
ಬಳ್ಳಾರಿ/ಕಂಪ್ಲಿ : ಸ.ಹಿ.ಪ್ರಾ.ಶಾಲೆ ಹೊಸೂರು ಜವುಕು ನ ಎಸ್ ಡಿ ಎಂ ಸಿ ಅಧ್ಯಕ್ಷರಾದ ಎಚ್ ಗೋಪಾಲ್ ಹಂಪದೇವನಹಳ್ಳಿ ಗ್ರಾಂ.ಪಂ.ಅಧ್ಯಕ್ಷೆ ಕವಿತಾ, ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹಾಗೂ ಮೆಟ್ರಿ CRP ದೊಡ್ಡಬಸಪ್ಪ ಹೊಸೂರು ಜವುಕು ಕ್ಲಸ್ಟರ್ ಮಟ್ಟದ FLN ಕಲಿಕಾ ಹಬ್ಬ ಕಾರ್ಯ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ
ಹಂಪದೇವನಹಳ್ಳಿ ಗ್ರಾಂ.ಪಂ. ಅಧ್ಯಕ್ಷೆ ಕವಿತಾ ಮಾತನಾಡಿ ಒಟ್ಟಾರೆಯಾಗಿ ಮಕ್ಕಳ ಪ್ರತಿಭೆಯನ್ನು ಹೊರ ಹಾಕುವುದೇ ಈ ಕಲಿಕಾ ಹಬ್ಬದ ಉದ್ದೇಶವಾಗಿದ್ದು ಈ ಶಾಲೆಯು ಅತ್ಯುತ್ತಮವಾಗಿ ಆಯೋಜಿಸಿದೆ ಎಂದು ಶಾಲೆಗೆ ಹಾಗೂ ಶಿಕ್ಷಣ ಇಲಾಖೆಗೆ ಅಭಿನಂದಿಸಿದರು.
ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಹಾಗೂ ಮೆಟ್ರಿ CRP ದೊಡ್ಡಬಸಪ್ಪ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಒಟ್ಟಿಗೆ ಸೇರಿಸಿ ಕಲಿಕೆಗೆ ಪೂರಕ ವಾತಾವರಣ ನಿರ್ಮಾಣ ಮಾಡಿದಾಗ ಮಕ್ಕಳು ಕಲಿಕೆಯತ್ತ ಆಸಕ್ತಿ ತೋರುತ್ತಾರೆ. ಕಲಿಕಾ ಹಬ್ಬ ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಸಹಕಾರಿಯಾಗಿದೆ. ಕಲಿಕೆಯನ್ನು ಉತ್ತಮಗೊಳಿಸಲು ಶಿಕ್ಷಣ ಇಲಾಖೆ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ ಎಂದು ತಿಳಿಸಿದರು.
ಶಾಲಾ ಮುಖ್ಯ ಗುರುಗಳಾದ ಕೆ. ಮಾಲಿಕ್ ಮಾತನಾಡಿ ಶಿಕ್ಷಣ ಹುಲಿ ಹಾಲಿದಂತೆ ಅದನ್ನು ಪಡೆದ ಮಕ್ಕಳು ಘರ್ಜಿಸಲೇಬೇಕು ಶಿಕ್ಷಣವು ಸರ್ವೋತ್ರಂ ಸಾಧನಂ ಗುಣಾತ್ಮಕ ಶಿಕ್ಷಣ ಮಕ್ಕಳ ಶಿಕ್ಷಣದ ಬುನಾದಿಯಾಗಿದೆ. ಕಲಿಕಾ ಹಬ್ಬದ ಅಡಿ ಬರಹದಂತೆ ಪ್ರಶ್ನೆಯೇ ಪ್ರಜ್ಞೆಯಾಗಲಿ ವಿದ್ಯಾರ್ಥಿಗಳಿಗೆ ಶಿಕ್ಷಣದ ತಿಳುವಳಿಕೆಯ ಸಾಧನೆ ನಮ್ಮ ಶಾಲೆಯ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ
ಹಂಪದೇವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರಾದ ಹನುಮಂತಮ್ಮಪಂಪಾಪತಿ, ಗೋಪಾಲ, ಎಸ್ ಡಿ ಎಂ ಸಿ ಮಾಜಿ ಉಪಾಧ್ಯಕ್ಷ ರಾಮಪ್ಪ, ಎಸ್ ಡಿ ಎಂ ಸಿ ಸದಸ್ಯರಾದ ಮಲ್ಲಪ್ಪ, ಜೈನಾಬಿ ಸಾಧಿಕ್ ಸಾಬ್, ತಿಪ್ಪೇಸ್ವಾಮಿ, ಹನುಮಂತಪ್ಪ, ಕೆ,ರಾಜ, ಇಸಿಓ ರೇವಣ್ಣ, ವೀರೇಶಪ್ಪ, ಪ್ರಾ.ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನುಮಂತಪ್ಪ, ಖಜಾಂಚಿ ರಾಜೇಶ್ವರಿ, ಸಹ ಶಿಕ್ಷಕಿ ಸುನೀತಾ, ಸಿ ಆರ್ ಪಿ ಗಳಾದ ಚಂದ್ರಯ್ಯ ಸೊಪ್ಪಿನ್ ಮಠ ರೇಣುಕಾರಾಧ್ಯ, ಶಾಲಾ ಸಹ ಶಿಕ್ಷಕಿ ಸುನೀತಾ.ಸಿ.ಕೆ., ಅತಿಥಿ ಶಿಕ್ಷಕರಾದ ಮಂಜುನಾಥ, ಅನಿತಾ, ಸರ್ಕಾರಿ ಪದವೀಧರ ಅಧ್ಯಕ್ಷ ಮಂಜುನಾಥ, ಗ್ರಾಮೀಣ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಮರಿಸ್ವಾಮಿ ಕ್ಲಸ್ಟರ್ ನ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು, ಮಕ್ಕಳು ಹಾಗೂ ಪಾಲಕ ಪೋಷಕರು ಪಾಲ್ಗೊಂಡು ಕಲಿಕಾ ತೇರಿನ ಮೆರವಣಿಗೆಯು ಸಾರ್ವಜನಿಕರ ಆಕರ್ಷಣೆಯಾಗಿತ್ತು. ಮಕ್ಕಳು, ಹೂಪ್ಸ್, ಡಂಬಲ್ಸ್ ಲೇಜಿಮ್ ನೃತ್ಯ ಮಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
ವರದಿ: ಜಿಲಾನ್ ಸಾಬ್ ಬಡಿಗೇರ.