
ವಿಜಯನಗರ :ದಿ. 05.02.2025 ರಂದು ಮಾನ್ಯ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಜಯನಗರ ಜಿಲ್ಲೆಯ ಎಲ್ಲಾ ಮೈಕ್ರೋ ಫೈನಾನ್ಸ್ ಹಾಗೂ ಹಣಕಾಸು ಸಂಸ್ಥೆಗಳ ವರ್ತಕರೊಂದಿಗೆ ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮೈಕ್ರೋ ಫೈನಾನ್ಸ್ ಹಾಗೂ ಹಣಕಾಸು ಸಂಸ್ಥೆಗಳು RBI ಮಾರ್ಗಸೂಚಿಯನ್ನಾಧರಿಸಿ ನೀಡಿದ ಸಾಲಕ್ಕೆ ಬಡ್ಡಿ ದರವನ್ನು ವಿಧಿಸುವುದು ಹಾಗೂ ಸದರಿ ಸಾಲ ವಸೂಲಾತಿಗೆ ಸೂಕ್ತ ವ್ಯಕ್ತಿಯನ್ನು ನೇಮಕ ಮಾಡಿಕೊಂಡು ಸದರಿಯವರು ಸಾಲ ವಸೂಲಾತಿ ಸಮಯದಲ್ಲಿ ಸಂಸ್ಥೆಯಿಂದ ಅಧಿಕೃತವಾಗಿ ನೀಡಲ್ಪಟ್ಟ ಗುರುತಿನ ಚೀಟಿ ಹಾಗೂ ಸಾಲಗಾರರಿಗೆ ನೀಡಿದ ಸಾಲ ಹಾಗೂ ಬಡ್ಡಿದರ ಒಳಗೊಂಡಂತೆ ಸಾಲದ ವಿವರಗಳೊಂದಿಗೆ ಗೌರವದಿಂದ ನಡೆದುಕೊಳ್ಳುವಂತೆ ಸೂಚಿಸಿದರು, ಮೈಕ್ರೋ ಫೈನಾನ್ಸ್ ಹಾಗೂ ಹಣಕಾಸು ಸಂಸ್ಥೆಗಳು ನಿಯಮಾವಳಿ ಹಾಗೂ ಅತ್ಯಂತ ಗೌರವಯುತವಾಗಿ ಸಂಸ್ಥೆಯನ್ನು ನಡೆಸುವಂತೆ ತಿಳಿಸಿದರು, ಪ್ರಸ್ತುತ ದಿನಗಳಲ್ಲಿ RBI ನಿಯಮಾವಳಿಗಳನ್ನು ಉಲ್ಲಂಘಿಸಿ ಮಾನವ ಹಕ್ಕುಗಳಿಗೆ ಧಕ್ಕೆ ಉಂಟು ಮಾಡುವಂತಹ ಪ್ರಕರಣಗಳು ಕಂಡು ಬಂದಿದ್ದು ಅಲ್ಲದೇ ಸಾಲ ವಸೂಲಾತಿ ಸಮಯದಲ್ಲಿ ಸಾಲಗಾರರೊಂದಿಗೆ ಕೆಟ್ಟ ಪದಗಳನ್ನು ಬಳಸಿಕೊಂಡು ನಿಂದನೆ ಮಾಡುವುದು ಅಥವಾ ಯಾವುದೇ ಸಾಲಗಾರರರಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ಅಥವಾ ಒತ್ತಡವನ್ನು ನೀಡುವುದು ಕಂಡುಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಜಿಲ್ಲಾಡಳಿತದಿಂದ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು ಹಾಗೂ ಇಂತಹ ಪ್ರಕರಣಗಳು ಕಂಡುಬಂದಲ್ಲಿ ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಸಹಾಯವಾಣಿ ತೆರೆಯಲಾಗಿದ್ದು ಸಹಾಯವಾಣಿ ಸಂಖ್ಯೆ 08394-231575 ಸಾರ್ವಜನಿಕರು ನೇರವಾಗಿ ದೂರು ಸಲ್ಲಿಸಿದಲ್ಲಿ ನಿಯಮಾನುಸಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಲಾಯಿತು. ಪ್ರಸ್ತುತ ವಿಜಯನಗರ ಜಿಲ್ಲೆಯ ಕೆಲವು ಸ್ಥಳಗಳಲ್ಲಿ ಇಂತಹ ಕಾನೂನು ಉಲ್ಲಂಘನೆಯಾದಂತಹ ಪ್ರಕರಣಗಳು ದಾಖಲಾಗಿದ್ದು ಅಂತಹ ವ್ಯಕ್ತಿಗಳ ವಿರುಧ್ದ ಕ್ರಿಮಿನಲ್ ಮೋಕದ್ದಮೆ ದಾಖಲಿಸಿ ದಸ್ತಗಿರಿ ಮಾಡಲಾಗಿರುತ್ತದೆ ಎಂದು ತಿಳಿಸಿದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
