ಕಲಬುರಗಿ /ಕಾಳಗಿ : ಛತ್ರಪತಿ ಶಿವಾಜಿ ಮಹಾರಾಜರ 395 ನೇ ಜಯಂತೋತ್ಸವ ನಿಮಿತ್ಯವಾಗಿ ಹಿಂದೂ ಉತ್ಸವ ಅಂಬೇಡ್ಕರ್ ವೃತ್ತದಿಂದ ಶ್ರೀ ಅಂಬಾಭವಾನಿ ದೇವಸ್ಥಾನ ಬಜಾರ್ ರೋಡವರಿಗೆ ಭವ್ಯವಾದ ಮೆರವಣಿಗೆ ನಡೆಯಿತು.
ಒಳ ಜಗಳ ಮೀರಿ ಹೋದಾಗ ಮಾತ್ರ ಸಮಾಜ ಉದ್ಧಾರವಾಗುತ್ತದೆ. ಕಲ್ಮಷವನ್ನು ತೊಳೆದು ನಾವುಗಳು ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿದಾಗ ಸುಂದರವಾದ ಸಮಾಜ ನಿರ್ಮಾಣವಾಗುತ್ತದೆ. ಆಳವಾದ ತಪಸ್ಸು, ತ್ಯಾಗ, ಸಮರ್ಪಣೆ ಮನೋಭಾವನೆಯು ನಮ್ಮ ಭಾರತೀಯರ ಧರ್ಮದ ಆಳವಾದ ಬೇರುಗಳು. ಆಳವಾದ ಬೇರುಗಳು ಬೇರಿನ ತಾಯಿ ಜೀಜಾಬಾಯಿ ಮಗನಾದ ಛತ್ರಪತಿ ಶಿವಾಜಿಯ ಹಾಗೆ ನಮ್ಮೆಲ್ಲರ ತಾಯಂದಿರ ಮಕ್ಕಳು ಸಹ ಆಗಬೇಕು ಎಂದು ದೀಪ ಬೆಳಗಿಸಿ ಡಾ ll ಶ್ರೀ ಶಾಂತ ಸೋಮನಾಥ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಮಂಗಲಿಗಿ ಮತ್ತು ಟೆಂಗಳಿ ಶ್ರೀಗಳು ನುಡಿದರು.
ಶಿವಾಜಿ ಮಹಾರಾಜರು ಕೇವಲ ಮರಾಠಾ ಸಮುದಾಯಕ್ಕೆ ಸೀಮಿತವಲ್ಲ ಮಹಾರಾಷ್ಟ್ರ ಕರ್ನಾಟಕಕ್ಕೆ ಬೆಟ್ಟದ ನೆಲ್ಲಿಕಾಯಿ ಸಮುದ್ರದ ಉಪ್ಪು ಎತ್ತಣದಿಂದ ಎತ್ತಣದ ವೈದೋ ಸಂಬಂಧ ಗುಹೇಶ್ವರ ಮೂಲಪುರುಷ ಮರಾಠನು, ಆದರೆ ಅವನ ವ್ಯಕ್ತಿತ್ವ ಬೆಳೆದಿದ್ದು ಕರ್ನಾಟಕದಲ್ಲಿ ಹುತಾತ್ಮರು, ಶರಣರನ್ನು ಕೇವಲ ಒಂದು ಮತಕ್ಕೆ ಸೀಮಿತಗೊಳಿಸಲಾರದೆ, ನಮ್ಮ ಸಮಾಜದ ಹಿಂದೂ ಧರ್ಮದ ಏಳಿಗೆಗಾಗಿ ಶ್ರಮಿಸಬೇಕು. ಶಿವಾಜಿ ಮಹಾರಾಜರ ತತ್ವ ಸಿದ್ಧಾಂತ ಆದರ್ಶವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಬೇಕು, ಎಲ್ಲರೂ ಆಚಾರವಂತರಾಗಿ, ಧರ್ಮ ನಿಷ್ಠರಾಗಿ, ಸಜ್ಜನರಾಗಿ, ನಿಮ್ಮ ಧರ್ಮವನ್ನು ರಕ್ಷಣೆ ಮಾಡಿದ್ದೇ ಆದರೆ ಸದ್ಗತಿ ಸಿಗಲಿದೆ ಶಿವಾಜಿ ಮಹಾರಾಜರು ಹಿಂದೂ ಧರ್ಮದ ರಕ್ಷಣೆ ಮಾಡಿದ್ದಾರೆ ಎಂದು ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮ. ನಿ. ಪ್ರ. ಚಿಕ್ಕ ಗುರು ನಂಜೇಶ್ವರ ಮಹಾಶಿವಯೋಗಿಗಳು ವಿರಕ್ತ ಮಠ ಭರತೂರಿನ್ ಪೂಜ್ಯರು ಶಿವಾಜಿ ಮಹಾರಾಜರ ಕುರಿತು ಸಿಂಹ ಘರ್ಜನೆ ಮಾಡಿದರು. ಇಂದಿನ ಕಾಲದಲ್ಲಿ ಚಲನಚಿತ್ರ ಕೇವಲ 3:00 ಗಂಟೆಗಳ ಕಾಲ ಮಾತ್ರ ಇರುತ್ತದೆ ಆದರೆ ದೇಶಭಕ್ತಿ ನಾವು ಸಾಯುವವರೆಗೂ ಇರುತ್ತದೆ ಮತ್ತು ಲಾರ್ಡ್ ಮೌಂಟ್ ಬ್ಯಾಟನ್ ಅವರು ಹೇಳಿದ ಹಾಗೆ ಶಿವಾಜಿ ಮಹಾರಾಜರು ಇಂಗ್ಲೆಂಡಿನಲ್ಲಿ ಹುಟ್ಟಿದರೆ ಇಡೀ ಯುನಿವರ್ಸ್ ಆಳುತ್ತಿದ್ದೆವು ಎಂದು ಹೇಳಿದ್ದರು. ಛತ್ರಪತಿ ಶಿವಾಜಿ ಮಹಾರಾಜರಲಿರುವ ರಾಷ್ಟ್ರಭಕ್ತಿ, ದೇಶಭಕ್ತಿ, ಇಂದಿನ ಮಕ್ಕಳಲ್ಲಿ ಹಾಗೂ ಯುವಕರಲ್ಲಿ ಬೆಳೆಸುವ ಜವಾಬ್ದಾರಿಯು ತಾಯಿಂದರ ಮೇಲಿದೆ ಎಂಬ ಮಾತನ್ನು ಈ ಕಾರ್ಯಕ್ರಮದಲ್ಲಿ ಜ್ಯೋತಿ ಬೆಳಗಿಸಿ ರಾಜೇಶ್ ಜೆ ಗುತ್ತೇದಾರ್ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಹೇಳಿದರು.
7.8 ವರ್ಷಗಳಾಯಿತು ನಾವು ಶಿವಾಜಿ ಮಹಾರಾಜರ ಜಯಂತಿಯನ್ನು ಕಾಳಗಿಯಲ್ಲಿ ಆಚರಿಸುತ್ತಾ ಬಂದಿದ್ದೇವೆ. ತಮ್ಮ ಅಂತರಂಗದ ಭಾವನೆ, ಇಚ್ಛಾಶಕ್ತಿಯನ್ನು ವ್ಯಕ್ತಪಡಿಸುತ್ತಾ ಇವರು ಮುಂದಿನ ವರ್ಷದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ತಳಿಯನ್ನು ಸ್ಥಾಪನೆ ಮಾಡಬೇಕೆಂದು ಘನ ಉಪಸ್ಥಿತಿ ವಹಿಸಿರುವ ಸುಭಾಷ್ ಕದಂ ಗೌರವ ಅಧ್ಯಕ್ಷರು ಮರಾಠ ಸಮಾಜ ಕಾಳಗಿ ಅವರು ಹೇಳಿದರು.
ಹಿಂದೂ ಧರ್ಮಕ್ಕೆ ಶಿವಾಜಿ ಮಹಾರಾಜರ ಕೊಡುಗೆ ಅಪಾರವಾದದ್ದು, ಸ್ವಾಭಿಮಾನಿಯಾಗಿ ರಾಷ್ಟ್ರ ನಿರ್ಮಾಣಕ್ಕೆ ಹೋರಾಡಿದ ಛತ್ರಪತಿ ಶಿವಾಜಿ ಮಹಾರಾಜರು ಹಿಂದೂಸ್ಥಾನವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ ಅವರನ್ನು ಅವರ ತಾಯಿ ಜೀಜಾಬಾಯಿ ಮತ್ತು ಅವರ ಆಡಳಿತಗಾರ ದಾದಾಜಿ ಕೊಂಡ ದೇವರು ಬೆಳೆಸಿದರು. ಮಹಾರಾಜರು ರಾಮಾಯಣ ಮತ್ತು ಮಹಾಭಾರತ ಅಧ್ಯಯನ ಮಾಡುತ್ತಾ ಬೆಳೆದರು. ಮರಾಠಾ ಸಾಮ್ರಾಜ್ಯ ಸ್ಥಾಪನೆ ಮತ್ತು ಯಶಸ್ವಿ ಗೆರಿಲ್ಲಾ ಯುದ್ಧ ತಂತ್ರಗಳಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಅತ್ಯಂತ ಪ್ರಸಿದ್ಧಿ. ಇವತ್ತಿನ ಯುಗದಲ್ಲಿ ಮುಕ್ಕೋಟಿ ದೇವಾನುದೇವತೆಗಳನ್ನು ಹೇಗೆ ಪೂಜಿಸುತ್ತಾ ಬರುತ್ತಿದ್ದಾರೆ ಅದೇ ರೀತಿಯಾಗಿ ಶಿವಾಜಿ ಮಹಾರಾಜರನ್ನು ಮನೆಮನೆಗಳಲ್ಲಿ ಪೂಜಿಸುತ್ತಿದ್ದಾರೆ. ನಮ್ಮ ಹಿಂದೂ ಧರ್ಮದ ಮೇಲೆ 1000 ವರ್ಷಗಳ ಕಾಲ ಡಚ್ಚರು ಫ್ರೆಂಚರು ಇನ್ನಿತರ ಪರಕೀಯರ ದೇಶಗಳು ಆಳ್ವಿಕೆ ಮಾಡಿದರು 35 ಜನಾಂಗಗಳಿದ್ದವು ಅವುಗಳು ನಶಿಸಿಹೋಗಿವೆ. ಆದರೆ ನಮ್ಮ ಧರ್ಮವು ಸನಾತನ ಧರ್ಮವಾಗಿ ಉಳಿದಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರು ಹೇಳಿದ ಹಾಗೆ ನಾನು ಮೊದಲಿಗೆ ಭಾರತೀಯ ಕೊನೆಗೂ ಭಾರತೀಯ ಇದು ನನ್ನ ಕೊನೆಯ ಆದರ್ಶ ಎಂಬ ಮಾತನ್ನು ಹೇಳಿದರು. ಹಿಂದೂ ಧರ್ಮ ಬೆಳೆಯಬೇಕಾದರೆ ಸಂಘಟಿತ ಹೋರಾಟದ ಮೂಲಕ ನಾವೆಲ್ಲರೂ ಕಾಪಾಡಿಕೊಳ್ಳೋಣ. ಇವತ್ತಿಗೂ ಸನಾತನ ಧರ್ಮದ ತಲೆ ಎತ್ತಿ ನಿಂತಿದೆ. ಹಿಂದೂ ಆಗಿ ಬದುಕಿ ತೋರಿಸುವುದೇ ಹಿಂದೂ ಧರ್ಮ. ಈ ಸಂದರ್ಭದಲ್ಲಿ ಅದ್ಭುತವಾದ ಮಾತನ್ನು ಹೇಳುತ್ತಾ ಸಂಸ್ಕಾರವು