ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಚಿಕ್ಕ ಜೋಗಿಹಳ್ಳಿಯಲ್ಲಿ ವಿಜಯನಗರ ಮತ್ತು ಬಳ್ಳಾರಿ ಸಹಕಾರ ಇಲಾಖೆ ಆಶ್ರಯದಲ್ಲಿ ಆಯೋಜನದ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ನೂತನ ಆಯ್ಕೆಯ ಉದ್ಘಾಟನಾ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಡಾಕ್ಟರ್ ಶ್ರೀನಿವಾಸ್ ಎನ್ ಟಿ ಅವರು ಮಾತನಾಡುತ್ತಾ ತಾಲೂಕಿನ ಕೃಷಿ ವಿಜ್ಞಾನ ಕೇಂದ್ರ ಮಂಜೂರು ಮಾಡಿಸಲು ನಾವು ಪ್ರಯತ್ನ ಪಡ್ತಾ ಇದೀವಿ ಆದಷ್ಟು ಬೇಗ ಅದನ್ನು ಕಾರ್ಯ ರೂಪಕ್ಕೆ ತರುತ್ತೇವೆ ಹಾಗೂ ರೈತರಿಗೆ ರೈತರ ಪರವಾಗಿ ನಾವು ಅವರಿಗೆ ಸಿಗುವ ಸೌಲಭ್ಯಗಳು ಎಲ್ಲವನ್ನು ಆದಷ್ಟು ತಾಲೂಕಿನ ಮಟ್ಟದಲ್ಲಿ ಒದಗಿಸುವ ಪ್ರಯತ್ನ ಪಡುತ್ತೇವೆ ಯಾಕೆಂದರೆ ರೈತ ಈ ದೇಶದ ಬೆನ್ನೆಲುಬು ರೈತರಿಗೆ ಯಾವ ಸಂಕಷ್ಟಗಳು ಆಗಬಾರದು ರೈತರಿಗೆ ಅವರ ಪರವಾಗಿ ಕಾರ್ಯನಿರ್ವಹಿಸಲು ಹಾಗೂ ಅವರ ಅಭಿವೃದ್ಧಿಪಡಿಸಲು ಅಧಿಕಾರಿಗಳಿಗೆ ಸೂಕ್ತ ಪರಿಹಾರಗಳನ್ನು ಶಾಸಕರು ಮಾಹಿತಿಯನ್ನು ನೀಡಿದರು ಹಾಗೂ ನೂತನವಾಗಿ ಆಯ್ಕೆಯಾಗಿರುವ ಸದಸ್ಯರುಗಳಿಗೆ ಒಂದು ಕಿವಿ ಮಾತನ್ನು ಸಹ ಹೇಳಿದರು ಯಾವ ಆಸೆ ಆಕಾಂಕ್ಷೆಗಳಿಗೆ ಒಳಗಾಗದೆ ರೈತರಿಗೆ ಸೇರಬೇಕಾದಂತಹ ಕೆಲಸಗಳನ್ನು ಒದಗಿಸಿಕೊಡಿ ಎಂದರು ಹಾಗೂ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಣಮಡಗು ತಿಪ್ಪೇಸ್ವಾಮಿ ಕೆ ಅವರು ಮಾತನಾಡುತ್ತಾ ರೈತರ ದೇವರೆಂದರೆ ತಪ್ಪೇನಿಲ್ಲ ಏಕೆಂದರೆ ದೇವರು ವರ ಕೊಡುವನೋ ಇಲ್ಲವೋ ಗೊತ್ತಿಲ್ಲ ಆದರೆ ರೈತ ಅನ್ನ ಕೊಡುವುದನ್ನು ಮಾತ್ರ ನಿಲ್ಲಿಸುವುದಿಲ್ಲ ರೈತರಿಗೆ ನಿಕಟವಾದಂತಹ ಸಂಬಂಧವನ್ನೂ ನಾವು ಹೊಂದಿದ್ದೇವೆ ಅವರಿಗಾಗಿ ಹಗಲಿರುಳು ಶ್ರಮಿಸುತ್ತೇವೆ ತಾಲೂಕಿನ ಅಭಿವೃದ್ಧಿಯನ್ನು ಸಹ ಮುನ್ನಡೆಸಿಕೊಂಡು ಹೋಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಚಿಕ್ಕ ಜೋಗಲಿ ಸಹಕಾರ ಸಂಘದ ಸಿಇಓ ಪಂಪಾಪತಿ, ಕ್ಷೇತ್ರಾಧಿಕಾರಿ ಕೊಟ್ರೇಶ್ ಕಾನಹೊಸಳಿ, ಕೆಜಿ ಕುಮಾರ್ ಗೌಡ, ಸಹಕಾರ ಸಂಘದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತಿಯಲ್ಲಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ
