ನವದೆಹಲಿ : ಶಿವಮೊಗ್ಗದ ಇಂಡಿಯನ್ ದಿವ್ಯಾಂಗ್ ಎಂಪೋವೆರ್ಮೆಂಟ್ ಅಸೋಸಿಯೇಷನ್ (ರಿ.) ಇವರ ಮನವಿಯ ಮೇರೆಗೆ ಭಾರತ ಸರ್ಕಾರದ ವಿತ್ತ ಸಚಿವಾಲಯದ ಅಧೀನ ಕಾರ್ಯದರ್ಶಿಗಳು ವಿಕಲಚೇತನರ ಕಾಯಿದೆಯಲ್ಲಿರುವ 21 ವಿಧದ ವಿಕಲಚೇತನರಿಗೆ ಜಿ ಎಸ್ ಟಿ ವಿನಾಯಿತಿ ನೀಡುವಂತೆ ಪರಿಶೀಲಿಸಲು ಭಾರತ ಸರಕಾರದ ಕಂದಾಯ ಇಲಾಖೆಯ ಕಾರ್ಯದರ್ಶಿಗಳಿಗೆ ಸೂಚಿಸಿದೆ ಎಂದು ಭಾರತ ಸರಕಾರದ ಹಣಕಾಸು ಇಲಾಖೆಯ ಅಧಿಕೃತ ಜ್ಞಾಪನಾ ಪತ್ರ ತಿಳಿಸಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
