ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಬದುಕಿರುವಾಗ ಸ್ಪೂರ್ತಿ ಹಂಚಿ – ಪ್ರೊ.ಎಂ ಆರ್ ನಾಗರಾಜು

ಬೆಂಗಳೂರು : ನಿನ್ನೆ ಆನಂದ್ ರಾವ್ ವೃತ್ತದ ಬಳಿ ಇರುವ ಕ.ವಿ.ಪ್ರ.ನಿ.ನಿ. ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಖ್ಯಾತ ಶಿಕ್ಷಣ ತಜ್ಞ, ಚಿಂತಕ ಪ್ರೊಫೆಸರ್ ಎಂ ಆರ್ ನಾಗರಾಜು ಅವರು ಮುಪ್ಪು ದೇಹಕ್ಕೂ ಅಥವಾ ಮನಸ್ಸಿಗೊ ಎಂಬ ವಿಷಯದ ಕುರಿತು ಮಾತನಾಡುತ್ತಾ ಮುಪ್ಪು ಬಾಳ ಲೀಲೆಯ ಭಾಗವೆಂದು ಪರಿಗಣಿಸಬೇಕು ಎಂದು ತಿಳಿಸಿದರು.

ಮುಂದುವರಿದು, ಅವರು ವಯಸ್ಸಾಗುವಿಕೆಯನ್ನು ಹೂವುಗಳು ಅರಳುವುದು ಮತ್ತು ಹಣ್ಣುಗಳು ಹಣ್ಣಾಗುವುದಕ್ಕೆ ಹೋಲಿಸಿದರು, ಅವರು ಅಕಾಲಿಕ ವಯಸ್ಸಾಗುವಿಕೆಯನ್ನು ತಡೆಗಟ್ಟಲು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು, ವಿಶೇಷವಾಗಿ ಯುವಕರಲ್ಲಿ ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು.
ಪ್ರೇಕ್ಷಕರು ಕುತೂಹಲ, ತೊಡಗಿಸಿಕೊಳ್ಳುವಿಕೆ ಮತ್ತು ಯುವ ಪೀಳಿಗೆಯೊಂದಿಗೆ ಸಂಪರ್ಕದಲ್ಲಿರಲು ಪ್ರೋತ್ಸಾಹಿಸಿದರು.

  • ಅನುಭವವನ್ನು ಬಳಸಿಕೊಳ್ಳಿ ಮತ್ತು ಕುತೂಹಲವನ್ನು ಕಾಪಾಡಿಕೊಳ್ಳಿ
  • ದೈಹಿಕ ಮತ್ತು ಬೌದ್ಧಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ
  • ಯುವ ಪೀಳಿಗೆಯೊಂದಿಗೆ ಬೆರೆಯಿರಿ ಮತ್ತು ಪ್ರೋತ್ಸಾಹಿಸಿ
  • ಪೀಳಿಗೆಯ ಅಂತರವನ್ನು ನಿವಾರಿಸಿ
  • ಸಾವಧಾನತೆ ಮತ್ತು ಸಕಾರಾತ್ಮಕತೆಯನ್ನು ಬೆಳೆಸಿಕೊಳ್ಳಿ ಇದು ಅವರ ಉಪನ್ಯಾಸದ ಮುಖ್ಯ ಅಂಶಗಳಾಗಿದ್ದವು.

ಪ್ರೊ. ನಾಗರಾಜು ಅವರ ಸ್ಪೂರ್ತಿದಾಯಕ ಸಂದೇಶ ಸ್ಪಷ್ಟವಾಗಿತ್ತು: “Inspire till we expire.”ನಾವು ಸಾಯುವವರೆಗೂ ಸ್ಫೂರ್ತಿ ನೀಡಿ.” ಅವರ ಉಪನ್ಯಾಸವು ಕ್ರಿಯೆಗೆ ಕರೆಯಾಗಿತ್ತು, ಕೇಳುಗರನ್ನು ಜೀವನದ ಪ್ರತಿಯೊಂದು ಹಂತವನ್ನು ಸದುಪಯೋಗಪಡಿಸಿಕೊಳ್ಳಲು ಒತ್ತಾಯಿಸಿತು. ಈ ಕಾರ್ಯಕ್ರಮವು ವ್ಯಾಪಕವಾಗಿ ಮೆಚ್ಚುಗೆ ಪಡೆದು ಪ್ರೇಕ್ಷಕರ ಮೇಲೆ ಶಾಶ್ವತವಾದ ಪ್ರಭಾವ ಬೀರಿತು.

