ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ನಿನ್ನೆ ರನ್ನ ವೈಭವ ೨೦೨೫ ಪ್ರಯುಕ್ತ ವಿವಿಧ
ಕ್ರೀಡಾ ಕಾರ್ಯಕ್ರಮ ನೆರವೇರಿದವು.
ಪುರುಷರ ಹಾಗೂ ಮಹಿಳೆಯರ, ಅಂತರ ರಾಜ್ಯ ಕಬ್ಬಡ್ಡಿ ಪಂದ್ಯಾವಳಿಗಳು, ಪುರುಷರ ಹಾಗೂ ಮಹಿಳೆಯರ ಮ್ಯಾರಾಥಾನ್, ಪುರುಷರ ಸಂಗ್ರಾಣಿ ಕಲ್ಲು,ಚೀಲ,ಗುಂಡು,ಎತ್ತುವ ಸ್ಪರ್ಧೆ ಹಾಗೂ ಮಲ್ಲಕಂಬ ಪ್ರದರ್ಶನ ಜರುಗಿದವು.
ಈ ಎಲ್ಲಾ ಕಾರ್ಯಕ್ರಮವನ್ನು ಮುಧೋಳ ತಾಲೂಕ ಸಚಿವರಾದ ಆರ್.ಬಿ.ತಿಮ್ಮಾಪುರ, ತಾಲೂಕಾ
ದಂಡಾಧಿಕಾರಿಗಳು, ಅಧ್ಯಕ್ಷರು ರನ್ನ ವೈಭವ ಸಮಿತಿ ಮುಧೋಳ ಉದ್ಘಾಟನೆ ಮಾಡಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾರ್ಯದರ್ಶಿಗಳು, ರನ್ನ ವೈಭವ ಸಮಿತಿ ಮುಧೋಳ ಹಾಗೂ ಸರ್ವ ಸದಸ್ಯರು, ಸಂಘ ಸಂಸ್ಥೆಯವರು, ಊರಿನ ಗಣ್ಯ ಮಾನ್ಯರು,
ಗುರು ಹಿರಿಯರು ಹಾಗೂ ಯುವಕ ಮಿತ್ರರು
ಭಾಗಿಯಾಗಿದ್ದರು.
ವರದಿ : ಅಬ್ದುಲ್ಲಸಾಬ ನಾಯ್ಕರ
