
ರಾಯಚೂರು ನಗರದ ಆಸ್ಕಿಹಾಳ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಸರಕಾರಿ ಪ್ರೌಢ ಶಾಲೆ ಆಸ್ಕಿಹಾಳ ಯುಕೋ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಇಂದು ಭೂಮಿಯ ಮೇಲಿನ ನಿರುಪಯುಕ್ತ ವಸ್ತುಗಳಾದ ಪ್ಲಾಸ್ಟಿಕ್ ಡಬ್ಬಿಗಳ ಮೂಲಕ ಪಕ್ಷಿಗಳಿಗೆ ನೀರು ಮತ್ತು ಕಾಳು ಇರಿಸುವ ಪಕ್ಷಿಗಳ ಅರವಟ್ಟಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ವಿಜಯ ಲಕ್ಷ್ಮಿ ಮಾತನಾಡಿ ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿನ ದಾಹವನ್ನು ನಿಗಿಸಲು ಪ್ರತಿಯೊಬ್ಬರೂ ಸಹಕರಿಸಬೇಕು ಹಾಗೂ ಪ್ರತಿವರ್ಷ ವನಸಿರಿ ತಂಡ ಏಪ್ರಿಲ್ ಫೂಲ್ ಬದಲಿಗೆ ಎಪ್ರೀಲ್ ಕೂಲ್ ಆಚರಿಸುತ್ತಿರುವುದು ತುಂಬಾ ಒಳ್ಳೆಯ ಕಾರ್ಯ ಎಂದು ವನಸಿರಿ ತಂಡದ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವರ್ಷ ಎಪ್ರೀಲ್ ಗೂ ಮೊದಲೇ ಆಚರಿಸಲಾಗುತ್ತಿದೆ. ಯಾಕಂದರೆ ಬೇಸಿಗೆ ಬಿಸಿಲು ಈಗಿನಿಂದಲೇ ಚುರುಕುಗೊಳ್ಳುತ್ತಿರುವುದರಿಂದ ಭೂಮಿಯ ಮೇಲೆ ನೀರಿನ ಪ್ರಮಾಣ ಕಡಿಮೆಯಾಗಿ ಪ್ರಾಣಿ ಪಕ್ಷಿಗಳಿಗೆ ನೀರಿನ ಅಹಕಾರ ಉಂಟಾಗಿದೆ ಆದ್ದರಿಂದ ಈವಾಗಿನಿಂದಲೇ ಪ್ರಾಣಿ ಪಕ್ಷಿಗಳಿಗೆ ಪ್ರಾರಂಭಿಸಿದ್ದಾರೆ. ಆದರೆ ಅದಕ್ಕೆ ಬೇಕಾದ ಮಣ್ಣಿನ ಮಡಿಕೆಗಳನ್ನು ಇನ್ನೂ ತಯಾರಿಸುತ್ತಿರುವುದರಿಂದ ಸದ್ಯ ಈ ಭೂಮಿಯ ಮೇಲೆ ನಿರೂಪಯುಕ್ತ ವಸ್ತುಗಳನ್ನು ಬಳಸಿಕೊಂಡು ಈ ಪ್ಲಾಸ್ಟಿಕ್ ಡಬ್ಬಿಗಳಿಂದ ಅರವಟ್ಟಿಗೆಗಳನ್ನು ಕಟ್ಟಲಾಗುತ್ತಿದೆ ಮುಂದಿನ ದಿನಗಳಲ್ಲಿ ಮಣ್ಣಿನ ಅರವಟ್ಟಿಗೆ ಕಟ್ಟುವ ಮೂಲಕ ಇದೇ ಕಾರ್ಯಕ್ರಮವನ್ನು ಇನ್ನಷ್ಟು ಪಕ್ಷಿಗಳಿಗೆ ಕಾಳು ನೀರು ಇರಿಸುವ ಕಾರ್ಯಕ್ಕೆ ನಮ್ಮ ಶಾಲೆ ಮುಂದಾಗಲಿದೆ ಎಂದು ತಿಳಿಸಿದರು.
ವೀರಶೈವ ಬಿ.ಎಡ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಕೂಡಾ ಈ ಕಾರ್ಯಕ್ರಮಕ್ಕೆ ಸಹಕರಿಸಿದರು.
ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ದೇವದುರ್ಗ ತಾಲೂಕ ಅಧ್ಯಕ್ಷರಾದ ಪ್ರಕಾಶ ಪಾಟೀಲ್ ಶಾವಂತಗೇರಾ ಕಾರ್ಯದರ್ಶಿಯಾದ ಸುನಿಲ ಜಾಡಲ್ದಿನ್ನಿ ಹಾಗೂ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಮಕ್ಕಳು ಮತ್ತು ಭಾಗವಹಿಸಿದ್ದರು.
