ಚಾಮರಾಜನಗರ/ ಗುಂಡ್ಲುಪೇಟೆ: ಮೈಕ್ರೋ ಫೈನಾನ್ಸ್ ಇಂಡಸ್ಟ್ರಿ ನೆಟ್ ವರ್ಕ್ ಮತ್ತು ಲೀಡ್ ಬ್ಯಾಂಕ್ ಚಾಮರಾಜನಗರ ಮತ್ತು ಧಾನ್ ಫೌಂಡೇಶನ್ ಸಹಯೋಗದೊಂದಿಗೆ ದಿ. 5.2.2025 ರ ಮೂಖಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ
ಮೈಕ್ರೋ ಫೈನಾನ್ಸ್ ಜಾಗೃತಿ ಕಾರ್ಯಕ್ರಮವು ವಿವಿಧ ಮೈಕ್ರೋ ಫೈನಾನ್ಸ್ ಗಳ ಸಹಕಾರದೊಂದಿಗೆ ನಡೆಸಲಾಯಿತು.
ಲೀಡ್ ಬ್ಯಾಂಕ್ ಮ್ಯಾನೇಜರ್ ಮಾತನಾಡಿ ಇತ್ತಿಚೆಗೆ ಸರ್ಕಾರ ಜಾರಿಗೆ ತಂದ ಸುಗ್ರೀವಾಜ್ಞೆಗಳ ಅನ್ವಯ ಫೈನಾನ್ಸ್ ಸಂಸ್ಥೆಗಳು ತಿಳಿದು ವ್ಯವಹರಿಸಬೇಕು , ಸಮುದಾಯದ ಮಹಿಳೆಯರು ಸಾಲಭಾದೆ, ಕಿರುಕುಳಕ್ಕೆ ಒಳಗಾಗದೆ ಧೈರ್ಯವಾಗಿರಬೇಕು, ಆದಾಯದ ಮಿತಿಯೊಳಗೆ ಸಾಲ ಪಡೆಯಬೇಕು, ಗ್ರಾಮೀಣ ಮಟ್ಟದಲ್ಲಿ ಉತಮ ಜೀವನ ಕಟ್ಟಿಕೊಳ್ಳುವಲ್ಲಿ ಜನರು ಶ್ರಮಿಸಬೇಕು. ಫೈನಾನ್ಸ್ ಅಥವಾ ಹಣಕಾಸು ವಸೂಲಿಗಾಗಿ ಯಾವುದೇ ತೊಂದರೆ, ಕಿರುಕುಳ, ಬಲವಂತದ ದೌರ್ಜನ್ಯಗಳು ಉಂಟಾದಲ್ಲಿ ನಾಗರೀಕರು ಸಹಾಯವಾಣಿ ಸಂಖ್ಯೆ 1930 ಕರೆಮಾಡುವ ಮೂಲಕ ಸಹಾಯ ಪಡೆಯಬಹುದು ಎಂದು ತಿಳಿಸಿದರು.
ಕೇಂದ್ರ ಹಣಕಾಸು ಸಾಕ್ಷರತಾ ಸಂಯೋಜಕರು ಗೋವಿಂದರಾಜು ಮಾತನಾಡಿ ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪಾತ್ರ, ಮಹತ್ವ ಮತ್ತು ಮಹಿಳಾ ಸಬಲೀಕರಣ, ಸಮುದಾಯದ ಬಡತನ, ನಿರುದ್ಯೋಗ ನಿವಾರಣೆಯಲ್ಲಿ ಇವರ ಕೊಡುಗೆ ಅಪಾರ ಆದರೆ ಬಲವಂತದ ಸಾಲ ನೀಡಿಕೆ ಮತ್ತು ಮರುಪಾವತಿಗೆ ಬಳಸುವ ವಿಧಾನ ಸಾಮಾಜಿಕ ವ್ಯವಸ್ಥೆಗೆ ಮಾರಕವಾಗಿದೆ ಹಾಗೂ ಇದು ಬದಲಾವಣೆ ಆಗಬೇಕಿದೆ ಹಾಗೂ ಆರ್ಥಿಕ ಶಿಕ್ಷಣದ ಅವಶ್ಯಕತೆ ಇದೆ ಎಂದು ತಿಳಿಸಿದರು.
ಜನ ಬ್ಯಾಂಕ್ ನ ರವಿಕುಮಾರ್ ಮಾತನಾಡಿ ಸ್ಥಳದಲ್ಲಿಯೇ ಕುಂದುಕೊರತೆ ಆಲಿಸಿ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಮರುಕಳಿಸದ ಹಾಗೆ
ಕ್ರಮ ವಹಿಸುವ ಬಗ್ಗೆ ಹಾಗೂ ನಾಗರಿಕರ ಹಲವು ಪ್ರಶ್ನೆಗಳಿಗೆ ಉತ್ತರಿಸಿ ಮುಂದಿನ ದಿನಗಳಲ್ಲಿ ಗ್ರಾಮೀಣ ಆರ್ಥಿಕ ಚಟುವಟಿಕೆಗಳ ಅಭಿವೃದ್ಧಿಗಾಗಿ ನಮ್ಮನ್ನು ತೊಡಗಿಸಿಕೊಳ್ಳುತ್ತೇವೆ ಎಂದು ಭರವಸೆ ನೀಡಿ ಹಲವಾರು ಹೊಸ ಗ್ರಾಹಕರ ಕಿರು ಸಾಲಗಳಿಗೆ ನೋಂದಣಿ ಪ್ರಕ್ರಿಯೆಗೆ ಅವಕಾಶ ಮಾಡಿಕೊಟ್ಟರು
ಕಾರ್ಯಕ್ರಮ ಅತಿಥಿಗಳಾಗಿ ಸುರೇಖಾ ರವರು ಲೀಡ್ ಬ್ಯಾಂಕ್ ಚಾಮರಾಜನಗರ ಮಹದೇವಮ್ಮ ಮೂಖಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು
ಪ್ರಸಾದ್ ರವರು ಪಿ ಡಿ ಓ ಮೂಖಹಳ್ಳಿ ಗ್ರಾಮ ಪಂಚಾಯಿತಿ, ಗೋವಿಂದರಾಜು
ಸಿ.ಎಫ್.ಎಲ್ ಸಂಯೋಜಕರು ಯಳಂದೂರು,
ಮಹೇಶ್ ಬೆಲ್ ಸ್ಟಾರ್ ಫೈನಾನ್ಸ್ ಬ್ರಾಂಚ್ ಮ್ಯಾನೇಜರ್, ಕಾರ್ತಿಕ್ ಗ್ರಾಮೀಣ ಕೂಟ ಫೈನಾನ್ಸ್ ವಿಭಾಗೀಯ ಮ್ಯಾನೇಜರ್, ಮಣಿಕಂಠ ಮುತ್ತೂಟ್ ಫೈನಾನ್ಸ್ ವಿಭಾಗೀಯ ಮ್ಯಾನೇಜರ್ ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.
