
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಗೂರ ಎನ್ ಗ್ರಾಮದಲ್ಲಿ ಪವಾಡ ಪುರುಷ ಸದ್ಗುರು ಶ್ರೀ ಭೋಜಲಿಂಗೇಶ್ವರ ಜಾತ್ರೋತ್ಸವ ನಿಮಿತ್ತ ಮಂಗಳವಾರದಿಂದ ಮಾ. 6ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ ಎಂದು ಶ್ರೀಮಠ ತಿಳಿಸಿದೆ. ಶ್ರೀ ಮಠದ ಪೀಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಹಿರಗಪ್ಪ ತಾತನವರ ದಿವ್ಯ ಸಾನ್ನಿಧ್ಯದಲ್ಲಿ ಮಂಗಳವಾರ ಬೆಳಿಗ್ಗೆ ಶ್ರೀ ಭೋಜಲಿಂಗೇಶ್ವರರ ಕರ್ತೃ ಗದ್ದುಗೆಗೆ ವಿಶೇಷ ಪೂಜೆ , ಅಭಿಷೇಕ, ಹೂವಿನ ಅಲಂಕಾರ ನಡೆಯಲಿದೆ. ಬುಧವಾರ ಸಂಜೆ 10:30 ಕ್ಕೆ ಸಂಭ್ರಮದಿಂದ ಪಲ್ಲಕ್ಕಿ ಮೆರವಣಿಗೆ ಜರುಗಲಿದೆ. ಮಾ.6 ರಂದು ಸಂಜೆ 7.05 ಕ್ಕೆ ಅಸಂಖ್ಯಾತ ಭಕ್ತರ ಜೈ ಘೋಷದ ಮಧ್ಯೆ ಮಹಾರಥೋತ್ಸವ ನಡೆಯಲಿದೆ. ಬಳಿಕ ದರ್ಮಸಭೆ ಜರುಗಲಿದೆ. ಅನೇಕ ಮಠಾಧೀಶರು ಮತ್ತು ಅನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ, ಹಾಗಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಗುರುಗಳ ದರ್ಶನಾಶೀರ್ವಾದ ಪಡೆದುಕೊಳ್ಳಬೇಕು ಎಂದು ಶ್ರೀ ಮಠದ ಭಕ್ತರಾದ ಶ್ರೀಮಠದ ಭಕ್ತರಾದ ಸೋಮಣ್ಣ ಗೌಡ ತುಮಕೂರು, ಶರಣಗೌಡ ಬೆನಕನಹಳ್ಳಿ, ಶರಣಗೌಡ ವಕೀಲರು. ಶ್ರೀ ಭೀಮರೆಡ್ಡಿ ಗೌಡ ಕುರಾಳ, ಹಾಗೂ ವಿಶ್ವನಾಥ ರೆಡ್ಡಿ ಪಾಟೀಲ ಹಾಗೂ ಸಂಗಾರೆಡ್ಡಿ ಮಾಲಿ ಪಾಟೀಲ್ , ಮಹಿಪಾಲ್ ರೆಡ್ಡಿ ಕರಣಗಿ,ಬಸವರಾಜ ಪಾಟೀಲ ಮಾರಡಗಿ, ಬಸವರಾಜ ಮಾಲಿ ಪಾಟೀಲ, ಮಹಾದೇವ ರೆಡ್ಡಿ ತುಮಕೂರು ,ವಿಶ್ವನಾಥ ರೆಡ್ಡಿ ವಡ್ನಳ್ಳಿ , ಮಲ್ಲಿನಾಥ ಪೋಟೊ ಸ್ಟುಡಿಯೋ, ಬಾಬು ಪಾಟೀಲ್ , ಸಿದ್ದು ಗೌಡ ಕುರಾಳ, ಕರಬಸಪ್ಪ ದಂಡಗಿ, ಸಿದ್ದು ಸಾಹು ಕುಂಬಾರ, ಬಸವರಾಜ ಹಡಪದ, ರಾಜೇಂದ್ರ ನಾಯ್ಕೊಂಡಿ , ಅನಿಲಕುಮಾರ ಚವ್ಹಾಣ ಹಾಗೂ ಮಲ್ಲಿಕಾರ್ಜುನ ಬಿ ಹಡಪದ ಸುಗೂರ .ಎನ್ ಸೇರಿದಂತೆ ಪತ್ರಿಕೆ
ಪ್ರಕಟಣೆಯಲ್ಲಿ ತಿಳಿಸಿದರು.
- ಕರುನಾಡ ಕಂದ