ಕಲಬುರಗಿ: ಮಾರ್ಚ್ 5 ರಂದು ಜಿಲ್ಲೆಯ ವೀರಶೈವ ಕಲ್ಯಾಣ ಮಂಟಪದಿಂದ ಜಿಲ್ಲಾಧಿಕಾರಿಗಳ ಕಛೇರಿ ವರೆಗೆ ಸಾವಿರಾರು ರೈತರು ಎತ್ತಿನ ಬಂಡೆಗಳು ಮತ್ತು ಟ್ರ್ಯಾಕ್ಟರ್ ಗಳ ಮುಖಾಂತರ ಮಠಾಧೀಶರು, ಸಂಘ – ಸಂಸ್ಥೆಗಳು, ರೈತಪರ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಮಾಜಿ ಸೈನಿಕರು ಹಾಗೂ ಹಲವಾರು ರೈತ ಮುಖಂಡರು ಸ್ವಯಂ ಪ್ರೇರಿತರಾಗಿ ಜಿಲ್ಲಾ ರೈತ ಹೋರಾಟ ಸಮಿತಿಗೆ ಬೆಂಬಲ ಕೊಟ್ಟು ಬೃಹತ್ ಪ್ರತಿಭಟನೆಯ ಮುಖೇನ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ರೈತರ ವಿವಿಧ ಬೇಡಿಕೆಗಳಾದ 2025 ರಲ್ಲಿ ಹಾನಿಯಾದ ತೊಗರಿ ಬೆಳೆಗಳಿಗೆ ಪರಿಹಾರ, ಸುಮಾರು ಹತ್ತು ಸಾವಿರ ಬೆಂಬಲ ಬೆಲೆ ಘೋಷಣೆ ಹಾಗೂ ಇತರೆ ಮುಖ್ಯವಾದ ಬೇಡಿಕೆಗಳನ್ನು ಈಡೇರಿಸುವುದರ ಸಲುವಾಗಿ ನಿರಂತರವಾಗಿ ಎರಡು ದಿನಗಳ ಕಾಲ ಹೋರಾಟ ಮಾಡುತ್ತಿದ್ದರು ಕ್ಯಾರೇ ಎನ್ನದ ದಪ್ಪ ಚರ್ಮದ ಸರ್ಕಾರಕ್ಕೆ ಪಾಠ ಕಲಿಸುತ್ತೇವೆ ಎಂದು ರೈತ ಮುಖಂಡ ರೇವಣಸಿದ್ದಪ್ಪ ಸಂಕಾಲಿಯವರು ಹೇಳಿದರು. ಈ ಹೋರಾಟ ಮಾಡುವುದು ಅಧಿಕಾರಿಗಳ ಗಮನಕ್ಕೆ ಬಂದರೂ ಕೂಡಾ ಯಾವುದೇ ರೀತಿಯಾಗಿ ಜಿಲ್ಲಾಧಿಕಾರಿಗಳಾಗಲಿ, ಉಸ್ತುವಾರಿ ಸಚಿವರಾಗಲಿ ಸ್ಪಂದಿಸದೆ ಇರುವುದರಿಂದ ರೈತ ಜಿಲ್ಲಾ ಹೋರಾಟ ಸಮಿತಿಯ ಪತ್ರಿಭಟನೆ ಮತ್ತು ಹೋರಾಟವು ಇನ್ನೂ ತೀವ್ರಗೊಳಿಸಿ ಬೆಂಗಳೂರಿನ ವಿಧಾಸೌಧ ಮುತ್ತಿಗೆ ಹಾಕುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಶಾಂತಗೌಡ ಮಾಲಿ ಪಾಟೀಲ್ ಆಕ್ರೋಶ ಹೊರ ಹಾಕಿದರು.
ನಿರಂತರವಾಗಿ ಎರಡು ದಿನಗಳ ಕಾಲ ಹೋರಾಟ ಮಾಡುತ್ತಿದ್ದರೂ ಸ್ಪಂದಿಸದ ಸರ್ಕಾರಕ್ಕೆ ನಾವು ನ್ಯಾಯ ಸಿಗುವುವರೆಗೆ ಹೋರಾಟ ಮಾಡುತ್ತೇವೆ ಯಾವುದೇ ರೀತಿಯಾಗಿ ಕೈ ಬಿಡುವ ಸಂಶಯವೇ ಇಲ್ಲವೆಂದು ರೈತ ನಾಯಕರಾದ ಅವಣ್ಣ ಮ್ಯಾಕೇರಿಯವರು ಹೇಳಿದರು.
ಈ ಒಂದು ಪ್ರತಿಭಟನೆಯಲ್ಲಿ ಮುಖ್ಯವಾಗಿ ರೈತ ಮುಖಂಡರಾದ ದಯಾನಂದ ಪಾಟೀಲ್, ಸುರೇಶ್ ಸಜ್ಜನ್ ,ಪ್ರಶಾಂತಗೌಡ ಮಾಲಿ ಪಾಟೀಲ್, ಶರಣಗೌಡ ಐಕೂರ್, ಸುರೇಶ್ ಪಾಟೀಲ್ ನೇದಲಗಿ, ಬಸವರಾಜ ಸಂಕಾಲಿ, ಶರಣಗೌಡ ಪಾಟೀಲ್ ಗುಡೂರ ಹಾಗೂ ಇತರರೆಲ್ಲಾ ರೈತ ಮುಖಂಡರು ಭಾಗವಹಿಸಿದರು.
ಹೋರಾಟದಲ್ಲಿ ಹಲವಾರು ರೈತರು ತಮ್ಮ- ತಮ್ಮ ಶಾಸಕರ ಹಾಗೂ ಅಧಿಕಾರಿಗಳ ವಿರುದ್ದ ಹರಿಹಾಯ್ದರು.
ವರದಿ: ಚಂದ್ರಶೇಖರ ಪಾಟೀಲ್