ಎಷ್ಟು ಮುಖ್ಯವಾಗಿರುತ್ತದೆ ನಮ್ಮ ರಕ್ಷಣೆ ಮುಖ್ಯವಾಗಿದೆ ಹಿರಿಯರು ಅಜ್ಜ – ಅಜ್ಜಿಯರು ಹಣೆಗೆ ವಿಭೂತಿ, ಕುಂಕುಮ, ಗಂಧ, ಹಚ್ಚುತ್ತಿದ್ದರು. ಇದರ ಸಂಕೇತ ನಾವೆಲ್ಲರೂ ಹಿಂದೂ ಧರ್ಮದ ಸಂಸ್ಕೃತಿಯನ್ನು ಕಾಪಾಡುಕೊಳ್ಳುತ್ತಿದ್ದೇವೆ. ಧರ್ಮ ರಕ್ಷಣೆ ಯಾರು ಮಾಡುತ್ತಾರೆ ಅವರಿಗೆ ನಿಮ್ಮ ಧರ್ಮ ನಿಮಗೆ ರಕ್ಷಣೆಯಾಗಿ ನಿಲ್ಲುತ್ತದೆ. ಶಿವಾಜಿ ಮಹಾರಾಜರು ಮರಾಠ ಸಮಾಜಕ್ಕೆ ಮಾತ್ರ ಸೀಮಿತವಾಗಿರದೆ, ಎಲ್ಲಾ ಹಿಂದೂ ಧರ್ಮದ ಪರವಾಗಿದ್ದಾರೆ ಎಂದು ಹೇಳಿದರು. ಹಿಂದೂ ಉತ್ಸವದ ಬಗ್ಗೆ ಅದ್ಭುತವಾಗಿ, ಸುಧೀರ್ಘವಾಗಿ, ಮಾರ್ಮಿಕವಾಗಿ, ಶಿವಾಜಿ ಮಹಾರಾಜರ ಜೀವನ ಚರಿತ್ರೆ ಅವರು ಬೆಳೆದು ಬಂದ ದಾರಿ, ಅವರ ಆದರ್ಶ ತತ್ವಗಳು, ಅವರು ಹಿಂದೂ ಧರ್ಮದ ಬಗ್ಗೆ ಇದ್ದಂತ ಅಪಾರವಾದ ಗೌರವ, ದೇಶಭಕ್ತಿ, ರಾಷ್ಟ್ರಭಕ್ತಿಯ ಬಗ್ಗೆ ತಿಳಿಸಿದರು. ಆರ್ ಸಿ. ದೀರೆ ಇತಿಹಾಸ ತಜ್ಞರು ಛತ್ರಪತಿ ಶಿವಾಜಿಯ ಬಗ್ಗೆ 13 ವರ್ಷಗಳ ಕಾಲ ಅಧ್ಯಯನ ಮಾಡಿ ಶಿವಗಡಚ್ಚ ಸಂಭ ಮಹಾರಾಜರ ಮತ್ತು ಪುಸ್ತಕವನ್ನು ಬರೆದಿದ್ದಾರೆ ಎಂದು ಬಾಲ ವಾಗ್ಮಿ ಕುಮಾರಿ ಹಾರಿಕಾ ಮಂಜುನಾಥ್ ಹೇಳಿದರು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿದ ಶ್ರೀ ಮ. ನಿ.ಪ. ಚಿಕ್ಕ ಗುರುನಂದೇಶ್ವರ ಮಹಾ ಶಿವಯೋಗಿಗಳು ವಿರಕ್ತ ಮಠ ಭರತ ನೂರ್, ಪರಮಪೂಜ್ಯರು ಡಾ ll ಶ್ರೀ ಶಾಂತ ಸೋಮನಾಥ ಶಿವಾಚಾರ್ಯರು ಸಂಸ್ಥಾನ ಹಿರೇಮಠ ಮಂಗಲಗಿ ಮತ್ತು ಟೆಂಗಳಿ, ಶ್ರೀ ನೀಲಕಂಠ ಮರಿದೇವರು ಸಂಸ್ಥಾನ ಹಿರೇಮಠ ಕಾಳಗಿ , ಶ್ರೀ ರಾಜೇಶ್ ಜೆ ಗುತ್ತೇದಾರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು , ಶ್ರೀ ತುಳಸಿರಾಮ್ ಚವ್ಹಾಣ ಅಧ್ಯಕ್ಷರು ಮರಾಠ ಸಮಾಜ ಕಾಳಗಿ, ಶ್ರೀ ಸುಭಾಷ್ ಕದಂ ಗೌರವ ಅಧ್ಯಕ್ಷರು ಮರಾಠ ಸಮಾಜ ಕಾಳಗಿ, ಮುಖ್ಯ ಅತಿಥಿಗಳಾಗಿ ಸುಧಾಕರ್ ಪಾಟೀಲ್ ರಾಜಾಪುರ್ ಮುಖಂಡರು ಮಾರಾಠ ಸಮಾಜ ರಾಜಾಪುರ್, ಎನ್ ಎಸ್ ಪಾಟೀಲ್ ವಕೀಲರು ಸುಂಠಣ, ಶಿವಶರಣಪ್ಪ ಕಮಲಾಪುರ್ ಮುಖಂಡರು ವಿ. ಶೈ. ಲಿಂ. ಸಮಾಜ ಕಾಳಗಿ, ವಿಶ್ವನಾಥ್ ವನಮಾಲಿ ಖ್ಯಾತ ಉದ್ಯಮಿದಾರರು, ಶರಣಗೌಡ ಪೊಲೀಸ್ ಪಾಟೀಲ್ ಮುಖಂಡರು ವೀರಶೈವ ಲಿಂಗಾಯತ ಸಮಾಜ ಕಾಳಗಿ, ಅತಿಥಿಗಳಾಗಿ ರಾಘವೇಂದ್ರ ಡಿ. ಗುತ್ತೇದಾರ್ ಮಾಜಿ ಗ್ರಾಮ ಪಂಚಾಯತ ಅಧ್ಯಕ್ಷರು ಕಾಳಗಿ, ರಮೇಶ್ ಕಿಟ್ಟದ್ ಮುಖಂಡರು ದೇವಾಂಗ ಸಮಾಜ ಕಾಳಗಿ, ರವಿದಾಸ್ ಎಸ್. ಪತಂಗೆ ಖ್ಯಾತ ಉದ್ಯಮಿದಾರರು, ಪರಮೇಶ್ವರ ಮಡಿವಾಳ ಮುಖಂಡರು ಕಾಳಗಿ, ದೇವಜಿ ಜಾದವ್ ಮಾಜಿ ಗ್ರಾಂ ಪಂ. ಉಪಾಧ್ಯಕ್ಷ ಕಾಳಗಿ, ಜಗನಾಥ್ ಚಂದನಕೇರಾ ಮುಖಂಡರು ಕೂಲಿ ಸಮಾಜ ಕಾಳಗಿ, ಮಹೇಶ್ ನಾಗರ್ ಕರ್ ಮುಖಂಡರು ಹಿಂದೂ ಖಾಟಿಕ ಸಮಾಜ ಕಾಳಗಿ, ರಮೇಶ್ ನಲವಾಡೆ ಮುಖಂಡರು ಮರಾಠ ಸಮಾಜ ಕೋಡ್ಲಿ, ವಿಶ್ವನಾಥ್ ಟೆಂಗಳಿ ಮುಖಂಡರು ಮಾರಾಟ ಸಮಾಜ ಟೆಂಗಳಿ, ಸಿದ್ದರಾಮ ಪಾಟೀಲ್ ಮುಖಂಡರು ಮರಾಠ ಸಮಾಜ ಮಲಘಾಣ, ಮಲ್ಲಿಕಾರ್ಜುನ್ ಡೊಣ್ಣೂರ ಮುಖಂಡರು ದಲಿತ ಸಮಾಜ ಕಾಳಗಿ, ಕೇಸು ಚವ್ಹಾಣ ಮುಖಂಡರು ಬಂಜಾರ್ ಸಮಾಜ ಕಾಳಗಿ, ಸಂತೋಷ್ ಜಾಧವ ಮುಖಂಡರು ಬಂಜಾರ್ ಸಮಾಜ ಕಾಳಗಿ, ಮುಂತಾದವರು ಭಾಗವಹಿಸಿದ್ದರು. ಈ ಕಾರ್ಯಕ್ರಮದ ನಿರೂಪಣೆ ಶಿವಕುಮಾರ ಶಾಸ್ತ್ರಿ ಶಿಕ್ಷಕರು ಸರ್ಕಾರಿ ಪ್ರೌಢ ಶಾಲೆ ಕಾಳಗಿ, ಸ್ವಾಗತಿಸಿದವರು ಪ್ರಶಾಂತ್ ಕದಂ ಅಧ್ಯಕ್ಷರು ಶಿವ ಜಯಂತಿ ಉತ್ಸವ ಸಮಿತಿ ಕಾಳಗಿ.
ವರದಿ: ಚಂದ್ರಶೇಖರ್ ಆರ್. ಪಾಟೀಲ್
