ಬೀದರ್ : ಮಾನ್ಯ ಜಿಲ್ಲಾಧಿಕಾರಿಗಳು ಬೀದರ್ ಅವರ ಮುಖಾಂತರ ಸನ್ಮಾನ ಶ್ರೀ ಸಿದ್ದರಾಮಯ್ಯ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ವಿಧಾನ ಸೌಧ ಬೆಂಗಳೂರು ಇವರಿಗೆ ಬೆಳಗಾವಿಯಲ್ಲಿ ರಾಜ್ಯ ಸಾರಿಗೆ ಬಸ್ ಚಾಲಕರ ಮೇಲೆ ಹಲ್ಲೆ ಮಾಡಿರುವ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ್ಣ ಬೀದರ್ ಜಿಲ್ಲೆ ಸಮಿತಿ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ರಾಜ್ಯದಲ್ಲಿ ಕನ್ನಡ ಮಾತನಾಡು ಎಂದು ಹೇಳಿದ್ದಕ್ಕೆ ಹಲ್ಲೆ ನಡೆದಿರುವುದು ದುರಂತ ಮರಾಠಿ ಪುಂಡರು ಕನ್ನಡ ಭಾಷೆಗೆ, ನಾಡಿಗೆ ಅವಮಾನ ಮಾಡಿದ್ದಾರೆ ಬಸ್ ಚಾಲಕ ಹಾಗೂ ಕಾರ್ಯನಿರ್ವಾಹಕ ಮಾದೇವಪ್ಪ ಪ್ರಯಾಣಿಕರಿಗೆ ಕನ್ನಡದಲ್ಲಿ ಮಾತಾಡಿದಕ್ಕೆ ಚಾಲಕರ ಮೇಲೆ ಹಲ್ಲೆ ನಡೆಸಿದ್ದಾರೆ ಅವರ ಮೇಲೆ ಪೋಕ್ಸೋ ಪ್ರಕರಣ ದಾಖಲೆ ದಾಖಲಿಸಿದ್ದಾರೆ, ಮರಾಠಿ ಪುಂಡರ ದೂರು ದಾಖಲಿಸಿ ಮರಾಠಿ ಪುಂಡರರನ್ನು ಗಡಿಪಾರು ಮಾಡಬೇಕು ಚಾಲಕನ ಮೇಲೆ ಹಾಕಿರುವ ಸುಳ್ಳು ಪೋಕ್ಸೋ ಪ್ರಕರಣ ಹಿಂದಕ್ಕೆ ಪಡಿಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ್ಣ ಜಿಲ್ಲಾ ಸಮಿತಿ ವತಿಯಿಂದ ಆಗ್ರಹಿಸಿದರು. ಪೀಟರ್ ಚಿಟುಗುಪ್ಪ ಜಿಲ್ಲಾಧ್ಯಕ್ಷರು, ಕರವೇ ಪ್ರಕಾಶ್ ಬಗಲ್ ಜಿಲ್ಲಾ ಖಜಾಂಚಿ, ಜಗನಾಥ್ ಕೌಠಾ ಜಿಲ್ಲಾ ಕಾರ್ಯಾಧ್ಯಕ್ಷ, ಮೋಜಿಶ್ ಅಣ್ಗೂರ್ ಜಿಲ್ಲಾ ಸಹ ಕಾರ್ಯದರ್ಶಿ, ನಿಲೇಶ್ ರಾಥೋಡ ತಾಲೂಕ ಅಧ್ಯಕ್ಷ ಬೀದರ್ ದಕ್ಷಿಣ ಕ್ಷೇತ್ರ, ಕರಣ್ ರಾಠೋಡ್ ತಾಲೂಕು ಉಪಾಧ್ಯಕ್ಷ ಬೀದರ್ ದಕ್ಷಿಣ ಕ್ಷೇತ್ರ, ಸೈಯದ್ ನವಾಜ್ ಇಲ್ ಗೌರವ ಅಧ್ಯಕ್ಷ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಕೊಟ್ಟಿದ್ದಾರೆ.
ವರದಿಗಾರ : ಸಂಗಮೇಶ್ ಚಿದ್ರೆ
