ಕಲಬುರಗಿ: ಮೊಬೈಲ್, ರಮ್ಮಿ, ಕ್ರಿಕೆಟ್ ಬೆಟ್ಟಿಂಗ್ ಯುವಕರ ಬದುಕಿಗೆ ಪ್ರಸ್ತುತ ಸಮಾಜದಲ್ಲಿ ಮಾರಕವಾಗಿ ಸಂಭವಿಸುತ್ತಿವೆ, ಹೆತ್ತರು ಹೆತ್ತವರಿಗೆ ಆಸರೆಯಾಗಬೇಕಾದ ವಯಸ್ಸಿನಲ್ಲಿ ಯುವಕರು ಹಾಸಿಗೆ ಹಿಡಿದು ಪ್ರಾಣ ಕಳೆದುಕೊಳ್ಳುವ ಸ್ಥಿತಿ ತಲುಪುತ್ತಿದ್ದಾರೆ ಇದು ಹೀಗೆ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ, ಈ ಕುರಿತು ಪ್ರತಿಯೊಬ್ಬ ಪಾಲಕರು ಜಾಗೃತಿ ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ಕಮಲಾಪುರ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ ಹೇಳಿದರು.
ಕಮಲಾಪುರ ತಾಲೂಕಿನ ಲೇಂಗಟಿ ಮಂಗಳವಾರ ಸಂಜೆ ಶ್ರೀ ಕರಿಬಸವೇಶ್ವರರ 62ನೇ ಪುಣ್ಯ ಸ್ಮರಣೋತ್ಸವ ನಿಮಿತ್ಯ ಹಮ್ಮಿಕೊಂಡ ಪ್ರವಚನ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು ಮಾನವ ಬದುಕಿನಲ್ಲಿ ಸಂಕಷ್ಟಗಳು ಎದುರಾಗುವುದು ಸಹಜ ಗುರುವಿನ ಸನ್ಮಾರ್ಗದಲ್ಲಿ ನಡೆದರೆ ಬರುವ ಸಂಕಷ್ಟಗಳು ದೂರವಾಗಿ ಸಂತೃಪ್ತ ಜೀವನ ನಡೆಸಲು ಸಾಧ್ಯವಾಗುತ್ತದೆ, ಹಿಂದೆ ಗುರು ಮುಂದೆ ಗುರಿ ಇದ್ದಾಗ ಯಾವುದೇ ಗುರಿ ಸಾಧನೆ ಕಷ್ಟವಾಗುವುದಿಲ್ಲ ಎಂದರು.
ಲೇಂಗಟಿ ಶ್ರೀ ಪ್ರಭುಲಿಂಗ ಮಹಾರಾಜರು ಮಾತನಾಡಿ ಇಂದಿನ ಆಧುನಿಕ ಜಗತ್ತಿನಲ್ಲಿ ತಾಂತ್ರಿಕತೆಯ
ಭರಾಟೆಯಲ್ಲಿ ಮಾನವೀಯ ಮೌಲ್ಯಗಳು ಕ್ಷೀಣಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ, ಇದು ಹೀಗೆಯೇ ಮುಂದುವರೆದರೆ ಅಪಾಯ ಕಟ್ಟಿಟ್ಟ ಬುತ್ತಿ, ಆದ್ದರಿಂದ ಪಾಲಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಸಂಸ್ಕಾರಗಳನ್ನು ಕಲಿಸಬೇಕು ಎಂದರು.
ಬೀದರ್ ಜಿಲ್ಲೆಯ ಬ್ಯಾಲಹಳ್ಳಿಯ ಶ್ರೀ ನಾಗಲಿಂಗಯ್ಯ ಸ್ವಾಮಿಗಳು ಆಶೀರ್ವಚನ ನೀಡಿ ತಾಯಿ ತನ್ನ ಮಕ್ಕಳನ್ನ ಎತ್ತು ಹೊತ್ತು ದೊಡ್ಡವರನ್ನಾಗಿ ಮಾಡಿ ಶಾಲೆಯಲ್ಲಿ ದಾಖಲಾತಿ ಮಾಡಿಸುವಾಗ ಮಗುವಿನ ಹೆಸರಿನೊಂದಿಗೆ ತಂದೆ ಹೆಸರು ಬರೆಸಿ ಬರುತ್ತಾಳೆ, ಇದು ತಾಯಿಯ ನಿಸ್ವಾರ್ಥ ಮನೋಭಾವ ಎತ್ತು ತೋರುತ್ತದೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ಉದಯಕುಮಾರ್ ಕುಲಕರ್ಣಿ , ರಾಜಕುಮಾರ್ ಲೇಂಗಟಿ , ಸಂಜಯ್ ನಾಟಿಕರ್, ಶಿವಕುಮಾರ್ ತೆಂಗಳಿ, ಶಿವಾನಂದ ಗದುಗೆ, ಕಾಶಿನಾಥ್ ಹಳಕೆ, ಡಾ. ಕುಪೇಂದ್ರ, ಅರ್ಜುನ್ ದೇಗಾವ್, ಶ್ಯಾಮರಾವ್, ಮೇಘರಾಜ್ ದರ್ಜಿ, ಶಮಣ್ಣ ಕೊಳ್ಳೋರೆ ಗುಂಡಪ್ಪ ಕೊಳ್ಳುರೆ, ವಿಠಲ ಚಿಂಚನಸೂರ, ದತ್ತು ಗೌಂಡಿ ಮಸ್ತಾನ್ ಸಾಬ್ ಪಠಣ, ಮಹದೇವ ಮಾಂಗ್ ಇತರರು ಇದ್ದರು.
