ಬೀದರ್ : 2019 ನೇ ಸಾಲಿನಲ್ಲಿ ಮಂಠಾಳ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಶಿರಗೂರ ಗ್ರಾಮದಲ್ಲಿ ಘಟನೆ ಜರುಗಿದ್ದು, ಮಂಠಾಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ: 85/2019 ಕಲಂ 143, 147, 148, 302, 307, 324, 342, 504,506,149 R/w 3(1), (R),(S),X 3(2),(V) SC/ST Act ಅಡಿಯಲ್ಲಿ ಅಂದಿನ ಪಿ.ಎಸ್.ಐ ಶ್ರೀ ಬಸಲಿಂಗಪ್ಪರವರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಪ್ರಕರಣದ ಮುಂದಿನ ತನಿಖೆಯನ್ನು ಅಂದಿನ ಹುಮನಾಬಾದ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ಮಹೇಶ್ವರಪ್ಪಾ ರವರು ತನಿಖೆಯನ್ನು ಅಚ್ಚುಕಟ್ಟಾಗಿ ನಡೆಸಿ ದೋಷರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿರುತ್ತಾರೆ.
ಮಾನ್ಯ ನ್ಯಾಯಾಲಯದ ಸ್ಪೇಷಲ್. ಸಿ ಸಂ: 793/2019 ರಂತೆ ಪ್ರಕರಣದ ಮುಂದಿನ ವಿಚಾರಣೆಯು ಮಾನ್ಯ 02 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ಬಸವಕಲ್ಯಾಣದಲ್ಲಿ ಜರುಗಿದ್ದು, ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕರಾಗಿ ಶ್ರೀ ಬಸವಂತ ರೆಡ್ಡಿ, ರವರು ಶಿಸ್ತು ಬದ್ಧವಾಗಿ ನ್ಯಾಯಾಲದಲ್ಲಿ ವಾದ ಮಂಡಿಸಿದ್ದರಿಂದ ಮಾನ್ಯ 2 ನೇ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರವರಾದ ಮಾನ್ಯ ಶ್ರೀ ರಾಘವೇಂದ್ರ ಎಸ್. ಚನ್ನಬಸಪ್ಪರವರು ಪ್ರಕರಣದ ಐದು ಜನ ಆರೋಪಿತರಿಗೆ 10 ವರ್ಷ ಕಠಿಣ ಕಾರಾವಾಸ ಮತ್ತು ತಲಾ 47000/-ರೂ. ದಂಡ ವಿಧಿಸಿರುತ್ತಾರೆ.
ಪ್ರಕರಣದ ತನಿಖೆಯನ್ನು ಶಿಸ್ತು ಬದ್ದವಾಗಿ ಮಾಡಿ ನ್ಯಾಯಾಲಯಕ್ಕೆ ದೊಷಾರೋಪಣೆ ಪಟ್ಟಿ ಸಲ್ಲಿಸಿದ ಅಂದಿನ ಹುಮನಾಬಾದ ಉಪವಿಭಾಗದ ಉಪಾಧೀಕ್ಷಕರಾದ ಶ್ರೀ ಮಹೇಶ್ವರಪ್ಪ ರವರು ಮತ್ತು ತನಿಖೆಗೆ ಸಹಕರಿಸಿದ ತನಿಖಾ ಸಹಾಯಕ ಶ್ರೀ ಶಕೀಲ ಐ.ಎಸ್, ಕೋರ್ಟ ಕರ್ತವ್ಯ ನಿರ್ವಹಿಸುತ್ತಿದ್ದ ಮಂಠಾಳ ಪೊಲೀಸ್ ಠಾಣೆಯ ಶ್ರೀ ಸತೀಶ ಸಿಂಧೆ, ಕರುಣರೆಡ್ಡಿ, ಹಾಗೂ ಸರ್ಕಾರದ ಪರವಾಗಿ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಶ್ರೀ ಬಸವಂತ ರೆಡ್ಡಿ ರವರಿಗೆ ಅಭಿನಂದನೆಗಳು.
ಬೀದರ್ ಜಿಲ್ಲೆಯ ಪೊಲೀಸರು ಆರೋಪಿತರಿಗೆ ಕಠಿಣ ಶಿಕ್ಷೆ ಕೊಡಿಸುವಲ್ಲಿ ಹಾಗೂ ಅಪರಾಧ ಮುಕ್ತ ಜಿಲ್ಲೆಗೊಳಿಸಲು ಜಿಲ್ಲೆಯ ಪೊಲೀಸರ ಕಾರ್ಯಾಚರಣೆಯು ಮುಂದುವರೆಯಲಿದೆ.
- ಪ್ರದೀಪ್ ಗುಂಟಿ, ಐ.ಪಿ.ಎಸ್., ಪೊಲೀಸ್ ವರಿಷ್ಠಾಧಿಕಾರಿಗಳು, ಬೀದರ ಜಿಲ್ಲೆ ಬೀದರ.
ವರದಿ : ಶ್ರೀನಿವಾಸ ಬಿರಾದಾರ
