
ಚಾಮರಾಜನಗರ/ ಗುಂಡ್ಲುಪೇಟೆ : ಎಸ್ ಡಿ ಪಿ ಐ ಪಕ್ಷದ ವತಿಯಿಂದ ಎಸ್ ಡಿ ಪಿ ಐ ರಾಷ್ಟ್ರೀಯ ಅಧ್ಯಕ್ಷರಾದ ಎಂ.ಕೆ ಫೈಜಿ ರವರನ್ನು ಇಡಿ ಇ.ಡಿ ಅಧಿಕಾರಿಗಳು ಅಕ್ರಮವಾಗಿ ಬಂಧಿಸಿರುವುದನ್ನು ಖಂಡಿಸಿ ಪಟ್ಟಣದ ಟಿಪ್ಪು ವೃತ್ತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹಾಗೂ ಇ.ಡಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿ ಪ್ರತಿಭಟನೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಾಮಿಯಾ ಮಸೀದಿ ಉಪಾಧ್ಯಕ್ಷರು ನಾವು ಅನ್ಯಾಯದ ವಿರುದ್ಧ ತ್ಯಾಗ ಬಲಿದಾನಕ್ಕೆ ಸಿದ್ದ ಎಂದರು.
ಎಸ್.ಡಿ.ಪಿ.ಐ ಜಿಲ್ಲಾ ಸಮಿತಿ ಸದಸ್ಯರು ಇಮ್ರಾನ್ ಖಾನ್ ಮಾತನಾಡಿ ವಕ್ಫ಼್ ಬಿಲ್ ವಿರುದ್ಧ ರಾಷ್ಟ್ರದಾದ್ಯಂತ ಎಸ್ ಡಿ ಪಿ ಐ ಪಕ್ಷ ಸಂವಿಧಾನದ ಉಳಿವಿಗಾಗಿ ಹೋರಾಟ ಮಾಡುತ್ತಿದೆ ಹಾಗೂ ಎಲ್ಲಿ ಅನ್ಯಾಯ ಅಕ್ರಮ ನಡೆಯುತ್ತಿದೆ ಅಲ್ಲಿ ಎಸ್ ಡಿ ಪಿ ಐ ನ್ಯಾಯದ ಪರವಾಗಿ ಸಂವಿಧಾನಬದ್ಧವಾಗಿ ಹೋರಾಟ ಮಾಡುತ್ತದೆ ಆದ್ದರಿಂದ 24 ಗಂಟೆ ಒಳಗೆ ನಮ್ಮ ಅಧ್ಯಕ್ಷರನ್ನು ಬಿಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಪಿ ಐ ಜಿಲ್ಲಾ ಸಮಿತಿ ಸದಸ್ಯರಾದ ಹಾಗೂ ಜಾಮಿಯಾ ಮಸೀದಿ ಕಾರ್ಯಕಾರಿಣಿ ಸಮಿತಿ ಸದಸ್ಯರು ಮತ್ತು ಮುಸ್ಲಿಂ ಮುಖಂಡರಾದ ಇಮ್ರಾನ್ ಖಾನ್ ತಾಲೂಕು ಅಧ್ಯಕ್ಷರಾದ ತೌಸಿಫ್ ಪಾಷಾ ತಾಲೂಕು ಉಪಾಧ್ಯಕ್ಷರಾದ ಸರ್ದಾರ್ ತಾಲೂಕು ಕಾರ್ಯದರ್ಶಿಯಾದ ಸರ್ಫರಾಜ್ ಸಮಿತಿ ಸದಸ್ಯರಾದ ರಿಜ್ವಾನ್ ಪಾಷಾ ಸೈಯದ್ ಅಕ್ರಾಂ ಶಾರುಖಾನ್ ಆಸಿಫ್ ಸಮದ್ ಸಲೀಂ ಮತ್ತು ಕಾರ್ಯಕರ್ತರು ಇದ್ದರು.
ವರದಿ ಗುಂಡ್ಲುಪೇಟೆ ಕುಮಾರ್