ಕಲಬುರಗಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಪ್ರಸಕ್ತ 2025 ರ ಸಾಲಿನ ಈ ವರ್ಷದ ಬಜೆಟ್ ನಲ್ಲಿ ಹಡಪದ ಅಪ್ಪಣ್ಣ ಸಮಾಜದ ಜನತೆಗೆ ನಮ್ಮ ಸಮುದಾಯ ಮಟ್ಟಿಗೆ ನಿರಾಶಾದಾಯಕವಾಗಿದೆ ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಡಾ. ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು 12 ನೇ ಶತಮಾನದ ವಿಶ್ವಗುರು ಬಸವಣ್ಣನವರ ಆಪ್ತ ಕಾರ್ಯದರ್ಶಿಗಳಾದ ಶರಣ ಹಡಪದ ಅಪ್ಪಣ್ಣ ಸಮಾಜಕ್ಕೆ ಅನ್ಯಾಯ..? ಈ 2025 ರ ರಾಜ್ಯ ಬಜೆಟ್ ನಲ್ಲಿ ನಮ್ಮ ಸಮುದಾಯ ಇಟ್ಟುಕೊಂಡ ನಿರೀಕ್ಷೆ ಹುಸಿಯಾಗಿದೆ ಎಂದರು. ಹಡಪದ ಅಪ್ಪಣ್ಣ ಸಮಾಜದ ಪ್ರತ್ಯೇಕ ಅಭಿವೃದ್ದಿ ನಿಗಮ ಮಂಡಳಿ ಪೂರ್ಣಪ್ರಮಾಣದಲ್ಲಿ ಜಾರಿಗೆ ತರದೇ ಮತ್ತು ಈ ನಿಗಮಕ್ಕೆ ನಯಾ ಪೈಸೆ ಹಣ ನೀಡದೆ ಕಡೆಗಣಿಸಿದ್ದಾರೆ. ಮತ್ತು ಕಲಬುರಗಿ ಜಿಲ್ಲೆಯ ವಿಶ್ವವಿದ್ಯಾಲಯದಲ್ಲಿ ಇರುವ ಹಡಪದ ಅಪ್ಪಣ್ಣ ನವರ ಅಧ್ಯಯನ ಪೀಠದ ಪ್ರತ್ಯೇಕ ಕಟ್ಟಡಕ್ಕೆ ನಯಾ ಪೈಸೆ ಹಣ ನೀಡದೆ ಅನ್ಯಾಯ, ಇದಕ್ಕೂ ಅನುದಾನ ಕೊಟ್ಟಿಲ್ಲ. ಹೆಸರಿಗೆ ಮಾತ್ರ ವಿ.ವಿ ಹಡಪದ ಅಪ್ಪಣ್ಣ ಪೀಠದ ಸ್ಥಾನಮಾನ ಕೊಡಲಾಗಿದೆ. ಪೂರಕ ಅಗತ್ಯತೆಗಳೇ ಒದಗಿಸಿಲ್ಲ, ಇನ್ನು ಈ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಲ್ಲಿ ಇರುವ ಬಸವಣ್ಣನವರ ಅರಿವಿನ ಮನೆಯ (ಗವಿ) ಪಕ್ಕದಲ್ಲಿ ಶರಣ ಹಡಪದ ಅಪ್ಪಣ್ಣ ನವರ ಅರಿವಿನ ಮನೆ ಇದೆ ಈ ಗವಿಯನ್ನು ಸಹ ಅಭಿವೃದ್ಧಿ ಪಡಿಸಲು ಬಿ.ಕೆ.ಡಿ ಬಿ ಗೇ ಸೇರ್ಪಡೆ ಮಾಡಿ ಎಂದು ಮನವಿ ಪತ್ರ ಸಲ್ಲಿಸಿದ್ದರು. ಈ ಸಮಾಜದ ಅಭಿವೃದ್ಧಿಯ ನಿರ್ಮಾಣವನ್ನು ಕಡೆಗಣಿಸಲಾಗಿದೆ, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನಲ್ಲಿ ಬರುವ ಶರಣ ಹಡಪದ ಅಪ್ಪಣ್ಣನವರ ಜನ್ಮಸ್ಥಳ ಮಸಬಿನಾಳ ಗ್ರಾಮ ಹಾಗೂ ಹಡಪದ ಲಿಂಗಮ್ಮ ನವರ ದೇಗಿನಾಳ ಗ್ರಾಮವನ್ನು ಅಭಿವೃದ್ಧಿ ಪಡಿಸಲು ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ ಸೇರಿಸಿಲು ನಿರಾಕರಣೆಯಾಗಿದೆ ಹಾಗೆಯೇ ಹಡಪದ ಅಪ್ಪಣ್ಣ ಸಮಾಜವನ್ನು ಎಸ್ ಸಿ ಗೆ ಅಥವಾ ಎಸ್ ಟಿ ಗೆ ಸೇರ್ಪಡೆ ಮಾಡಲು ಸಹ ಹಿಂದೇಟು ಹಾಕಿದೆ ಕಾಂಗ್ರೆಸ್ ಸರ್ಕಾರ.? ಈ ಹಡಪದ ಅಪ್ಪಣ್ಣ ಸಮಾಜದ ಕಾಯಕ ಬಂಧುಗಳಿಗೆ ಜಾತಿ ನಿಂದನೆ ಮಾಡುವ ವ್ಯಕ್ತಿಗಳಿಗೆ ಕಾನೂನು ಪ್ರಕಾರ “ಅಟ್ರಾಸಿಟಿ ‘ಕಾನೂನು ಜಾರಿಗೆ ತರಲು ಸಹ ಹಿಂದೇಟು ಹಾಕಿದರು. ಈ ಹಡಪದ ಅಪ್ಪಣ್ಣ ಸಮಾಜದ ಸರ್ವ ಅಭಿವೃದ್ಧಿ ಗೋಸ್ಕರ ಬೆಂಗಳೂರು ನಗರದಲ್ಲಿ ಸಹ ಸಮುದಾಯಕ್ಕೆ ನಿವೇಶನ ನೀಡದೇ ಅನ್ಯಾಯ.? ಈ ಹಡಪದ ಅಪ್ಪಣ್ಣ ಸಮಾಜದ ಅಭಿವೃದ್ಧಿಯ
ಸುಧಾರಣೆಗೂ ಹಣ ಒದಗಿಸಿಲ್ಲ ರಾಜ್ಯ ಕಾಂಗ್ರೆಸ್ ಸರ್ಕಾರ ? ಒಟ್ಟಿನಲ್ಲಿ ನಮ್ಮ ಸಮಾಜಕ್ಕೆ ಅನ್ಯಾಯ
ಮಾಡಲಾಗಿದೆ ಎಂದು ದೂರಿದ್ದಾರೆ. ಕೇಳಿದ್ದೂ, ನಿರ್ಲಕ್ಷಿಸಿ. ರಾಜ್ಯಾದ್ಯಂತ ಇರುವ ಸಮಸ್ತ ಹಡಪದ ಅಪ್ಪಣ್ಣ (ಕ್ಷೌರಿಕ) ಸಮಾಜಕ್ಕೆ ಅನ್ಯಾಯದ ಮೇಲೆ ಅನ್ಯಾಯವಾಗಿದೆ. ಮತ್ತು ಈ ಸಮಾಜದ ಬಹು ದಿನಗಳ ಹೋರಾಟದ ಫಲಕ್ಕೂ ಮತ್ತು ಈ ಸಮಾಜದ ಅಭಿವೃದ್ದಿಗೆ ಅನ್ಯಾಯ ಮುಂದುವರೆದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾನತೆಯ ಹರಿಕಾರ ಎಂಬುದು ಈಗ ನಮ್ಮ ಸಮಾಜದ ಮಟ್ಟಿಗೆ ಹುಸಿಯಾಗಿದೆ ಎಂದು ಟೀಕಿಸಿದ್ದಾರೆ.
- ಕರುನಾಡ ಕಂದ