
ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕೊಣ್ಣೂರ ಕ್ಲಸ್ಟರ್ ಮಟ್ಟದ F L N ಕಲಿಕಾ ಹಬ್ಬ ಕಾರ್ಯಕ್ರಮ ಎಮ್ ಪಿ ಎಸ್ ಹಿರೂರ ಶಾಲೆಯಲ್ಲಿ ಜರುಗಿತು. ಕಾರ್ಯಕ್ರಮದ ಆಧ್ಯಕ್ಷತೆಯನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀ ಸಂಗನಗೌಡ ಆಸ್ಕಿ ಅವರು ವಹಿಸಿದರು ಮುಖ್ಯ ಅಥಿತಿಗಳಾದ ಕೊಣ್ಣೂರ ಕ್ಲಸ್ಟರ್ ಮಟ್ಟದ ಸಿ ಆರ್ ಪಿ ಗಳಾದ ಶ್ರೀ ಶರಣಗೌಡ ಯಾಳವಾರ ಪ್ರಾಸ್ಥಾವಿಕವಾಗಿ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಶ್ರೀ ಸಿ ಎಸ್ ಮಠ ಪಿಡಿಓ ಗ್ರಾಮ ಪಂಚಾಯಿತಿ ಹಿರೂರ ಶ್ರೀ ಅಬ್ದುಲ್ ರಹಿಮಾನ ಮೂಕಿಹಾಳ ಪತ್ರಕರ್ತರು , ಮುಖ್ಯ ಗುರುಗಳಾದ ಶ್ರೀ ಎಲ್ ಎಸ್ ಗಸ್ತಿ ,ಎ ಕೆ ನಾಯ್ಕ , ಬಿ ಜಿ ಪತ್ತೆಪೂರ ಶ್ರೀಮತಿ ಕೆ ಎ ಹಿರೇಗೌಡರ ಶ್ರೀ ಐ ಬಿ ಮಡಿವಾಳರ ,ಎನ್ ಎಸ್ ಪೂಜಾರಿ ಪಿ ವಾಯ್ ಚಲವಾದಿ, ಎಸ್ ಆರ್ ಬಾಗೇವಾಡಿ ಹಾಗೂ ಉರ್ದು ಶಾಲೆಯ ಗುರುಮಾತೆಯರು ಉಪಸ್ಥಿತರಿದ್ದರು.
ಶ್ರೀ ಶಿವಾನಂದ ಹಡಪದ ಶಿಕ್ಷಕರು ಕಾರ್ಯಕ್ರಮವನ್ನು ನಿರೂಪಿಸಿದರು, ಶ್ರೀಮತಿ ಜಿ ಎಸ್ ಮದ್ದರಕಿ ಗುರುಮಾತೆಯರು ಸ್ವಾಗತಿಸಿದರು, ಶ್ರೀ ದಿನೇಶ ಯರಲಡ್ಡಿ ಶಿಕ್ಷಕರು ವಂದಿಸಿದರು.
ವರದಿ : ಉಸ್ಮಾನ ಬಾಗವಾನ (ಬಳಗಾನೂರ)
