ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬಂಡೆಪ್ಪನಹಳ್ಳಿ ಸಾಲವಾಡಗಿ ಗ್ರಾಮದಲ್ಲಿ ಅನಿಫ್ ತಂದೆ ಮಶಾಕ್ ಖಿಂಡಿಮನಿ ಈ ಯುವಕ ಸ್ವರಾಜ್ XT.ಟ್ಯಾಕ್ಟರ್ ನಿಂದ ಹನ್ನೊಂದು ಕುರಗಿ ಜಮೀನು ಅಂದ್ರೆ 46 ಎಕ್ಕರ್ ಜಮೀನನ್ನು ನೂರಾ ಏಳು ಘಂಟೆ ನೇಗಿಲು ಹೊಡೆದ್ದಿದ್ದಾನೆ. ನಾಲ್ಕು ರಾತ್ರಿ ಐದು ಹಗಲು ನಿದ್ದೆ ಇಲ್ಲದೆ ಎರಡು ಊಟ ಮಾಡಿ ನೇಗಿಲು ಹೊಡೆದು ಪ್ರತಿಯೊಬ್ಬ ಯುವ ರೈತಾಪಿ ಜನರಿಗೆ ಪ್ರೇರೇಪಣೆ ಆಗಿ ಇಡಿ ವಿಜಯಪುರ ಜಿಲ್ಲೆಗೆ ಮಾದರಿ ಆಗಿದ್ದಾನೆ. ಈ ಯುವಕನಿಗೆ ಸಾಧನೆ ಮಾಡಲು ಬ. ಸಾಲವಾಡಗಿ ಗ್ರಾಮದ ಗುರುನಾಥಗೌಡ ಗದ್ದಗೆಪ್ಪಾಗೋಳ ಮತ್ತು ಅಪ್ಪುಗೌಡ ಹೊರಗಿನಮನಿ ಟ್ರಾಕ್ಟರ್ ಕೊಟ್ಟು ಸಾಧನೆಗೆ ಬೆನ್ನೆಲುಬು ಆಗಿದ್ದಾರೆ ಮತ್ತು ಅನಿಫ್ ಖಿಂಡಿಮನಿ ರವರಿಗೆ ಸಹಕಾರ ಕೊಟ್ಟಂತ ಗೆಳೆಯರು ಶಿವರಾಜ್ ಹೊರಗಿನಮನಿ, ಆಕಾಶ ಹೊರಗಿನಮನಿ, ಶ್ರೀಕಾಂತ ಹೊರಗಿನಮನಿ, ಭೀಮನಗೌಡ ದೊಡ್ಡಮನಿ, ಗಿರೀಶ ಜಮ್ಮಲದ್ದಿನ್ನಿ, ಸದ್ದಮ್ ವಾಲೀಕಾರ ಹಾಗೂ ಗ್ರಾಮದ ಹಿರಿಯರು ಗ್ರಾಮದ ಯುವಕರು ಆತನ ಸಾಧನೆಯನ್ನು ಅತಿ ವಿಜೃಂಭಣೆಯಿಂದ ಮೆರವಣಿಗೆಯ ಮೂಲಕ ಅಭಿನಂದಿಸಿದರು.
ವರದಿ ಉಸ್ಮಾನ್ ಬಾಗವಾನ