ಆಕಾಶ ಎತ್ತರಕ್ಕೆ ನಿಂತ ಕಲ್ಪವೃಕ್ಷವೇ
ಮೋಡಗಳಿಗೆ ಮುತ್ತ ನಿಟ್ಟಿರುವೆ
ಪಕ್ಷಿಗಳಿಗೆ ಆಶ್ರಯವ ನೀಡಿರುವೆ
ರೈತರನ್ನು ಕೈ ಹಿಡಿದು ನಡೆಸಿರುವೆ
ಕಲ್ಪವೃಕ್ಷದ ಎಳನೀರ ರುಚಿಯು
ಜನರ ಆರೋಗ್ಯಕ್ಕೆ ಬಲು ಹಿತವು
ದೇವರಿಗೆ ತಂಗಿನ ಕಾಯಿಯು
ಅಡುಗೆ ಮಾಡಲು ಚಟ್ನಿಯು
ನಿನ್ನಿಂದ ಬಲು ಉಪಯೋಗವಿದೆ
ಇದು ನಮ್ಮ ಜನರಿಗೆ ಅರ್ಥವಾಗಿದೆ
ಕುಶಲ ಕೈಗಾರಿಕೆಗೆ ದಾರಿ ಮಾಡಿದೆ
ಜನರ ಜೀವನಕ್ಕೆ ಆಸರೆಯಾದೆ
ಕಲ್ಪವೃಕ್ಷದಲ್ಲಿನ ಗರಿಗಳು
ಅದರಿಂದ ಆದವು ಪೊರಕೆಗಳು
ಶುಭ ಸಮಾರಂಭಕ್ಕೆ ಚಪ್ಪರಗಳು
ಕೊನೆಗಾಲದ ಶವಕ್ಕೆ ಇವೆ ಚಟ್ಟಗಳು
- ಚಂದ್ರಶೇಖರ ಚಾರಿ ಎಂ, ಶಿಕ್ಷಕರು
ವಿಶ್ವಮಾನವ ಪ್ರೌಢಶಾಲೆ
