ಬೀದರ/ ಬಸವಕಲ್ಯಾಣ: ಇಂದು ದಿ. 05/03/2025 ಬುಧವಾರದಂದು ಬಸವಕಲ್ಯಾಣ ತಾಲೂಕಿನ ಮುಡಬಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಬರುವ ಬಗದುರಿ ಗ್ರಾಮದಲ್ಲಿ ರೈತರು ಬೆಳೆದ ಬೆಳೆಗಳನ್ನು ಮಂಗಗಳು ಸರ್ವನಾಶ ಮಾಡುತ್ತಿವೆ, ಸದ್ಯ ಗ್ರಾಮದಲ್ಲಿ ರೈತರು ತಮ್ಮ ತಮ್ಮ ಜಮೀನುಗಳಲ್ಲಿ ತಮ್ಮ ಉಪ ಜೀವನಕ್ಕಾಗಿ ಕೆಲವರು ಗೋಧಿ, ಖಪಲಿ, ಜೋಳ, ಸೇಂಗಾ, ಕಲ್ಲಂಗಡಿ, ತರಕಾರಿ ಹೀಗೆ ಇತರೆ ಬೆಳೆಗಳನ್ನು ಬೆಳೆದಿರುತ್ತಾರೆ. ಆದರೆ ರೈತರು ಬೆಳೆದ ಬೆಳೆ ಅವರ ಅವರುಗಳ ಕೈಗೆ ಸಿಗದಂತಾಗಿದೆ, ಏಕೆಂದರೆ ಸುಮಾರು 500 ರಿಂದ 1000 ಸಾವಿರ ಮಂಗಗಳು ತಲಾ 40 ರಿಂದ 50ರ ಗುಂಪುಗಳನ್ನಾಗಿ ಮಾಡಿಕೊಂಡು ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಸರ್ವನಾಶ ಮಾಡುತ್ತಿರುವುದನ್ನು ಕಂಡು ರೈತರು ಬೇಸತ್ತು ಇಂದು ಬಸವಕಲ್ಯಾಣ ನಗರದ ಉಪ ವಲಯ ಅರಣ್ಯಾಧಿಕಾರಿಗಳ ಕಛೇರಿಗೆ ಭೇಟಿ ಮಾಡಿ ಪತ್ರದ ಮುಖಾಂತರ ತಮ್ಮ ಅಳಲು ತೋಡಿಕೊಂಡರು. ಇದೇ ಸಂಧರ್ಭದಲ್ಲಿ ಗ್ರಾಮದ ರೈತರುಗಳಾದ ಶ್ರೀ ಶಿವಾನಂದ ಬಿರಾದಾರ, ಶ್ರೀ ರವಿಂದ್ರ ಮೂಲಗೆ, ಶ್ರೀ ಶರಣಪ್ಪಾ ಮಹಾಗಾಂವ, ಶ್ರೀ ಯಶ್ವಂತ ಮೈಸೆ, ಶ್ರೀ ಸುದೇವ ಮಹಾಗಾಂವ, ಶ್ರೀ ಜೀತೇಂದ್ರ ಮಂದಿರಕರ, ಶ್ರೀ ಶಂಭುಲಿಂಗ ರಾಜೋಳೆ, ಶ್ರೀ ಪರಮೇಶ್ವರ ಬಿರಾದಾರ, ಶ್ರೀ ಸಂಜೀವಕುಮಾರ ಬಿರಾದಾರ, ಶ್ರೀ ಮಹೇಶ ಬಿರಾದಾರ, ಎಮ್.ಡಿ. ರಫೀಕ ಮುಲ್ಲಾ, ರಸೀದಮಿಯ್ಯಾ ಮುಲ್ಲಾ ಹಾಗೂ ಇತರರು ಇದ್ದರು.
ವರದಿ ಶ್ರೀನಿವಾಸ ಬಿರಾದಾರ