ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕು ಹಂಡಿತವಳ್ಳಿ ಗ್ರಾಮದಲ್ಲಿ ಶ್ರೀ ಬೆಳ್ಳಿ ಬಸಪ್ಪ ಹಾಗೂ ಶ್ರೀ ದಂಡಮ್ಮ ತಾಯಿ ಪ್ರತಿಷ್ಠಾಪನಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಇದೇ ಸಂದರ್ಭದಲ್ಲಿ ಸುಮಾರು ವರ್ಷಗಳಿಂದ ದೇವಸ್ಥಾನದಲ್ಲಿ ಪೂಜಾರಿಕೆ ಇಲ್ಲದೆ ದೇವಸ್ಥಾನದ ಪೂಜಾರಿಯನ್ನು ಇದೇ ಸಂದರ್ಭದಲ್ಲಿ ಶ್ರೀ ಶಿವ ಸಾರಥಿ ಬಸವಣ್ಣನವರ ಕ್ಷೇತ್ರ ಚನ್ನಪಟ್ಟಣ ಇವರ ಸಾರಥಿ ಆದ ಬಸವಣ್ಣನವರ ಮೂಲಕ ಪೂಜಾರಿಯಾಗಿ ನಿಜಗುಣ ಎಂಬ ಯುವಕರನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಿಡ್ಲ ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದಪುರದಿಂದ ಪೂಜಾ ಕೈಕೈಂಕರ್ಯಗಳನ್ನು ಮಾಡಿಕೊಂಡು ಕಳಸವನ್ನು ಹೊತ್ತು ದೇವಸ್ಥಾನದಲ್ಲಿ ದೇವರ ಪ್ರತಿಷ್ಠಾಪನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ವಾದ್ಯಗೋಷ್ಠಿ, ಡೊಳ್ಳು ಕುಣಿತ ಮುಂತಾದ ಕಾರ್ಯಕ್ರಮ ನೆರವೇರಿತು ಈ ಕಾರ್ಯಕ್ರಮದಲ್ಲಿ ಮಲ್ಲೇಶ್ ಗ್ರಾಮ ಪಂಚಾಯತಿ ಸದಸ್ಯರು ಕೃಷ್ಣಯ್ಯ ನವರು ಕಂದಾಯ ಇಲಾಖೆ ಮಹದೇವ್ ತಂಬಾಕು ಇಲಾಖೆ ಮಲ್ಲಿಕಾರ್ಜುನಯ್ಯ ಶಿವ ಸ್ವಾಮಿ ಕುಳ್ಳಯ್ಯ ಹೆಚ್ಎನ್ ಮಲ್ಲೇಶ್ ಜವರಯ್ಯ ಹಾಗೂ ದೇವಸ್ಥಾನದ ಎಲ್ಲಾ ಸಮಿತಿಯ ಸದಸ್ಯರು ಭಕ್ತಾದಿಗಳು ಭಕ್ತಾದಿಗಳು ಹಾಗೂ ಗ್ರಾಮದ ಯಜಮಾನರು ಮುಖಂಡರುಗಳು ಯುವಕರು ಹಾಜರಿದ್ದರು.
ವರದಿ – ಎಚ್.ಆರ್. ಶಂಕರ್, ಹಂಡಿತವಳ್ಳಿ
