ಸಂಪಾದಕರು: ಬಸವರಾಜ ಬಳಿಗಾರ
ಸಂಪರ್ಕ: 9986366909

ಸಂಪಾದಕರು: ಬಸವರಾಜ ಬಳಿಗಾರ 
ಸಂಪರ್ಕ: 9986366909

ಕರುನಾಡ ಕಂದ ಜನ ಜಾಗೃತಿ ವೇದಿಕೆ (ರಿ.)​​

"ಕರುನಾಡ ಕಂದ"ಪತ್ರಿಕಾ ಬಳಗದ ಇನ್ನೊಂದು ಹೆಮ್ಮೆಯ ಕಾಣಿಕೆ
"ಕರುನಾಡ ಕಂದ ಜನ ಜಾಗೃತಿ ವೇದಿಕೆ" (ರಿ.)ಯ ವಿಶೇಷ ಪುಟಕ್ಕೆ ಭೇಟಿ ನೀಡಿ.

ಅರಣ್ಯದಲ್ಲಿ ಕೆರೆ ಕಾಮಗಾರಿ : ಅಕ್ರಮವಾಗಿ ಮಣ್ಣು ಸಾಗಾಟ,

ಮಿತಿಮೀರಿದ ಅರಣ್ಯ ಇಲಾಖೆ ಸಿಬ್ಬಂದಿ ಮಾತು : ಬೇಕಿದೆ ಅಂಕುಶ

ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ನಗರದ ಹೊರಭಾಗದ ಎಪಿಎಂಸಿ ಬಳಿ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಸರ್ವೆ ನಂಬರ್ 160 ರಲ್ಲಿ ಅರಣ್ಯ ಇಲಾಖೆ ವತಿಯಿಂದ ಕೃತಕ ಕೆರೆ ನಿರ್ಮಾಣ ಮಾಡುತ್ತಿದ್ದು, ಕಾಮಗಾರಿ ವೇಳೆ ಟ್ರ್ಯಾಕ್ಟರ್ ಮೂಲಕ ಕೆಲವರು ಅಕ್ರಮವಾಗಿ ಮಣ್ಣು ಸಾಗಾಟ ಮಾಡಿದ್ದು, ಅಕ್ರಮವಾಗಿ ಅರಣ್ಯದ ಮಣ್ಣನ್ನು ಸಾಗಾಟ ಮಾಡುವುದು ಕಾನೂನು ಪ್ರಕಾರ ಅಪರಾಧ. ಇಲಾಖೆ ನಿಯಮಾವಳಿಗಳನ್ನು ಗಾಳಿಗೆ ತೂರಿ ಮಣ್ಣು ಸಾಗಾಟ ಮಾಡಲಾಗಿದೆ ? ಅಕ್ರಮವಾಗಿ ಮಣ್ಣು ಸಾಗಾಟ ಮಾಡುವ ಕುರಿತು ಅರಣ್ಯ ಇಲಾಖೆಯ ಸದರಿ ಬೀಟ್ ನ ಉಪವಲಯ ಅರಣ್ಯಾಧಿಕಾರಿ ಹಾಗೂ ಫಾರೆಸ್ಟ್ ಅವರ ಬಳಿ ಇಲಾಖೆಯಿಂದ ಮಣ್ಣನ್ನು ಮಾರಿಕೊಳ್ಳಲಾಗ್ತಿದೆಯೇ? ಎಂಬ ಕುರಿತು ವಿಚಾರಿಸಿದಾಗ ” ನಮ್ಮ ಕಡೆಯಿಂದ ಯಾವುದೇ ರೀತಿಯಾಗಿ ಮಣ್ಣನ್ನು ಮಾರಿಕೊಳ್ಳುತ್ತಿಲ್ಲ, ಸಾಗಾಟ ಮಾಡಲಾಗುತ್ತಿಲ್ಲ ಹಾಗೂ ಅದಕ್ಕೆ ಅನುಮತಿಯನ್ನು ನೀಡಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಸಿಬ್ಬಂದಿ ಗಳಿಂದ ಹೇಳಿಕೆ ಪಡೆದ ಬಳಿಕ ಮಣ್ಣು ತುಂಬಿದ ಟ್ರ್ಯಾಕ್ಟರ್ ಖುದ್ದು ನೋಡಿದ್ದರಿಂದ ಟ್ರ್ಯಾಕ್ಟರ್ ಚಾಲಕನೊಬ್ಬನನ್ನು ವಿಚಾರಿಸಿದಾಗ ಕೇವಲ ಒಂದೇ ಒಂದು ಟ್ರ್ಯಾಕ್ಟರ್ ಲೋಡ್ ಮಣ್ಣು ತೆಗೆದುಕೊಂಡು ಹೋಗಿದ್ದೇವೆ, ಜಾಸ್ತಿ ವಯ್ಯದಿಲ್ಲ ಅಂತ ಬಾಯಿ ಬಿಟ್ಟಿದ್ದಾನೆ. ಆದರೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಣ್ಣು ಒಯ್ದೆ ಇಲ್ಲ ಅಂತ ವರದಿಗೆ ತೆರಳಿದ ವೇಳೆ ವಾದಿಸಿದ್ದರು. ಸಾರ್ವಜನಿಕರೊಬ್ಬರ ಪ್ರಕಾರ ಮೂರು ದಿನಗಳಲ್ಲಿ ಹೆಚ್ಚಿನ ಲೋಡ್ ಮಣ್ಣು ಸಾಗಾಟವಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.
ಕೆರೆ ಕಾಮಗಾರಿ ಅಂತ ಮಣ್ಣನ್ನು ಸಾಗಾಟ ಮಾಡುತ್ತಿದ್ದ ಕುರಿತು ಆರ್ ಎಫ್ ಒ ಹಾಗೂ ಎಸಿಎಫ್ ಅವರ ಗಮನಕ್ಕೆ ತಂದಾಗ, ಅಧಿಕಾರಿಗಳು ಸಿಬ್ಬಂದಿಗಳಲ್ಲಿ ಈ ಕುರಿತು ವಿಚಾರಿಸುವುದಾಗಿ ಉತ್ತರಿಸಿದ್ದರು. ಆದರೆ ಅದು ಯಾವುದೇ ರೀತಿಯಲ್ಲೂ ಪ್ರಯೋಜನವಾಗಿಲ್ಲ. ಸದರಿ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಫಾರೆಸ್ಟ್ ರ್ ಗಳು ಮೇಲಾಧಿಕಾರಿಗಳಿಗೆ ಸರಿಯಾದ ಮಾಹಿತಿ ನೀಡಿರುವುದಿಲ್ಲ. ಮಣ್ಣು ಸಾಗಾಟ ಮಾಡಿದ ಟ್ರ್ಯಾಕ್ಟರ್ ಮೇಲೆ ಯಾವುದೇ ರೀತಿಯ ಕ್ರಮ ಹಾಗೂ ದಂಡ ವಿಧಿಸುವ ಕೆಲಸ ನಡೆಯದಿರುವುದು ಮಾತ್ರ ದುರಂತ.

