತರಿದ್ದರು.