ಶಿಲೆಯಲ್ಲಿ ರಾಮಾಯಣ ನಾನು ಕಂಡಂತೆ ಪುಸ್ತಕ ಅವಲೋಕನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಚಿಂತಾಮಣಿ ಕೊಡ್ಲೆಕೆರೆ ಅವರು ಕನಸುಗಳನ್ನು ನನಸಾಗಿಸಿಕೊಳ್ಳುವ ಹಟಕ್ಕೆ ಕಾಲದ ಮಿತಿ ಇಲ್ಲ. ಹಂಪಿಯ ಹಜಾರರಾಮ ದೇವಾಲಯದ ಚಿತ್ರಗಳನ್ನು ನೋಡಿದ ವಿದ್ಯಾರ್ಥಿಯೊಬ್ಬ, ನಿವೃತ್ತಿಯ ನಂತರ ಮಗ ಕೊಡಿಸಿದ ಕ್ಯಾಮರಾ ಮೂಲಕ ಅವುಗಳನ್ನು ಸೆರೆ ಹಿಡಿದು ದೇವಾಲಯದ ರಾಮಾಯಣ ಶಿಲ್ಪಕಲೆಗಳ ಉತ್ತಮ ಪುಸ್ತಕವನ್ನು ಸ್ವತಂತ್ರವಾಗಿ ಪ್ರಕಟಿಸಿ ಸಾಹಸ ಮೆರೆದಿದ್ದಾನೆ. ಕೃತಿಕಾರರಿಗೆ ಎಷ್ಟು ಅಭಿನಂದನೆ ತಿಳಿಸಿದರೂ ಸಾಲದು ಎಂದು ಅಭಿಪ್ರಾಯ ಪಟ್ಟರು. ಸಾಹಿತ್ಯ, ಛಾಯಾಗ್ರಹಣ, ಶಿಲ್ಪಕಲೆ ಯಾವುದರ ಹಿನ್ನೆಲೆಯೂ ಇಲ್ಲದೆ ಧೀಶಕ್ತಿ ಮಾತ್ರದಿಂದ ಈ ಕೆಲಸ ಆಗಿರುವುದು ದೈವ ಕೃಪೆ. ಮುಸ್ಲಿಂ ದೊರೆಗಳ ದಾಳಿಗೆ ತುತ್ತಾಗಿ ನಲುಗಿದ್ದ ನಾಡನ್ನು ಮತ್ತೆ ಸಾಂಸ್ಕೃತಿಕ ವೈಭವ ಮರಳುವಂತೆ ಮಾಡಿದ್ದ ವಿಜಯನಗರ ಅರಸರ ಪುನರುಜ್ಜೀವನ ಕಾರ್ಯವನ್ನು ಇಂದಿನ ತಲೆಮಾರಿಗೆ ತಲುಪಿಸುವ ಕಾರ್ಯವನ್ನು ಲೇಖಕರು ಮಾಡಿದ್ದಾರೆ ಎಂದರು.
ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಿದುಷಿ ವೀಣಾ ಜೋಶಿ ಅವರು ಮೊದಲಿಗೆ ಶುದ್ಧ ಸಾರಂಗ ರಾಗವನ್ನು ಪ್ರಸ್ತುತ ಪಡಿಸಿ, ಮೀರಾ ಭಜನ್, ಜಾನಪದ ಗೀತೆ ,ಭಕ್ತಿ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿ ಜನಮನ ಗೆದ್ದರು. ಅವರಿಗೆ ಹಾರ್ಮೋನಿಯಂ ನಲ್ಲಿ ಪಂಡಿತ ನರಸಿಂಹ ಕುಲಕರ್ಣಿ ಹಾಗೂ ತಬಲಾದಲ್ಲಿ ಸುದೀಪ್ ಜೋಶಿ ಉತ್ತಮ ಸಾತ್ ನೀಡಿದರು.
ಇದೇ ಸಂದರ್ಭದಲ್ಲಿ ರಾಮಾಯಣ ನಾನು ಕಂಡಂತೆ ಕೃತಿ ರಚನೆ ಮಾಡಿದ ನಿವೃತ್ತ ಲೆಕ್ಕ ನಿಯಂತ್ರಣ ಅಧಿಕಾರಿ ಬಿ ಸತ್ಯನಾರಾಯಣ ಹಾಗೂ ಕಲಾವಿದ ವೀಣಾ ಜೋಶಿ ಅವರನ್ನು ಸನ್ಮಾನಿಸಲಾಯಿತು.
ಹೇಮಂತ್ ಲಿಂಗಪ್ಪ ಅವರು ಪ್ರಸ್ತಾವನೆ, ಸ್ವಾಗತ ಮಾಡಿದರೆ ಎಂ ಎ ಮುರಾರಿಯವರು ಪ್ರಾರ್ಥನೆ ಹಾಡಿ, ಅಚ್ಚುಕಟ್ಟಾಗಿ ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಉಲಿಗೆಸ್ವಾಮಿ, ನಿವೃತ್ತ ನಿಯಂತ್ರಣಾಧಿಕಾರಿ ಸುಧಾ,ಸುಜಯ ನಾಗರಾಜ ಹಾಗೂ ಜಿ ವಿ ಹೆಗಡೆ, ಪ್ರಕಾಶ ಪೂರ್ಣಮಠ, ಸಿದ್ದಣ್ಣ ಸೊನ್ನದ, ವಾಸುದೇವ ಕಾರಂತ, ಪ್ರಭಾಕರ ಗಂಗೊಳ್ಳಿ ಮುಂತಾದ ಗಣ್ಯರು ಉಪಸ್ಥಿತರಿದ್ದರು.

ವರದಿ : ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