ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್. ಗ್ರಾಮದ ಡಾ.ಎಂ ಬಿ ಹಡಪದ ಸುಗೂರ ಎನ್. ಇವರ ನಿಸ್ವಾರ್ಥ ಸೇವೆ ಗುರುತಿಸಿ ಇದೇ 2025 ನೇ ಸಾಲಿನ ಮುಂಬಯಿ ಮಹಾರಾಷ್ಟ್ರ ರಾಜ್ಯದ ಎ.ಬಿ ಮಾಧ್ಯಮ ಮೀಡಿಯಾ ವತಿಯಿಂದ ನೀಡುತ್ತಿರುವ ‘ಇಂಟರ್ ನ್ಯಾಷನಲ್ ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ ಪ್ರಶಸ್ತಿ, ಪ್ರಶಸ್ತಿಯ ಸರ್ಟಿಫಿಕೇಟ್ ನೀಡಿ ಗೌರವಿಸಲಾಯಿತು. ಕಾಯಕದಲ್ಲಿ ಸಮಾಜ ಮುಖಿ ಚಿಂತನೆಗಳನ್ನು ಮೈಗೂಡಿಸಿಗೊ0ಡು ಮುನ್ನಡೆದಾಗ ಸಾರ್ಥಕ ಬದುಕು ಸಾಧ್ಯವಾಗುತ್ತದೆ, ಕಷ್ಟಗಳನ್ನು ಮೆಟ್ಟಿ ನಿಂತರೆ ಸಾಧನೆ ಸುಲಭ ಸಾಧ್ಯ, ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುವುದೇ ನಿಜವಾದ ಸಮಾಜ ಸೇವೆ
ಎಂದು ಈ ಸಂದರ್ಭದಲ್ಲಿ ಡಾ.ಮಲ್ಲಿಕಾರ್ಜುನ ಬಿ ಹಡಪದ.ಸುಗೂರ ಎನ್ ಕಲಬುರಗಿ ಜಿಲ್ಲೆಯ ಸಂಘಟನಾ ಕಾರ್ಯದರ್ಶಿಗಳು ಮತ್ತು ಸಮಾಜದ ಸೇವಕರು ತಿಳಿಸಿದರು.
ಇವರು ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ವತಿಯಿಂದ ಅನಾಥರಿಗೆ ಮಾಡುತ್ತಿರುವ ಉಚಿತ ಕ್ಷೌರ ಸೇವೆಯನ್ನು ಗುರುತಿಸಿ ಇದೇ 2025 ನೇ ವರ್ಷದ ಸಾಲಿನಲ್ಲಿ ಇವರು ಮಾಡುತ್ತಿರುವ ಸಮಾಜದ ಸೇವೆಯ ಹಾಗೂ ಈ ಪ್ರಾಮಾಣಿಕ ಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸುಮಾರು ಒಟ್ಟು 1465ಕ್ಕೂ ಹೆಚ್ಚು ಜನರಿಗೆ ಉಚಿತ
ಕ್ಷೌರ ಸೇವೆ ಮಾಡಿದ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜದ ಸೇವಕ ಡಾ.ಮಲ್ಲಿಕಾರ್ಜುನ ಬಿ.ಹಡಪದ ಸುಗೂರ ಎನ್. ಅವರು ಸಮಾಜದ ಸಂಘಟನೆಯ ಜೊತೆ ಜೊತೆಯಲ್ಲಿ ಈ ರೀತಿಯ ವಿಭಿನ್ನ ಸೇವೆ ಮಾಡುತ್ತಿದ್ದಾರೆ. ಈ ಸಮಾರಂಭವು ಕ್ರೀಡೆ, ಸಮಾಜ ಸೇವೆ, ಶಿಕ್ಷಣ, ಮಾನವಿಕ ವಿಷಯಗಳಂತಹ ತಮ್ಮ ಆಯ್ದ ಕಾರ್ಯ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಜನರನ್ನು ಗುರುತಿಸುವ ಮತ್ತು ಗೌರವಿಸುವ ಗುರಿಯನ್ನು ಹೊಂದಿದೆ. ಇದನ್ನು ಗಮನಿಸಿ ಈ ಎ.ಬಿ ನ್ಯೂಸ್ ಮೀಡಿಯಾ ಮಾಧ್ಯಮದವರು ಅವರ ನಿಸ್ವಾರ್ಥ ಸೇವೆಗೆ ಅನೇಕ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳ ಜೊತೆಗೆ ಈ ಪ್ರಶಸ್ತಿಯೂ ಸೇರಿದೆ ನಮ್ಮ ಜೊತೆಯಲ್ಲಿ ನಮ್ಮ ಸಮಾಜದ ಜನತೆಯ ಸಹಕಾರದಿಂದ ಈ ಉಚಿತ ಕ್ಷೌರ ಸೇವೆಯನ್ನು ಸಾಧಿಸಲು ನಮಗೆ ಈ ಕ್ಷೌರಿಕ ವೃತ್ತಿಯಲ್ಲಿಯೇ ಈ ರೀತಿಯ ಸಾಧನೆ ಮಾಡಲು ನಮಗೆ ಅನೇಕರು ಸಹಕರಿಸಿದರು ಸಮಾಜದ ಗುರುಗಳು, ಅನೇಕ ಮಠಾಧೀಶರ ಆಶೀರ್ವಾದ ಮತ್ತು ಸಮಾಜದ ಬಂಧುಗಳ ಸಹಕಾರ, ಈ ಸೇವೆಯಲ್ಲಿ ನಮ್ಮನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವೆ ಮಾಡಲು ಪ್ರೇರಣೆಯನ್ನು ನೀಡಿದರು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ( ಕ್ಷೌರಿಕ) ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಡಾ.ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್ ಅವರು ಪತ್ರಿಕೆಗೆ ತಿಳಿಸಿದರು.