ಜೆಸಿಬಿ ಯಿಂದ ಕಾಮಗಾರಿ ಮಾಡುವ ವೇಳೆ ಹತ್ತಾರು ಮರಗಳಿಗೆ ಹಾನಿಯಾಗಿದ್ದು, ಮರಗಳ ಬೇರು ಸಡಿಲಗೊಂಡು ಬೀಳುವ ಹಂತಕ್ಕೆ ತಲುಪಿದೆ. ಚೆನ್ನಾಗಿ ಬೆಳೆದಿದ್ದ ಬಿದಿರಿನ ಕಾಂಡವನ್ನೇ ಬೇರು ಸಮೇತ ಕಿತ್ತು ಹಾಕಿಸಿದ್ದಾರೆ.
ಮಾಹಿತಿ ಪಡೆಯಲು ಕಾಮಗಾರಿ ನಡೆಯುವ ಸ್ಥಳಕ್ಕೆ ತೆರಳಿದಾಗ ಸ್ಥಳದಲ್ಲಿ ಉಪ ವಲಯ ಅರಣ್ಯಾಧಿಕಾರಿಗಳು ಹಾಗೂ ಫಾರೆಸ್ಟರ್ , ಜೆಸಿಬಿ ಮತ್ತು ಟ್ರ್ಯಾಕ್ಟರ್ ಚಾಲಕರು ಇದ್ದರು. ಈ ವೇಳೆ ಮಾತಿನ ಭರದಲ್ಲಿ ಫಾರೆಸ್ಟರ್ ಅವರು ” ಕಳ್ಳರೇ ಉತ್ತರಕನ್ನಡದವರು, ಕಳ್ಳರೇ ಮುಂಡಗೋಡ ದವರು,ನೀವೂ ಕಳ್ಳರೇ, ಎಲ್ಲರೂ ಶಾಮಿಲಾಗಿದ್ದೀರಿ, ಮರ ಕಡಿಯುವರು ಇಲ್ಲಿಯವರೇ ಪೇಪರನಾಗ್ ಕೊಡುವವರು ಇಲ್ಲಿಯವರೇ, ಪ್ರತಿಯೊಂದು ಮನೇನು ಅತಿಕ್ರಮಣದಾಗ, ಹೊಲಾನು ಪುಕ್ಕಟ್ ಜಂಗಲ್ದೆ ,ಈಗಾಗಲೇ ಇಲಾಖೆಯನ್ನು ನುಂಗಿ ನೀರು ಕುಡಿಯಲಾಗಿದೆ, ಇಲಾಖೆಗೆ ನಾಲ್ಕು ಜನ ಕೆಲಸಕ್ಕೆ ಬಂದಾಗ ಅವರಿಗೆ ಯಾವಾಗ ಮಣ್ಣು ಕೊಡಬೇಕು ಅಂತ ಕಾಯ್ತಾ ಇರ್ತಿರ ಅಂತ ಹೇಳಿದ್ದಲ್ಲದೆ, ಪ್ರಾರಂಭದಲ್ಲಿ ಮಾಹಿತಿ ಪಡೆಯುವ ವೇಳೆ ನಾಲ್ಕು ದಿನಗಳಿಂದ ಟ್ರ್ಯಾಕ್ಟರ್ ಮಣ್ಣು ಸಾಗಾಟ ಮಾಡಿದೆ ಎಂದು ವರದಿಗಾರ ಹೇಳಿದ್ದನ್ನು, ಪುನರುಚ್ಚರಿಸಿದ ಫಾರೆಸ್ಟರ್ , ನಾಲ್ಕು ದಿನಗಳಿಂದ ಇಲ್ಲಿ ಟ್ರ್ಯಾಕ್ಟರ್ ಹಾಕಿದ್ರೆ ನನ್ನ ತಿಂಗಳ ಪೂರ್ಣ ಸಂಬಳ ಕೊಡ್ತೀನಿ, ಅದು ಸುಳ್ಳಾದರೆ, ಕೆಲಸ ಹೋದರೂ ಪರವಾಗಿಲ್ಲ ಅವನೌನ ಮೆಟ್ನಲ್ಲಿ ಹೊಡೆತೀನಿ ಅನ್ನೋ ಉದ್ಧಟತನದ ಮಾತುಗಳನ್ನು ಹೇಳಿದ್ದು, ನಿಜಕ್ಕೂ ವರದಿಗೆ ತೆರಳಿದವರಿಗೆ ಅಧಿಕಾರಿಗಳ ಮಾತಿನಿಂದ ಶಾಕ್ ಆಗಿರುವುದಂತೂ ನಿಜ. ಒಬ್ಬ ಸರ್ಕಾರಿ ಇಲಾಖೆ ಅಧಿಕಾರಿಯಾಗಿ ಪತ್ರಕರ್ತರು ಹಾಗೂ ಸಾರ್ವಜನಿಕರ ನಡುವೆ ಯಾವ ರೀತಿಯಾಗಿ ಸೌಜನ್ಯದಿಂದ ವರ್ತಿಸಬೇಕು ಎಂಬ ಅರಿವಿಲ್ಲದೆ, ನಾನೊಬ್ಬ ಮಾಜಿ ಸೈನಿಕ ನನಗೆ ಏನು ಮಾಡಬೇಕು ಎಂದು ಗೊತ್ತಿದೆ ಅಂತ ಸೈನಿಕ ಅನ್ನುವ ಪದವನ್ನು ದುರ್ಬಳಕೆ ಮಾಡಿಕೊಂಡಿದ್ದಲ್ಲದೆ , ವರದಿಗಾರರ ಕಚೇರಿ ಬಳಿ ಜೆಸಿಬಿ ಡ್ರೈವರ್ ಹಾಗೂ ಟ್ರ್ಯಾಕ್ಟರ್ ಚಾಲಕನನ್ನು ಕರೆದುಕೊಂಡು ಬಂದು ವಿಡಿಯೋ ಮಾಡಿಕೊಂಡಿದ್ದು ಅಲ್ಲದೆ ನಾಳೆ ಪೇಪರ್ ನಲ್ಲಿ ಈ ವಿಷಯ ಬರಬಾರದು ಅಂತ ಗದರಿದ್ದಾರೆ.
ಹಿರಿಯ ಅಧಿಕಾರಿಗಳು ದುರ್ನಡತೆ ತೋರಿರುವ ಫಾರೆಸ್ಟರ್ ಅವರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ಜನರ ಜೊತೆ ಹೇಗೆ ವರ್ತಿಸಬೇಕು ಎಂಬುದರ ಕುರಿತು ತಿಳಿಹೇಳಬೇಕಿದೆ
ಪತ್ರಿಕಾರಂಗ ಎನ್ನುವುದು ಪ್ರಜಾಪ್ರಭುತ್ವದ ನಾಲ್ಕನೆಯ ಅಂಗ, ಸಮಾಜದಲ್ಲಿ ತಪ್ಪು ನಡೆದಾಗ ಖಂಡಿಸುವುದು, ಒಳ್ಳೆಯ ಕಾರ್ಯ ನಡೆದಾಗ ಪ್ರಶಂಸಿಸುವುದು ಪತ್ರಿಕಾ ಧರ್ಮ, ಆದರೆ ಈ ರೀತಿಯಾಗಿ ಅಧಿಕಾರ ಇದೆ ಅಂತ ಪತ್ರಕರ್ತರನ್ನು ಹಣಿಯುವ ಕೆಲಸ ಮಾಡಬಾರದು, ಪತ್ರಕರ್ತರು ಸಮಾಜದ ಪರವಾಗಿ ಕೆಲಸ ಮಾಡುತ್ತಾರೆ ಎಂಬುದನ್ನು ಸಾಬೀತು ಪಡಿಸುವ ಅವಶ್ಯಕತೆ ಇರುವುದಿಲ್ಲ, ಆದರೆ ಅಧಿಕಾರಿಗಳು ಮಾತು ಬಳಸುವ ವೇಳೆ ಯೋಚನೆ ಮಾಡಿ ಮಾತನಾಡಬೇಕಿದೆ. ಹಾಗೂ ಸಾರ್ವಜನಿಕರ ಜೊತೆಗೆ ಪತ್ರಕರ್ತರ ಜೊತೆ ಹೇಗೆ ವರ್ತಿಸಬೇಕು ಯಾವ ರೀತಿಯಾಗಿ ಪದಗಳನ್ನು ಬಳಸಬೇಕು ಎಂಬ ಕುರಿತು ಸದರಿ ಫಾರೆಸ್ಟರ್ ಅವರಿಗೆ ಟ್ಯೂಶನ್ ಕೊಡುವ ಅಗತ್ಯವಿದೆ.

ಮಣ್ಣು ಸಾಗಾಟ ಮಾಡುವ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಹಾಗೂ ಫಾರೆಸ್ಟರ್ ಅವರ ದುರ್ನಡತೆ ಮತ್ತು ಉಪ ವಲಯ ಅರಣ್ಯಾಧಿಕಾರಿ ಗಳ ಅವರ ಕರ್ತವ್ಯ ಲೋಪ ಕುರಿತು ಮುಂಡಗೋಡ ಆರ್ ಎಫ ಒ ವಾಗೀಶ ಬಿ ಜೇ ಅವರಿಗೆ ಮಾಹಿತಿ ನೀಡಿದಾಗ ಈ ಬಗ್ಗೆ ವಿಚಾರಿಸುತ್ತೇನೆ ಎಂದು ಹೇಳಿದರು. ಆದರೆ ಮಣ್ಣು ಸಾಗಾಟ ಕುರಿತು ಮಾಹಿತಿ ನೀಡಿ 5 ದಿನಗಳಾದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ .ಗ್ರಾಮೀಣ ಭಾಗದಲ್ಲಿ ನಡೆಯುತ್ತಿದ್ದ ಮಣ್ಣು ಸಾಗಾಟ ಪ್ರಕರಣಗಳು ಈಗ ನಗರ ಭಾಗದಲ್ಲಿ ಕೂಡ ರಾಜಾರೋಷವಾಗಿ ನಡೆದಿದ್ದು, ಬೇಲಿಯೇ ಎದ್ದು ಹೊಲ ಮೇಯ್ದಂತೆ ಆಗಿದೆ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಕರುನಾಡ ಕಂದ ಪಾಕ್ಷಿಕ ಪತ್ರಿಕೆಯು ದೆಹಲಿಯ R.N.I ನಿಂದ ಅನುಮೋದನೆ ಪಡೆದ ರಾಜ್ಯಮಟ್ಟದ ಪತ್ರಿಕೆಯಾಗಿದ್ದು 2021 ನವೆಂಬರ್ 1 ರಿಂದ ಕೊಪ್ಪಳ ಜಿಲ್ಲೆಯಿಂದ ಪ್ರಾರಂಭವಾದ ಪತ್ರಿಕೆ ಇಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನ ವರದಿಗಾರರು ಹಾಗೂ ಅಪಾರ ಓದುಗರು, ಚಂದಾದಾರರ ಬಳಗವನ್ನು ಹೊಂದಿದೆ. (ನಮ್ಮ ಬಗ್ಗೆ ತಿಳಿಯಿರಿ- ಇಲ್ಲಿ ಕ್ಲಿಕ್‌ ಮಾಡಿ)

ಕರುನಾಡ ಕಂದ ಆನ್‌ಲೈನ್‌ ಸುದ್ದಿತಾಣದಲ್ಲಿ ಜಾಹೀರಾತು ದರ ದಿನಕ್ಕೆ 500 ರೂ.
ಪತ್ರಿಕೆಯ ಜಾಹೀರಾತು ದರ ಕಾಲು ಪುಟ 3,000/-
ಅರ್ಧ ಪುಟ 5,000/-
ಪೂರ್ಣ ಪುಟ 10,000/-

ಸ್ಥಳೀಯ ಸುದ್ದಿ,ಜಾಹೀರಾತು ಹಾಗೂ ವರದಿಗಾರರಾಗಲು ಸಂಪರ್ಕಿಸಿ

ಬಸವರಾಜ ಬಳಿಗಾರ
ಸಂಪಾದಕರು, ಕರುನಾಡ ಕಂದ
ಕರೆ ಮಾಡಿ 9986366909

Facebook
Twitter
WhatsApp
LinkedIn

Leave a Reply

Your email address will not be published. Required fields are marked *

ಇದನ್ನೂ ಓದಿ