ಗದಗ : ಗದಗ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು ಹಾಗೂ ಗ್ರಾಮ ಪಂಚಾಯತ್ ಬಳಗಾನೂರ ಇವರ ಸಂಯುಕ್ತಾಶ್ರಯದಲ್ಲಿ ನೊಂದಾಯಿತ ಕಟ್ಟಡ ಹಾಗೂ ಇತರೆ ಕಾರ್ಮಿಕರ ಮತ್ತು ಅವಲಂಬಿತ ಕುಟುಂಬದ ಸದಸ್ಯರ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಶಿಬಿರವನ್ನು ತಾಲೂಕ ಪಂಚಾಯ್ತಿ ಮಾಜಿ ಸದಸ್ಯರಾದ ಶೇಖಣ್ಣ ಎಸ್.ಅಗಸಿಮನಿ ಅವರು ಉಧ್ಘಾಟಿಸಿ ಮಾತನಾಡಿದ ಅವರು ಕಟ್ಟಡ ಕಾರ್ಮಿಕರ ಜೀವನ ಬಹಳ ಕಷ್ಟಕರವಾಗಿರುವಂತಹದ್ದು ಎರಡು ಮೂರು ಅಂತಸ್ಥಿನ ಬಿಲ್ಡಿಂಗ್ ಗಳಲ್ಲಿ ಕೆಲಸ ಮಾಡುವಾಗ ಬಹಳ ಜಾಗರೂಕತೆಯಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಶರಣಪ್ಪ ಚಟ್ರಿ ಮಾತನಾಡಿ ಕಾರ್ಮಿಕರು ಕಾಯಕ ಯೋಗಿಗಳು ಕಾರ್ಮಿಕರ ಶ್ರಮದಿಂದಲೇ ಸಾಕಷ್ಟು ಮನೆ ನಿರ್ಮಿಸಲು ಸಾಧ್ಯ, ಕೆಲಸ ಮಾಡುವ ಸಂದರ್ಭದಲ್ಲಿ ಜಾಗರೂಕರಾಗಿ ಕೆಲಸ ಮಾಡಬೇಕು ಅಷ್ಟೇ ಅಲ್ಲದೇ ಸಾಕಷ್ಟು ಜನ ತಮ್ಮ ಜೀವದ ಹಂಗನ್ನು ತೊರೆದು ಮತ್ತೊಬ್ಬರ ಮನೆ ನಿರ್ಮಿಸುವುದು ಕೂಡಾ ಸಾಹಸಮಯ ಕೆಲಸವೆಂದು ಪ್ರಶಂಸೆ ವ್ಯಕ್ತ ಪಡಿಸಿದರು.
ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುರೇಶ ವಾಯ್.ಚಲವಾದಿ ಮಾತನಾಡಿ ಕಾರ್ಮಿಕರು ತಮ್ಮ ಜೀವನವನ್ನೇ ಕಾಯಕಕ್ಕಾಗಿ ಮುಡಿಪಾಗಿಟ್ಟು ಬೇರೆಯವರಿಗೆ ಬೆಳಕಾಗುತ್ತಿರುವುದು ಹೆಮ್ಮೆಯ ವಿಷಯ ಕಾರ್ಮಿಕರಿಂದಾಗಿಯೇ ಇವತ್ತು ದೇಶ ರಾಜ್ಯಗಳಲ್ಲಷ್ಟೇ ಅಲ್ಲದೇ ಗ್ರಾಮಗಳಲ್ಲಿಯೂ ಕೂಡಾ ದೊಡ್ಡ ದೊಡ್ಡ ಮನೆ ನಿರ್ಮಾಣಗೊಳ್ಳುತ್ತವೆ. ನಾವು ಮನೆ ನಿರ್ಮಿಸಿದ ಮಾಲೀಕ ದೊಡ್ಡಮನೆ ಕಟ್ಟಿಸಿದನೆಂದು ಕೊಂಡಾಡುತ್ತೇವೆಯೇ ಹೊರತು ಕಾರ್ಮಿಕನ ಶ್ರಮದ ಬಗ್ಗೆ ಯಾರೂ ಮಾತನಾಡದಿರುವದು ದುರ್ಧೈವದ ಸಂಗತಿ. ಕಾರ್ಮಿಕರು ಇಲಾಖೆಯಿಂದ ಬರುವ ಯೋಜನೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುವುದರ ಮೂಲಕ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಒದಗಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಹೇಳಿದರು.
ಕಾರ್ಮಿಕ ಯುವ ಮುಖಂಡ ಮಂಜುನಾಥ ದೊಡ್ಡಮನಿ ಮಾತನಾಡಿ ನಾನೂ ಕೂಡಾ ಕಾರ್ಮಿಕನಾಗಿ ಸಾಕಷ್ಟು ಕಷ್ಟದಿಂದ ಬಂದಿರುತ್ತೇನೆ ಕಾರ್ಮಿಕರ ಬವಣೆಯನ್ನು ನಾನು ಅರಿತಿರುತ್ತೇನೆ ಇನ್ಮುಂದೆ ಗ್ರಾಮದ ಕಾರ್ಮಿಕರ ಬಾಳನ್ನು ಹಸನಗೊಳಿಸಲು ಶ್ರಮಿಸುತ್ತೇನೆ ಅಷ್ಟೇ ಅಲ್ಲದೆ ಕಾರ್ಮಿಕರಿಗೆ ಸಿಗುವ ಸರ್ಕಾರಿ ಸೌಲಭ್ಯವನ್ನು ಕಾರ್ಮಿಕರ ಮನೆಗಳಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆಂದು ಹೇಳಿದರು.
ಡಾ.ಸಚಿನ್ ಅವರು ಕಾರ್ಮಿಕರ ಆರೋಗ್ಯ ಚಿಕೆತ್ಸೆಯ ಕುರಿತು ಮಾಹಿತಿ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಶಿವಲೀಲಾ ಜಿಗಳೂರ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಸದಸ್ಯರುಗಳಾದ ಶ್ರೀ ಹನಮಪ್ಪ ಕಮಲದಿನ್ನಿ, ಶ್ರೀಮತಿ ದಿವ್ಯಾ ಬೇವಿನಮರದ, ಡಾ.ಪ್ರಜ್ವಲ್, ಡಾ.ಶ್ರೀನಿವಾಸ, ಡಾ.ಪ್ರೀತಿ, ಡಾ.ನಿಖಿತಾ, ಡಾ.ವಸಂತ, ಡಾ.ರವೀಣ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದರು. ಕಾರ್ಮಿಕ ಮುಖಂಡ ಯಲ್ಲಪ್ಪ ಭೋವಿ, ಕಾರ್ಮಿಕರಾದ ರಾಜು ದೊಡ್ಡಮನಿ, ಚಂದ್ರಶೇಖರ ಭಜಂತ್ರಿ, ಅಲ್ಲಾಭಕ್ಷಿ ನೀರಲಗಿ, ಹನಮಂತ ಭಜಂತ್ರಿ, ಮೌಲಾಸಾಬ ಗುಡಿಗೇರಿ, ಶಿವಾನಂದ ದೊಡ್ಡಮನಿ, ಮುತ್ತು ಶಂಡ್ಲಿಗೇರಿ, ರವಿ ಚಲವಾದಿ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
