ಕಲಬುರಗಿ/ ಕಾಳಗಿ:
ಮಕ್ಕಳನ್ನು ಉತ್ತಮ ಆದರ್ಶ ವ್ಯಕ್ತಿಯನ್ನಾಗಿ ಬೆಳೆಸಿ : ಶ್ರೀ ಶಿವ ಬಸವೇಶ್ವರ ದಕ್ಷಿಣಾಭಿವೃದ್ಧಿ ಟ್ರಸ್ಟ್ ಸಂಚಾಲಿತ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನ
ಭಾರತೀಯ ಸಂಸ್ಕೃತಿಯನ್ನು ಬೆಳೆಸಬೇಕಾದರೆ ಶಿಕ್ಷಣವು ಅತ್ಯ ಅಮೂಲ್ಯವಾಗಿದೆ. 24ನೇ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಮೊದಲನೇದಾಗಿ ಶೋಭಾ ಯಾತ್ರೆ ಮೂಲಕ ಚಾಲನೆ ನೀಡಲಾಯಿತು. ರಾಷ್ಟ್ರ ನಾಯಕರ ಹಾಗೂ ದೇಶಭಕ್ತರ, ವೀರ ಮಾತೆಯರ ವೇಷ ಧರಿಸಿ ನೃತ್ಯದ ಜೊತೆಗೆ ಶೋಭಾಯಾತ್ರೆಗೆ ಒಂದು ವಿಶೇಷ ಮೆರುಗನ್ನು ಕೊಡಲಾಯಿತು. ನಂತರ ತಾಯಿಯೇ ಮೊದಲ ಗುರು ಎಂಬ ನುಡಿಯಂತೆ ತಾಯಿ, ಮಕ್ಕಳ ಒಂದು ಬಾಂಧವ್ಯ, ಅನ್ಯೋನತೆ, ಪ್ರೀತಿ, ಮಮತೆ, ಎಲ್ಲವನ್ನೂ ಒಟ್ಟುಗೂಡಿಸುವ ಸಂಸ್ಕೃತಿಯನ್ನು ನಮ್ಮ ಭಾರತ ದೇಶದಲ್ಲಿ ಉಳಿದು ಬಂದಿದೆ. ತಾಯಿಯರಿಂದ ತಮ್ಮ ಮಕ್ಕಳಿಗೆ ಕೈತುತ್ತು ಉಣಿಸುವುದರ ಜೊತೆಗೆ ಅಮ್ಮನ ಕೈ ತುತ್ತು ಅಮೃತಕ್ಕೆ ಸಮಾನವಾಗಿದೆ ಎಂದು ಕೊಡ್ಲಿಯ ಪೂಜ್ಯ ಬಸವಲಿಂಗ ಶಿವಾಚಾರ್ಯರು ಹೇಳಿದರು. ಕಾಳಗಿ ಪಟ್ಟಣದ ಶ್ರೀ ಶಿವ ಬಸವೇಶ್ವರ ದಕ್ಷಿಣಾಭಿವೃದ್ಧಿ ಟ್ರಸ್ಟ್ ಸಂಚಾಲಿತ ಶಿಶು ಸಂಸ್ಕಾರ ಕೇಂದ್ರ, ಶ್ರೀ ಶಿವ ಬಸವೇಶ್ವರ ಹಿ ಪ್ರಾ, ಶಾಲೆ ಹಾಗೂ ಕಾಳಪ್ಪ ಗೌಡ ಪೊಲೀಸ್ ಪಾಟೀಲ್ ಪ್ರೌಢ ಶಾಲೆ ಈ ಮೂರು ಪ್ರಕಲ್ಪಗಳ 24ನೇ ವಾರ್ಷಿಕ ಸ್ನೇಹ ಸಮ್ಮೇಳನ ಸಮಾರಂಭ ನಡೆಯಿತು.
ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಎಂಬ ಮಾತಿನಂತೆ ಮಕ್ಕಳಲ್ಲಿ ಆಚಾರ, ವಿಚಾರ,ಸಂಸ್ಕಾರ, ಸಂಸ್ಕೃತಿ, ನೈತಿಕ ಮೌಲ್ಯಗಳು ಎಲ್ಲವೂ ಬೆಳೆಯಬೇಕಾದರೆ ಶಿಕ್ಷಣವು ಮಹತ್ವದಾಗಿದೆ, ಹಿಂದಿನ ಕಾಲದ ಗುರುಕುಲ ಶಿಕ್ಷಣಕ್ಕೆ ಸೇರಿದ ಮೇಲೆ ಅವರು ಶಿಕ್ಷಣ ಮುಗಿಸಿ ಬರುವಾಗ ಋಷಿಗಳಾಗಿ ಜ್ಞಾನಿಗಳಾಗಿ ಹೊರ ಬರುತ್ತಿದ್ದರು. ಶಿಕ್ಷಣವು ಪ್ರಮಾಣಕ್ಕಾಗಿ ಕೆಲಸ ಮಾಡಬೇಕು ಮಕ್ಕಳನ್ನು ಜ್ಞಾನಿಗಳಾಗಿ ಮಾಡುವ ಜವಾಬ್ದಾರಿ ಶಿಕ್ಷಕರು ಮತ್ತು ಪಾಲಕರ ಮೇಲೆ ಇದೆ ಮತ್ತು ಶಿಕ್ಷಣ ಗುಣಮಟ್ಟ ಪ್ರತಿ ವರ್ಷವೂ ಹೆಮ್ಮರವಾಗಿ ಬೆಳೆಯುತ್ತಿದೆ ಎಂದು ದಿವ್ಯ ಸಾನಿಧ್ಯ ವಹಿಸಿದ ಹೊನ್ನ ಕಿರಣಗಿಯ ಪರಮಪೂಜ್ಯ ಶ್ರೀ ಷ. ಬ್ರ. ಚಂದ್ರಗುಂಡ ಶಿವಾಚಾರ್ಯರು ಆಶೀರ್ವಚನದಲ್ಲಿ ಹೇಳಿದರು.
ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಕೆಲಸವನ್ನು ಶ್ರೀ ಶಿವ ಬಸವೇಶ್ವರ ಶಿಕ್ಷಣ ಸಂಸ್ಥೆ ಮಾಡುತ್ತಿದೆ. ಅಕ್ಷರ,ಅರಿವು, ಜೀವನ, ಶಿಕ್ಷಣ, ಸಂಸ್ಕಾರವು ಮಕ್ಕಳಲ್ಲಿ ಸಂಸ್ಕಾರ ಕೊಟ್ಟು ಈ ಸಂಸ್ಥೆ ಹೆಮ್ಮೆಯವಾಗಿ ಬೆಳೆಯುತ್ತಿದೆ ಎಂದು ಪೂಜ್ಯ ಶ್ರೀ ಚಿಕ್ಕ ಗುರುನಂಜೇಶ್ವರ ಮಹಾಸ್ವಾಮಿಗಳು ಭರತ್ನೂರ್ ಈ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು.
ಕರ್ನಾಟಕದ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಗುಂಡಪ್ಪ ಕರೆನೋರ್ ವಾರ್ಷಿಕ ಸ್ನೇಹ ಸಮ್ಮೇಳನ ಕುರಿತು ಮಾತನಾಡಿದರು. ಕಾಳಗಿ ಹಿರೇಮಠ ಪೂಜ್ಯ ಶ್ರೀ ನೀಲಕಂಠ ಮರಿದೇವರು ಈ
ಕಾರ್ಯಕ್ರಮದ ಮುಂದಾಳತ್ವ ವಹಿಸಿಕೊಂಡಿದ್ದರು. ಈ ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಶ್ರೀ ಸತ್ಯನಾರಾಯಣ ವರಮಹಾಲಿ ಪ್ರಧಾನರು ಎಸ್ ಬಿ ಡಿ ವಿ ಟಿ ಕಾಳಗಿ ವಹಿಸಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ಶರಣಗೌಡ ಪೊಲೀಸ್ ಪಾಟೀಲ್ ಅಧ್ಯಕ್ಷರು ಕೃಷಿಕ ಸಮಾಜ ಕಾಳಗಿ ತಾಲೂಕು, ಅತಿಥಿಗಳಾಗಿ ಶ್ರೀ ಶಿವಶರಣಪ್ಪ ಕಮಲಾಪುರ, ಶ್ರೀ ಮಲ್ಲಿನಾಥ್ ಪಾಟೀಲ್ ಕಾಳಗಿ ಕಾರ್ಯದರ್ಶಿಗಳು ಬಿಜೆಪಿ ಜಿಲ್ಲಾ ರೈತ ಮೋರ್ಚಾ ಕಲಬುರ್ಗಿ , ಶ್ರೀ ಜಗದೀಶ್ ಜೆ ಮಾಲಿ ಪಾಟೀಲ್, ಉದ್ಯಮಿ ಶ್ರೀ ವಿಶ್ವನಾಥ್ ವನಮಾಲಿ, ಶ್ರೀ ಶಿವಶರಣಪ್ಪ ಬಡಿಗೇರ್, ಸೋಮಶೇಖರ್ ಮಾಕಪ್ನೂರ್, ವಿದ್ಯಾಸಾಗರ ಹಣಕುಣಿ, ಸಂತೋಷ್ ಪತಂಗೆ, ಗೂಡು, ಮಾಸ್ಟರ್ ಕಮಲಾಪುರ್, ನೀಲಕಂಠ ಮಡಿವಾಳ, ಭೀಮರಾವ್ ಮಲಘಾಣ, ರಾಜಕುಮಾರ ರಾಜಾಪುರ್, ಜಯಶ್ರೀ ಕಿಟ್ಟದ್, ಪಾರ್ವತಿ ಯಲಲ್ಕರ್, ಬಾಬು ನಾಟಕಾರ, ಮಲ್ಲಮ್ಮ ಎಸ್ ಮೇಲ್ಕೇರಿ ಅಧ್ಯಕ್ಷರು ಗ್ರಾಮ ಪಂಚಾಯತ್ ಕೋರವಾರ, ಬಸವರಾಜ ಜೆ ಬಸಲಿಂಗ ಸದಸ್ಯರು ಗ್ರಾಮ ಪಂಚಾಯತ್ ಕೋರವಾರ ರವಿ ಶೆಟ್ಟಿ ಗೋಟೂರ್, ಶಬ್ಬೀರ್ ಅಹ್ಮದ್, ನಾರಾಯಣ ಹಡಪದ, ಬಾಳಾ ಸಾಹೇಬ್ ಸಂಗೇದಾರ, ಗುರು ನಂಜಯ್ಯ ಹಿರೇಮಠ, ವಿರೂಪಾಕ್ಷಯ್ಯ ಹಿರೇಮಠ್ ಪ್ರೌಢ ವಿಭಾಗದ ಮುಖ್ಯಗುರುಗಳು, ಪ್ರಕಾಶ್ ಮಠಪತಿ, ರೇವಣ ಸಿದ್ದಪ್ಪ ಕೆ ಪಾಟೀಲ್, ಸಂಗೀತ ಬೊಮ್ಮಾಣಿ, ಶ್ರೀಕಾಂತ್ ಸರ್, ಅಂಜನ ಮಾತಾಜಿ, ಪ್ರೇಮಾವತಿ ಮಾತಾಜಿ, ಚಂದ್ರಶೇಖರ್ ಆರ್ ಪಾಟೀಲ್, ವನಿತಾ ಪಾಟೀಲ್, ಶೋಭಾ ವತಿ ಮಾತಾಜಿ, ಶೃತಿ ಹಿರೇಮಠ, ಶಿಲ್ಪಾ ಮಾತಾಜಿ, ಶೃತಿ ಮಾತಾಜಿ, ಸತೀಶ್ ಪಾಟೀಲ್ ಮುಖ್ಯ ಗುರುಗಳು ನಿರೂಪಣೆ ಮಾಡಿದರು, ಶರಣು ಮೇಲಕೆರಿ ಸ್ವಾಗತಿಸಿದರು, ಪ್ರಕಾಶ್ ಮಠಪತಿ ವಂದನಾಪಣೆ ಮಾಡಿದರು. 2023 -24ನೇ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವರದಿ: ಚಂದ್ರಶೇಖರ್ ಆರ್ ಪಾಟೀಲ್
