ವಿಜಯಪುರ: ದಿನಾಂಕ 28/02/ 2025 ರಂದು ಗೌರವಾನ್ವಿತ ಶ್ರೀ ಶಿವಾಜಿ ಅನಂತ ನಲವಡೆ ಸಾಹೇಬರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ವಿಜಯಪುರ ಇವರಿಗೆ ದಿ. 27/02/2025 ರಂದು ವಿಜಯಪುರ ಜಿಲ್ಲಾ ವಕೀಲರ ಸಂಘದಿಂದ ನಿವೃತ್ತಿಯ ಬೀಳ್ಕೊಡುಗೆಯ ಸಮಾರಂಭವನ್ನು ಏರ್ಪಡಿಸಲಾಯಿತು.
ವಿಜಯಪುರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಡೀ ಜೀ ಬಿರಾದಾರ್ ರವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ಶ್ರೀ ಉಸ್ಮಾನ್ ಬಾಷಾ ಆಲ್ಗೂರ ಜಂಟಿ ಕಾರ್ಯದರ್ಶಿಗಳು ವಿಜಯಪುರ ಜಿಲ್ಲಾ ವಕೀಲರ ಸಂಘ ಶ್ರೀ ಶಿವಾಜಿ ಅನಂತ ನಲವಡೆ ಸಾಹೇಬರಿಗೆ ವಿಶೇಷ ಸನ್ಮಾನ ಮಾಡಿದರು. ಇದೇ ಸಂದರ್ಭದಲ್ಲಿ ವಿಜಯಪುರ ಜಿಲ್ಲಾಧಿಕಾರಿಗಳು ಟಿ ಬುಬಾಲನ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ರೀ ಲಕ್ಷ್ಮಣ್ ನಿಂಬರ್ಗಿ ಸಾಹೇಬ್ರು ಉಪಸ್ಥಿತಿ ಇದ್ದರು ಮತ್ತು ಜಿಲ್ಲಾ ನ್ಯಾಯಾಲಯದ ಹಿರಿಯ ಮತ್ತು ಕಿರಿಯ ಶ್ರೇಣಿಯ ನ್ಯಾಯಾಧೀಶರು ಭಾಗವಹಿಸಿದರು ಮತ್ತು ಎಲ್ಲಾ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಭಾಗವಹಿಸಿದ್ದರು.
ವರದಿಗಾರರು : ಉಸ್ಮಾನ ಬಾಗವಾನ (ಬಳಗಾನೂರ)
