ಈ ನೆಲದ ಮೂಲ ನಿವಾಸಿಗಳಾದ ನಾವುಗಳು , ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ, ಕಾನೂನು ಬದ್ಧವದಂತಹ ಹಕ್ಕುಗಳನ್ನು ಪಡೆಯಲು , ಮತ್ತು ಮಹಾತ್ಮ ಬೊಮ್ಮಗೊಂಡೇಶ್ವರ ಜೀವನ ಚರಿತ್ರೆ ಕುರಿತು ಮೂಲ ನಿವಾಸಿ ಬಂಧುಗಳಿಗೆ ಅಧ್ಯಾಯ ಶಿಬಿರ ಬಹುಮುಖ್ಯವಾಗಿದ್ದು,
ಅದರಲ್ಲೂ “ನಮ್ಮ ನಡೆ ಮೂಲನಿವಾಸಿ ಸಮುದಾಯದ ಜಾಗೃತಿ ಆಂದೋಲನ ಅಧ್ಯಾಯ ಶಿಬಿರದ ಕಡೆ ” ಎಂಬ ಮಹತ್ವದ ಕಾರ್ಯಕ್ರಮ ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಗುರುಪೀಠ ಕಾಗಿನೆಲೆ” ಆಯೋಜಕರು ” ಭಾರತ ದೇಶದ ಮೂಲ ನಿವಾಸಿಗಳಾದ ಬುಡಕಟ್ಟು ಗೊಂಡ ಕುರುಬ ಜನಾಂಗದ ಹಾಕ್ಕೋತಾಯ ಸಮಿತಿ ಮತ್ತು ಕರ್ನಾಟಕ ಪ್ರದೇಶ್ ಕುರುಬರ ಸಂಘ ಬೆಂಗಳೂರು (ರಿ.) ರವರ ನೇತೃತ್ವದಲ್ಲಿ ಫೆಬ್ರುವರಿ 13 ಮತ್ತು 14 ರಂದು ಬೆಂಗಳೂರು ನಗರದ ಕನಕ ಚಾರಿಟೇಬಲ್ ಟ್ರಸ್ಟ್ ಸ್ಥಳದಲ್ಲಿ ಶಿಬಿರ ನಡೆಯಲಿದ್ದು ಕಾರ್ಯಕ್ರಮದ ಉದ್ದೇಶ ” ಅಖಂಡ ಕರ್ನಾಟಕದ ಮೂಲ ನಿವಾಸಿ ಬುಡಕಟ್ಟು ಗೊಂಡ ಕುರುಬ ಸಮುದಾಯದ ” ಸಮಾಜದ ಜಾಗೃತಿಗಾಗಿ ಸಮುದಾಯದ ಮುಂದಿನ ಉಳಿವಿಗಾಗಿ ” ರಾಜ್ಯದ ಪ್ರತಿ ಜಿಲ್ಲೆಯಿಂದ ಮತ್ತು ಪ್ರತಿ ತಾಲೂಕಿನಿಂದ ಸ್ವಯಂ ಪ್ರೇರಿತರಾಗಿ ಆಂದೋಲನ ಚಳುವಳಿಯ ಶಿಬಿರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿ ಗೊಳಿಸಬೇಕೆಂದು ಶ್ರೀ ಗೋಪಾಲ ಎಂ.ಪಿ ಗಾರಂಪಳ್ಳಿ ಕಲಬುರಗಿ, ಬಾಂಶೇಪ್ ಯುನಿಟಿ ಆಫ್ ಮೂಲ ನಿವಾಸಿ ಸಂಘಟನೆ ಮತ್ತು ಆದಿವಾಸಿ ಬುಡಕಟ್ಟು ಯುವ ಹೋರಾಟಗಾರರು ರಾಜ್ಯ ಘಟಕ ಬೆಂಗಳೂರು ಸಂಘಟನೆಯ ಸಂಚಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
