ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗ ಗ್ರಾಮ ಆಡಳಿತ ಅಧಿಕಾರಗಳ 2ನೆ ಹಂತದ ಅನಿರ್ದಿಷ್ಟಾವಧಿ ಮುಷ್ಕರ 9ನೆ ದಿನಕ್ಕೆ ಕಾಲಿಡುತಿದ್ದರಿಂದ ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ರವರ ನೇತೃತ್ವದಲ್ಲಿ ಇಂದು ಮುಷ್ಕರಕ್ಕೆ ಬೆಂಬಲ ವ್ಯಕ್ತ ಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಗೌಡೆ ಗೌಡ ಮಾತನಾಡಿ ಗ್ರಾಮ ಲೆಕ್ಕಾಧಿಕಾರಿಗಳು ಅನಿರ್ದಿಷ್ಟ ಮುಷ್ಕರ ಮಾಡಿರುವುದರಿಂದ ಕಂದಾಯ ಇಲಾಖೆಯ ಸಂಭಂದಪಟ್ಟ ಕೆಲಸ ಕಾರ್ಯಗಳಿಗೆ ತೊಂದರೆ ಆಗಿರುವುದಿಂದ ಸರ್ಕಾರ ಸ್ಪಂದಿಸಿ ಆದಷ್ಟು ಬೇಗ ಅವರಿಗೆ ಬೇಕಾದ ಸವಲತ್ತು ಗಳಾದ ಲ್ಯಾಪ್ ಟಾಪ್ ಹಾಗು ಮೊಬೈಲ್ ಸೌಲಭ್ಯ ಇತರ ಸೌಲಭ್ಯ ಕಲ್ಪಿಸಿ ಕೊಡಬೇಕೆಂದರು. ಪ್ರಭಾರ
ಗ್ರಾಮ ರಾಜಸ್ವ ನಿರೀಕ್ಷಕ ಶೇಷಣ್ಣ ಮಾತನಾಡಿ ಘನ ಸರ್ಕಾರ ದಯ ಮಾಡಿ ನಮ್ಮ ಗ್ರಾಮ ಲೆಕ್ಕ ಆಡಳಿತ ಅಧಿಕಾರಿಗಳು ಲ್ಯಾಪ್ ಟ್ಯಾಪ್ ಮೊಬೈಲ್ ಹಾಗೂ ಸೂಕ್ತವಾದ ಸೌಲಭ್ಯ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿಕೊಂಡರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಹನೂರು ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್, ಪಳನಿಸ್ವಾಮಿ,ನಾಗರಾಜು ಶಿವಣ್ಣ, ವೆಂಕಟೇಶ್, ವಿವಿಧ ಗ್ರಾಮದ ಗ್ರಾಮ ಲೆಕ್ಕಾಧಿಕಾರಿಗಳು ಇದ್ದರು.
ವರದಿ ಉಸ್ಮಾನ್ ಖಾನ್
