ಚಾಮರಾಜನಗರ: ಧಾನ್ ಫೌಂಡೇಶನ್ ಮತ್ತು ಲೀಡ್ ಬ್ಯಾಂಕ್ ವತಿಯಿಂದ ಗುಂಡ್ಲುಪೇಟೆ ತಾಲ್ಲೂಕಿನ ಬರಗಿ ಗ್ರಾಮ ಪಂಚಾಯಿತಿಯಲ್ಲಿ ವಿವಿಧ ಫೈನಾನ್ಸ್ ಸಂಸ್ಥೆ ಗಳೊಂದಿಗೆ ಮೈಕ್ರೋ ಫೈನಾನ್ಸ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಮ್ಯಾನೇಜರ್ ಸುರೇಖಾ ಮೇಡಂ ರವರು ಭಾಗವಹಿಸಿ ಆರ್.ಬಿ.ಐ ನೋಂದಾಯಿತ ಹಣಕಾಸು ಸಂಸ್ಥೆಗಳ ಪೈಕಿ ರಾಷ್ಟ್ರೀಕೃತ ಬ್ಯಾಂಕಿಂಗ್ ಗಳು ಅಧಿಕೃತ ಫೈನಾನ್ಸ್ ಸಂಸ್ಥೆಗಳು ಮತ್ತು ಅನಧಿಕೃತ ಫೈನಾನ್ಸ್ ಸಂಸ್ಥೆಗಳು ಇವುಗಳ ನಡುವಿನ ವ್ಯತ್ಯಾಸ ಮತ್ತು ಬಡ್ಡಿದರ ವಸೂಲಾತಿ ವಿಧಾನ ಸಾಲ ಕೊಡುವ ವಿಧಾನ ಇವುಗಳ ಬಗ್ಗೆ ಬ್ಯಾಂಕ್ ಗಳಲ್ಲಿ ಸಿಗುವ ಸೌಲಭ್ಯಗಳು ಮತ್ತು
ಸದುಪಯೋಗ ಸಿವಿಲ್ ಸ್ಕೋರ್ ನ ಅಗತ್ಯತೆ ಸ್ಮಾಲ್ ಫೈನಾನ್ಸ್ ಗಳ ಕಿರುಕುಳ ಮತ್ತು ಪರಿಹಾರ ಮುದ್ರಾ ಸಾಲದ ಬಗ್ಗೆ ಸರ್ಕಾರದ ಸುಗ್ರೀವಾಜ್ಞೆ ಆದೇಶದ ಅಂಶಗಳು ಅವುಗಳ ಅನುಸರಿಸುವ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಸಿದರು.
ಸಿ.ಎಫ್.ಎಲ್ ಕೋ-ಆರ್ಡಿನೇಟರ್ ಗೋವಿಂದರಾಜು ಮಾತನಾಡಿ ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಸದುಪಯೋಗ ಸೈಬರ್ ಅಪರಾಧ ಪ್ರಕರಣಗಳು ಆನ್ಲೈನ್ ವಂಚನೆ ಪ್ರಕರಣಗಳು ಮತ್ತು ಪರಿಹಾರ ಮೊಬೈಲ್ ದುರುಪಯೋಗ ಕೌಟುಂಬಿಕ ಆರ್ಥಿಕ ನಿರ್ವಹಣೆ ಮಹತ್ವ ವಿಚಾರಗಳ ಬಗ್ಗೆ ತಿಳಿಸಿದರು. ಸ್ಮಾಲ್ ಫೈನಾನ್ಸ್ ವಸೂಲಿಗಾರರ
ಸಮುದಾಯದಲ್ಲಿನ ನಡವಳಿಕೆ ಬದಲಾಯಿಸಿಕೊಳ್ಳುವ ಮತ್ತು ಕಾನೂನು ಕ್ರಮಗಳ ಬಗ್ಗೆ ಅರಿವು ಮೂಡಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ಸುರೇಖಾ ಮೇಡಂ ರವರು ಗ್ರಾಮ ಪಂಚಾಯಿತಿ ಅಧ್ಯಕ್ಷರು
ಕೆನರಾ ಬ್ಯಾಂಕ್ ಮ್ಯಾನೇಜರ್ ರಾಹುಲ್ ರವರು ಸೂರ್ಯಕುಮಾರ್ ರವರು ಮುತ್ತೂಟ್ ಫೈನಾನ್ಸ್ ನ ಭದ್ರಾಕುಮಾರ್ ಜನಾ ಬ್ಯಾಂಕ್ ನ ರವಿಕುಮಾರ್ ರವರು ಬೆಲಸ್ಟಾರ್ ಫೈನಾನ್ಸ್ ನ ಸೇಂದಿಲಕುಮಾರ್ ರವರು ಸಿ.ಎಫ್.ಎಲ್ ಕೋ-ಆರ್ಡಿನೇಟರ್ ಗೋವಿಂದರಾಜು ರವರು ಎಫ್.ಎಲ್.ಸಿ ಚಂದ್ರಶೇಖರ ರವರು ಇತರೆ ಫೈನಾನ್ಸ್ ಸಿಬ್ಬಂದಿಗಳು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.
